Cyclone Tauktae: ತೌಕ್ತೆ ರೌದ್ರ ನರ್ತನ, ಕೊಂಕಣ್ ಬೆಲ್ಟ್ ನಲ್ಲಿ 6 ಜನರ ದುರ್ಮರಣ

Cyclone Tauktae: ಮಹಾರಾಷ್ಟ್ರದ ಕೊಂಕಣ್ ಕ್ಷೇತ್ರ ತೌಕ್ತೆ ಚಂಡಮಾರುತದ ರೌದ್ರ ನರ್ತನಕ್ಕೆ ನಲುಗಿ ಹೋಗಿದೆ. ಚಂಡಮಾರುತಕ್ಕೆ ಸಂಭವಿಸಿದ ವಿವಿಧ ಘಟನೆಗಳಲ್ಲಿ ಒಟ್ಟು ಆರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಮೂರು ನಾವಿಕರು ನಾಪತ್ತೆಯಾಗಿದ್ದಾರೆ.

Written by - Nitin Tabib | Last Updated : May 17, 2021, 09:07 PM IST
  • 'ತೌಕ್ತೆ' ಚಂಡಮಾರುತಕ್ಕೆ ತತ್ತರಿಸಿದ ಕೊಂಕಣ್ ಬೆಲ್ಟ್.
  • ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ಆರು ಜನರ ಸಾವು.
  • ಇನ್ನೂ ಮೂವರು ನಾಪತ್ತೆ, ಬಿರುಗಾಳಿಯ ರಭಸಕ್ಕೆ ಎರಡು ದೋಣಿಗಳು ಗುಳುಂ.
Cyclone Tauktae: ತೌಕ್ತೆ ರೌದ್ರ ನರ್ತನ,  ಕೊಂಕಣ್ ಬೆಲ್ಟ್ ನಲ್ಲಿ 6 ಜನರ ದುರ್ಮರಣ title=
Tauktae Havoc (File Photo)

Cyclone Tauktae Havoc - ಮಹಾರಾಷ್ಟ್ರದ ಕೊಂಕಣ್ ಕ್ಷೇತ್ರ (Konkan Belt) ತೌಕ್ತೆ ಚಂಡಮಾರುತದ ರೌದ್ರ ನರ್ತನಕ್ಕೆ ನಲುಗಿ ಹೋಗಿದೆ. 'ತೌಕ್ತೆ' ಚಂಡಮಾರುತಕ್ಕೆ ಸಂಬಂಧಿಸಿದ ಪ್ರತ್ಯೇಕ ಘಟನೆಗಳಲ್ಲಿ ಆರು ಜನರು ಸಾವನ್ನಪ್ಪಿದ್ದರೆ, ಮೂವರು ನಾವಿಕರು ಕಾಣೆಯಾಗಿದ್ದಾರೆ. ಈ ಕುರಿತು ಸೋಮವಾರ ಮಾಹಿತಿ ನೀಡಿರುವ ಅಧಿಕಾರಿಗಳು ಮೃತಪಟ್ಟವರಲ್ಲಿ ಮೂವರು ರಾಯ್ಗಡ್  (Raigad)ಜಿಲ್ಲೆಯವರಾಗಿದ್ದರೆ, ನವಿಮುಂಬೈ (Navi Mumbai) ಹಾಗೂ ಉಲ್ಲಾಸ್ ನಗರ್ (Ullas Nagar) ನಲ್ಲಿ ಮರಗಳು ಧರೆಗುರುಳಿ ಇಬ್ಬರು ಪ್ರಾಣಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

 ಈ ಕುರಿತು ಸರ್ಕಾರ ನೀಡಿರುವ ಹೇಳಿಕೆಯ ಪ್ರಕಾರ, ಸಿಂಧುದುರ್ಗ ಜಿಲ್ಲೆಯ ಆನಂದವಾಡಿ ಹಾರ್ಬರ್ ಮೇಲೆ ನಿಂತಿದ್ದ ಎರಡು ದೋಣಿಗಳು ಮುಳುಗಿಹೋಗಿದ್ದು, ಈ ಎರಡು ದೋಣಿಗಳಲ್ಲಿ ಏಳು ಜನರಿದ್ದರು ಎಂದು ಹೇಳಿದೆ.

ಈ ಏಳು ಜನರಲ್ಲಿ ಒಬ್ಬ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಿದ್ದು, ಆತ ಜಿಲ್ಲೆಯ ದೇವಗಡ್ ತಾಲೂಕಿನ ರಾಜಾರಾಮ್ ಕದಮ್ ಆಗಿದ್ದು, ಆತ ಮೃತಪಟ್ಟಿದ್ದಾನೆ ಹಾಗೂ ಮೂವರು ಕಾಣೆಯಾಗಿದ್ದಾರೆ. ಉಳಿದ ಮೂವರು ನಾವಿಕರನ್ನು ರಕ್ಷಿಸಲಾಗಿದೆ. 

ಇದನ್ನೂ ಓದಿ- Heavy Rain : ತೌಕ್ತೆ ಸೈಕ್ಲೋನ್ ಗೆ ತತ್ತರಿಸಿದ ಮುಂಬೈ : ವಾಣಿಜ್ಯ ನಗರಿಯಲ್ಲಿ ಭಾರೀ ಮಳೆ-ಗಾಳಿ..! 

ಸೋಮವಾರ ಮಧ್ಯಾಹ್ನದವರೆಗಿನ ಸ್ಥಿತಿಯ ಪ್ರಕಾರ, ರಾಯ್ಗಡ್ ನಲ್ಲಿ 1886 ಮನೆಗಳಿಗೆ ಸಣ್ಣ ಪ್ರಮಾಣದ ಹಾನಿಯುಂಟಾಗಿದ್ದರೆ, ಬಿರುಗಾಳಿಯ ರಭಸಕ್ಕೆ ಐದು ಮನೆಗಳು ಸಂಪೂರ್ಣ ನೆಲಕಚ್ಚಿವೆ. 

ಇದಕ್ಕೂ ಮೊದಲು ಹೇಳಿಕೆ ನೀಡಿರುವ ಸಚಿವೆ ಆದಿತಿ ತಟಕರೆ, ರಾಯಗಡ್ ನಲ್ಲಿ ಭೀಕರ ಚಂಡಮಾರುತದ ಹಿನ್ನೆಲೆ ಸುಮಾರು 2299 ಕುಟುಂಬಗಳನ್ನು (ಅಂದರೆ 8383 ಜನರನ್ನು) ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ- Cyclone Tauktae: 'ತೌಕ್ತೆ' ಚಂಡಮಾರುತ ಹಿನ್ನಲೆ ಮುಂಬಯಿಯಲ್ಲಿ ಇಂದೂ ಸ್ಥಗಿತಗೊಂಡ ವ್ಯಾಕ್ಸಿನೇಷನ್

ಅವರ ಹೇಳಿಕೆಯ ಪ್ರಕಾರ ಮದ್ಯಾಹ್ನ 2 ಗಂಟೆಯವರೆಗೆ ಜಿಲ್ಲೆಯಲ್ಲಿ ಸುಮಾರು 23.42 ಮಿ.ಮೀ ಮಳೆಯನ್ನು ದಾಖಲಿಸಲಾಗಿದೆ. ಭೀಕರ ಚಂಡಮಾರುತದ ಕಾರಣ ರಾಜ್ಯದ ಕೊಂಕಣ್ ಕ್ಷೇತ್ರದಲ್ಲಿ ಆಪಾರ ಸಂಖ್ಯೆಯಲ್ಲಿ ಗಿಡಗಳು ಧರೆಗುರುಳಿವೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.

ಇನ್ನೊಂದೆಡೆ ಚಂಡಮಾರುತದ ಹಾನಿಯ ಕುರಿತು ಮಾತನಾಡಿರುವ ಠಾಣೆ ಉಪಾಯುಕ್ತ ಶಿವಾಜಿ ಪಾಟೀಲ್, ನವಿಮುಂಬೈ ಹಾಗೂ ಉಲ್ಲಾಸ್ ನಗರ್ ನಲ್ಲಿ ಮರಗಳು ಉರುಲಿರುವ ಘಟನೆಗಳಲ್ಲಿ ಇಬ್ಬರು ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ. ಇನ್ನೊಂದೆಡೆ ಚಂಡಮಾರುತದ ಹಿನ್ನೆಲೆ ಪಾಲ್ಘರ್ ಜಿಲ್ಲ್ಲೆಯಲ್ಲಿ ರಾತ್ರಿ 8 ಗಂಟೆಯವರೆಗೆ ಅಲರ್ಟ್ ಜಾರಿಯಲ್ಲಿರಲಿದೆ ಎಂದು ಪಾಲ್ಘರ್ ಜಿಲ್ಲಾಧಿಕಾರಿ ಮಾಣಿಕ್ ಗುರಸಾಲ್ ಹೇಳಿದ್ದಾರೆ.

ಇದನ್ನೂ ಓದಿ- Rainfall Alert : ತೌಕ್ತೆ ಚಂಡಮಾರುತ ಪರಿಣಾಮ ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News