ನವದೆಹಲಿ: ಎದೆ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಟಿಬೆಟಿಯನ್ ಧರ್ಮ ಗುರು ದಲೈ ಲಾಮಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.
1959ರಲ್ಲಿ ಚೀನಾ ಟಿಬೆಟ್ ಆಕ್ರಮಿಸಿ, ಗಡಿಪಾರು ಮಾಡಿದಾಗಿನಿಂದ ಭಾರತದ ಧರ್ಮಶಾಲಾದಲ್ಲಿ ನೆಲೆಸಿರುವ 83 ವರ್ಷ ವಯಸ್ಸಿನ ದಲೈ ಲಾಮಾ ಅವರನ್ನು ಮಂಗಳವಾರದಂದು ಎದೆ ಸೋಂಕಿನ ಕಾರಣಕ್ಕೆ ನವದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ದಲೈಲಾಮಾ ಅವರಿಗೆ ಮಂಗಳವಾರ ಬೆಳಗ್ಗೆ ಎದೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ದೆಹಲಿಗೆ ಕರೆತಂದೆವು. ಇಲ್ಲಿಗೆ ಬಂದ ಬಳಿಕ ವೈದ್ಯರು ಎದೆಯಲ್ಲಿ ಸೋಂಕು ಇರುವ ಬಗ್ಗೆ ವೈದ್ಯರು ತಿಳಿಸಿದರು. ಜನರ ಹಾರೈಕೆ, ಪ್ರಾರ್ಥನೆಯಿಂದಾಗಿ ಈಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಇನ್ನೂ ಎರಡು ಮೂರು ದಿನಗಳ ಕಾಲ್ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆದು, ಬಳಿಕ ಮರಳುವುದಾಗಿ ದಲೈ ಲಾಮಾ ಅವರ ಆಪ್ತ ಟ್ಸೆಟೆನ್ ಸಾಂದೂಪ್ ಚೋಯೆಕ್ಯಾಪಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.