ಒಕ್ಹಿ ಚಂಡಮಾರುತ : 9 ಸಾವು, 80 ಮೀನುಗಾರರು ನಾಪತ್ತೆ, ರಕ್ಷಣಾ ಕಾರ್ಯ ಆರಂಭ

ತಮಿಳುನಾಡು ಮತ್ತು ಕೇರಳದ ಕರಾವಳಿ ಪ್ರದೇಶಗಳಲ್ಲಿ ಬೀಳುತ್ತಿರುವ ಭಾರಿ ಮಳೆಗೆ 9 ಮಂದಿ ಬಲಿಯಾಗಿದ್ದು, 80 ಕ್ಕೂ ಹೆಚ್ಚು ಮೀನುಗಾರರು ಮತ್ತು 50 ದೋಣಿಗಳು ಕಾಣೆಯಾಗಿವೆ.

Last Updated : Dec 1, 2017, 11:45 AM IST
  • ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ
  • ಚೆನ್ನೈ, ಕನ್ಯಾಕುಮಾರಿ, ಟುಟಿಕೋರ್ನ್, ಕಾಂಚೀಪುರಂ, ವಿಲ್ಲುಪುರಂ, ಮಧುರೈ, ಥೇಣಿ, ತಂಜಾವೂರ್ ಮತ್ತು ತಿರುವರೂರ್ ಶಾಲೆಗಳಿಗೂ ರಜೆ ಘೋಷಿಸಲಾಗಿದೆ. ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ
  • ಭಾರಿ ಮಳೆಯಿಂದಾಗಿ ಭುಉಕುಸಿತವಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ
ಒಕ್ಹಿ ಚಂಡಮಾರುತ : 9 ಸಾವು, 80 ಮೀನುಗಾರರು ನಾಪತ್ತೆ, ರಕ್ಷಣಾ ಕಾರ್ಯ ಆರಂಭ  title=

ಚೆನ್ನೈ: ಒಕ್ಹಿ ಚಂಡಮಾರುತದಿಂದಾಗಿ ತಮಿಳುನಾಡು ಮತ್ತು ಕೇರಳದ ಕರಾವಳಿ ಪ್ರದೇಶಗಳಲ್ಲಿ ಬೀಳುತ್ತಿರುವ ಭಾರಿ ಮಳೆಗೆ 9 ಮಂದಿ ಬಲಿಯಾಗಿದ್ದು, 80 ಕ್ಕೂ ಹೆಚ್ಚು ಮೀನುಗಾರರು ಮತ್ತು 50 ದೋಣಿಗಳು ಕಾಣೆಯಾಗಿವೆ.

ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಜಿಲ್ಲಾಧಿಕಾರಿ ನಗರದಾದ್ಯಂತ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. 

ಇದರೊಂದಿಗೆ ಕನ್ಯಾಕುಮಾರಿ, ಟುಟಿಕೋರ್ನ್, ಕಾಂಚೀಪುರಂ, ವಿಲ್ಲುಪುರಂ, ಮಧುರೈ, ಥೇಣಿ, ತಂಜಾವೂರ್ ಮತ್ತು ತಿರುವರೂರ್ ಶಾಲೆಗಳಿಗೂ ರಜೆ ಘೋಷಿಸಲಾಗಿದೆ. ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸುವುದರೊಂದಿಗೆ, ಜನರಿಗೆ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಿರುವ ಅಧಿಕಾರಿಗಳು ಮಳೆ ಅನಾಹುತವನ್ನು ತಡೆಯಲು ಬಹಳಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈಗಾಗಲೇ ಪರಿಹಾರ ಮತ್ತು ರಕ್ಷಣಾ ತಂಡಗಳು ಕಡಲ ತೀರಗಳಲ್ಲಿ ಧಾವಿಸಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಹೋಗದಂತೆ ಸೂಚನೆಯನ್ನೂ ನೀಡಲಾಗಿದೆ. 

ಚಂಡಮಾರುತದಿಂದಾಗಿ ಕಾಣೆಯಾದ ಆರು ಮೀನುಗಾರಿಕಾ ದೋಣಿಗಳು ಮತ್ತು ವಿಹಾರಂನ ಬಳಿ ಕಾಣೆಯಾದ ಒಂದು ಕಡಲ ಎಂಜಿನಿಯರಿಂಗ್ ಹಡಗನ್ನು ಪತ್ತೆಹಚ್ಚಲು ಭಾರತೀಯ ನೌಕಾಪಡೆ ಮೂರು ಹಡಗುಗಳು ಮತ್ತು ಎರಡು ವಿಮಾನಗಳನ್ನು ಕೇರಳ ಮತ್ತು ತಮಿಳುನಾಡಿನ ದಕ್ಷಿಣ ಜಿಲ್ಲೆಗಳ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಗಿಸಲಾಗಿದೆ.

ಕೊಚ್ಚಿಯಿಂದ 5 ನೌಕಾಪಡೆ ಹಡಗುಗಳು, ಲಕ್ಷದ್ವೀಪದಲ್ಲಿ ಎರಡು ಹಡಗುಗಳು, ಭಾರತೀಯ ಕೋಸ್ಟ್ ಗಾರ್ಡ್ಗೆ ಸೇರಿದ ಎರಡು ಹಡಗುಗಳನ್ನು ಕೊಚ್ಚಿ ಮತ್ತು ಟೂಟಿಕೊರಿನ್ಗಳಿಂದ ನಿಯೋಜಿಸಲಾಗಿದೆ.ಒಂದು P8i ವಿಮಾನ, ನೌಕಾಪಡೆ ಡಾರ್ನಿಯರ್ ಮತ್ತು ಕೋಸ್ಟ್ ಗಾರ್ಡ್ ಡಾರ್ನಿಯರ್ರನ್ನು ಸಹ ಶೋಧ ಮತ್ತು ಪಾರುಗಾಣಿಕಾ ಕೆಲಸಕ್ಕೆ ನಿಯೋಜಿಸಲಾಗಿದೇ. ಇದಲ್ಲದೆ, ನೌಕಾಪಡೆ ಹೆಲಿಕಾಪ್ಟರ್ ಕೂಡಾ ಸ್ಟ್ಯಾಂಡ್ಬೈನಲ್ಲಿದೆ.

ಈ ನಡುವೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್ಡಿಎಂಎ) ಹೆಚ್ಚು-ತೊಂದರೆಗೊಳಗಾದ ಪ್ರದೇಶಗಳಲ್ಲಿ ಜನರಿಗೆ ಮಾಡಬೇಕಾದ ಮತ್ತು ಮಾಡಬಾರದ ಕಾರ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಮತ್ತು ಅಂತಹ ಸಂದರ್ಭಗಳಲ್ಲಿ ಯಾವುದೀ ರೀತಿ ಗೊಂದಲಕ್ಕೆ ಒಳಗಾಗದಂತೆ ತಿಳಿಸಿದೆ. ಹವಾಮಾನದ ಕುರಿತಾದ ವಿವರಗಳಿಗೆ ರೇಡಿಯೊವನ್ನು ಕೇಳಲು, ದೂರದರ್ಶನವನ್ನು ವೀಕ್ಷಿಸಲು ತಿಳಿಸಿದ್ದು, ತುರ್ತು ಪರಿಸ್ಥಿತಿ ಒದಗಿಬಂದಲ್ಲಿ ಕಿಟ್ ಸಿದ್ಧಪಡಿಸಿಕೊಳ್ಳಲು ತಿಳಿಸಿದೆ. 

 

Trending News