ನವದೆಹಲಿ: ಹಸುಗಳನ್ನು ಕದ್ದ ಆರೋಪದ ಮೇಲೆ ಇಬ್ಬರು ದಲಿತರನ್ನು ಹಿಂದೂ ಯುವ ವಹಾನಿ ಕಾರ್ಯಕರ್ತರು ಇಲ್ಲಿನ ರಾಸ್ರಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಗಂಭೀರವಾಗಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ನಗರದಲ್ಲಿ ನಡೆದಿದೆ.
ಹಸುಗಳನ್ನು ಕದ್ದ ಆರೋಪದ ಮೇಲೆ ಐಪಿಸಿಯ ಸೆಕ್ಷನ್ 379 ಮತ್ತು 411 ಅಡಿಯಲ್ಲಿ ಪ್ರವೀಣ್ ಶ್ರೀವಾಸ್ತವ ದೂರು ದಾಖಲಿಸಿದ ನಂತರ ಇಬ್ಬರನ್ನು ಬಂಧಿಸಲಾಯಿತು. ಹಿಂದೂ ಯುವವಹಾನಿ ಕಾರ್ಯಕರ್ತರು ಸೋನುವಿನ ಹಾಗೂ ತನ್ನ ತಲೆ ಕೂದಲುಗಳನ್ನು ಕತ್ತರಿಸಿ ನಂತರ ರಸ್ರಾ ಪಟ್ಟಣದಲ್ಲಿ ಅವರ ಕುತ್ತಿಗೆಯ ಸುತ್ತ ಟೈರ್ ಮತ್ತು "ಹಮ್ ಗೈ ಚೋರ್ ಹೈ" (ನಾವು ಹಸುವಿನ ಕಳ್ಳರು) ಬರೆದು ಮೆರವಣಿಗೆ ಮಾಡಿದ್ದಾರೆ ಎಂದು ಉಮಾರಾಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ಉಮಾರಾಂ ಸೆಕ್ಷನ್ 342, 323 , 504 ಮತ್ತು 506 ಅಡಿಯಲ್ಲಿ 15 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ಅನ್ನು ಐಪಿಸಿ ಮತ್ತು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು (ದೌರ್ಜನ್ಯ ತಡೆಗಟ್ಟುವಿಕೆ) ಕಾಯಿದೆ ಅಡಿಯಲ್ಲಿ ಹಿಂದು ಯುವ ವಹಾನಿ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿದ್ದಾರೆ.
ಈ ವಿಷಯವನ್ನು ತನಿಖೆ ಮಾಡಲು ಉಪ ಎಸ್ಪಿ ಅವದೆಶ್ ಚೌಧರಿ ಅವರಿಗೆ ತಿಳಿಸಲಾಗಿದೆ ಎಂದು ಎಸ್ಪಿ ಅನಿಲ್ ಕುಮಾರ್ ತಿಳಿಸಿದ್ದಾರೆ.