Shakti Act: ಈ ರಾಜ್ಯದಲ್ಲಿ ಇನ್ಮುಂದೆ ಅತ್ಯಾಚಾರಿಗಳಿಗೆ ಮರಣದಂಡನೆ

ಮಹಿಳೆಯರು ಮತ್ತು ಹುಡುಗಿಯರ ಮೇಲೆ ಅತ್ಯಾಚಾರ ಎಸಗುವವರಿಗೆ ತಕ್ಕ ಶಿಕ್ಷೆ ನೀಡಲು ಈ ರಾಜ್ಯ ಸರ್ಕಾರ ಮುಂದಾಗಿದ್ದು ಅಂತಹ ಆರೋಪಿಗಳಿಗೆ ಈಗ ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆ ವಿಧಿಸಲಾಗುವುದು. 

Last Updated : Dec 10, 2020, 08:00 AM IST
  • ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಪರಿಚಯ
  • ಆಸಿಡ್ ದಾಳಿ ಸಂತ್ರಸ್ತರಿಗೆ 10 ಲಕ್ಷ ಪರಿಹಾರ
  • ಶಕ್ತಿ ಕಾಯ್ದೆಯಲ್ಲಿ ಆರೋಪಿಗಳ ವಿಚಾರಣೆಯನ್ನು 30 ದಿನಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ
Shakti Act: ಈ ರಾಜ್ಯದಲ್ಲಿ ಇನ್ಮುಂದೆ ಅತ್ಯಾಚಾರಿಗಳಿಗೆ ಮರಣದಂಡನೆ title=
File Image

ಮುಂಬೈ: ಸಮಾಜದಲ್ಲಿ ಬಾಲಕಿಯರು ಮತ್ತು ಮಹಿಳೆಯರ ಮೇಲೆ ಹೆಚ್ಚುತ್ತಿರುವ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದಂತಹ ಘಟನೆಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ ಹೊಸ ಕಾನೂನನ್ನು (Shakti Act) ಜಾರಿಗೆ ತರಲು ಹೊರಟಿದ್ದು, ಇದರಲ್ಲಿ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಲಾಗುವುದು. ಸದ್ಯ ಮಸೂದೆಯನ್ನು ಕ್ಯಾಬಿನೆಟ್ ಅಂಗೀಕರಿಸಿದ್ದು ಶೀಘ್ರದಲ್ಲೇ ಅದನ್ನು ವಿಧಾನಸಭೆಯಲ್ಲಿ ಪರಿಚಯಿಸಲಾಗುವುದು.

ಆಸಿಡ್ ದಾಳಿಯಲ್ಲಿ ಸಂತ್ರಸ್ತರಿಗೆ 10 ಲಕ್ಷ ಪರಿಹಾರ :
ಶಕ್ತಿ ಕಾಯ್ದೆ ಮಸೂದೆಯ ಕರಡನ್ನು ಕ್ಯಾಬಿನೆಟ್ ಅಂಗೀಕರಿಸಿದೆ ಎಂದು ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದರು. ಈ ಮಸೂದೆಯಲ್ಲಿ ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾದರೆ, ಆರೋಪಿಗಳಿಗೆ ಮರಣದಂಡನೆ (Death Penalty) ಅಥವಾ ಜೀವಾವಧಿ ಶಿಕ್ಷೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಈ ಕಾಯ್ದೆಯಲ್ಲಿ ಆಸಿಡ್ ದಾಳಿಗೆ ಒಳಗಾದವರಿಗೆ ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಚಿಕಿತ್ಸೆಗಾಗಿ 10 ಲಕ್ಷ ರೂ.ಗಳನ್ನು ನೀಡಲಾಗುವುದು ಮತ್ತು ಅಪರಾಧಿಗಳಿಗೆ ದಂಡವನ್ನು ಸಹ ವಿಧಿಸಲಾಗುತ್ತದೆ ಎಂದು ವಿವರಿಸಿದರು.

30 ದಿನಗಳೊಳಗೆ ವಿಚಾರಣೆ ಪೂರ್ಣ:
ಶಕ್ತಿ ಕಾಯ್ದೆಯಲ್ಲಿ ಆರೋಪಿಗಳ ವಿಚಾರಣೆಯನ್ನು 30 ದಿನಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ಈ ಕಾಯ್ದೆ (ಶಕ್ತಿ ಕಾಯ್ದೆ) ಅಡಿಯಲ್ಲಿ ಅತ್ಯಾಚಾರ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಲಾಗುವುದು ಮತ್ತು ಪೊಲೀಸರು 15 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು. ಅಂತಹ ಸಂದರ್ಭಗಳಲ್ಲಿ ವಿಚಾರಣೆಯನ್ನು ಗರಿಷ್ಠ 30 ದಿನಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ ಎಂದರು.

'ವ್ಯಕ್ತಿ ಅವನ ಪ್ರತಿಭೆಯಿಂದ ಶ್ರೇಷ್ಠನಾಗುತ್ತಾನೆ ಹೊರತು ಅವನ ಜಾತಿಯಿಂದಲ್ಲ- ನಿತಿನ್ ಗಡ್ಕರಿ

ಈ ಕಾಯ್ದೆ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಯಶೋಮತಿ ಠಾಕೂರ್ ಇದನ್ನು ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿದ್ದಾರೆ. ಈ ನಿರ್ಧಾರವು ರಾಜ್ಯದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಮೇಲೆ ಹಿಂಸಾಚಾರ ನಡೆಸುವವರಲ್ಲಿ ಭಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಡಿಸಿಎಂಗೆ 'ಖಡಕ್ ಎಚ್ಚರಿಕೆ' ನೀಡಿದ ಸಿಎಂ ಬಿಎಸ್‍ವೈ!

ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಪರಿಚಯಿಸಲಾಗುವುದು:
ಮಹಾರಾಷ್ಟ್ರ (Maharashtra) ವಿಧಾನಸಭೆಯ ಎರಡು ದಿನಗಳ ಚಳಿಗಾಲದ ಅಧಿವೇಶನ ಡಿಸೆಂಬರ್ 14 ರಿಂದ ಮುಂಬೈನಲ್ಲಿ ಪ್ರಾರಂಭವಾಗುತ್ತಿದೆ ಎಂದು ಅನಿಲ್ ದೇಶ್ಮುಖ್ ಹೇಳಿದರು. ಈ ಚಳಿಗಾಲದ ಅಧಿವೇಶನದಲ್ಲಿ ಈ 'ಶಕ್ತಿ ಕಾಯ್ದೆ' ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಪರಿಚಯಿಸಲಾಗುವುದು. ವಿಧಾನಸಭೆಯ ಉಭಯ ಸದನಗಳಲ್ಲಿ ಚರ್ಚೆ ಮತ್ತು ಅನುಮೋದನೆಯ ನಂತರ ಅದನ್ನು ರಾಜ್ಯಪಾಲರ ಸಹಿಗಾಗಿ ಕಳುಹಿಸಲಾಗುವುದು. ಅಲ್ಲಿಂದ ಅನುಮೋದನೆ ಪಡೆದ ನಂತರ ಈ ಕಾನೂನನ್ನು 'ಶಕ್ತಿ ಆಕ್ಟ್' ಎಂದು ಕರೆಯಲಾಗುತ್ತದೆ. ಸರ್ಕಾರದ ಈ ಮಹತ್ವದ ನಿರ್ಧಾರವು ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯನ್ನು ಖಚಿತಪಡಿಸುತ್ತದೆ ಎಂದು ಅನಿಲ್ ದೇಶ್ಮುಖ್ ಹೇಳಿದರು.

Trending News