ಮುಂಬೈ: ಪಾವತಿಗಳಿಗೆ ಸಂಬಂಧಿಸಿದ ಎಲ್ಲಾ ಡೇಟಾವನ್ನು ಭಾರತದಲ್ಲಿ ಮಾತ್ರ ಸಂಗ್ರಹಿಸಬೇಕು ಮತ್ತು ವಿದೇಶದಲ್ಲಿ ಸಂಸ್ಕರಿಸಿದ ಡೇಟಾವನ್ನು 24 ಗಂಟೆಗಳ ಒಳಗೆ ದೇಶಕ್ಕೆ ತರಬೇಕಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಬುಧವಾರ ತಿಳಿಸಿದೆ.
ಆರ್ಬಿಐ ತನ್ನ FAQ ಗಳಲ್ಲಿ ಪಾವತಿ ವ್ಯವಸ್ಥೆ ನಿರ್ವಾಹಕರು (ಪಿಎಸ್ಒಗಳು) ಎತ್ತಿದ ಕೆಲವು ಅನುಷ್ಠಾನ ಸಮಸ್ಯೆಗಳ ಕುರಿತು ವಿಚಾರವಾಗಿ ಪ್ರತಿಕ್ರಿಯಿಸುತ್ತಾ ಸಂಪೂರ್ಣ ಪಾವತಿ ಡೇಟಾವನ್ನು ಭಾರತದಲ್ಲಿ ಮಾತ್ರ ಸಂಗ್ರಹಿಸಲಾಗುವುದು ಹೇಳಿದೆ. 'ಪಾವತಿ ವ್ಯವಸ್ಥೆಯ ದತ್ತಾಂಶ ಸಂಗ್ರಹಣೆ' ಕುರಿತು ಆರ್ಬಿಐ 2018 ರ ಏಪ್ರಿಲ್ನಲ್ಲಿ ನಿರ್ದೇಶನ ನೀಡಿತ್ತು. ಆರು ತಿಂಗಳ ಅವಧಿಯಲ್ಲಿ, ಅವುಗಳು ನಿರ್ವಹಿಸುವ ಪಾವತಿ ವ್ಯವಸ್ಥೆಗಳಿಗೆ ಸಂಬಂಧಿಸಿದ ಸಂಪೂರ್ಣ ಡೇಟಾವನ್ನು ಭಾರತದಲ್ಲಿ ಮಾತ್ರ ವ್ಯವಸ್ಥೆಯಲ್ಲಿ ಸಂಗ್ರಹಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಇದು ಎಲ್ಲಾ ಸಿಸ್ಟಮ್ ಪೂರೈಕೆದಾರರಿಗೆ ಸಲಹೆ ನೀಡಿತ್ತು.
ಪಿಎಸ್ಒಗಳು ಬಯಸಿದಲ್ಲಿ ಭಾರತದ ಹೊರಗೆ ಪಾವತಿ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲು ಯಾವುದೇ ನಿರ್ಬಂಧವಿಲ್ಲ ಎಂದು FAQ ಗಳು ತಿಳಿಸಿವೆ. "ಆದಾಗ್ಯೂ, ಡೇಟಾವನ್ನು ಸಂಸ್ಕರಿಸಿದ ನಂತರ ಭಾರತದಲ್ಲಿ ಮಾತ್ರ ಸಂಗ್ರಹಿಸಲಾಗುತ್ತದೆ ಎಂದು ಆರ್ಬಿಐ ಹೇಳಿದೆ. ಒಂದು ವೇಳೆ ಡೇಟಾವನ್ನು ವಿದೇಶದಲ್ಲಿ ಸಂಸ್ಕರಿಸಿದರೆ ಅದನ್ನು ಅಳಿಸಬೇಕು, ಇಲ್ಲವಾದಲ್ಲಿ 24 ಗಂಟೆಗಳ ಒಳಗೆ ಭಾರತಕ್ಕೆ ಹಿಂತಿರುಗಿಸಬೇಕು ಎಂದು ಹೇಳಿದೆ. ಕಳೆದ ವಾರ, ಹಲವಾರು ಸ್ಥಳೀಯ ಇ-ಕಾಮರ್ಸ್ ಸಂಸ್ಥೆಗಳು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರೊಂದಿಗಿನ ಸಭೆಗಳಲ್ಲಿ ಡೇಟಾ ಸ್ಥಳೀಕರಣದ ವಿಷಯವನ್ನು ಎತ್ತಿದ ಹಿನ್ನಲೆಯಲ್ಲಿ ಈಗ ಆರ್ಬಿಐ ಹೇಳಿಕೆ ಬಂದಿದೆ.