Crazy Video: ಕರಾಟೆ ಅಭ್ಯಾಸ ಮಾಡುತ್ತಿದ್ದ ಮಾಸ್ಟರ್ ಮೇಲೆ ದೊಡ್ಡ ಕಲ್ಲು ಎಸೆದ ವ್ಯಕ್ತಿ, ಮುಂದೆ...

Crazy Video: ವೈರಲ್ ಆಗಿರುವ ಈ ವಿಡಿಯೋದಲ್ಲಿ ಕರಾಟೆ ಪಟು ಒಬ್ಬರು ಗಾರ್ಡನ್‌ನಲ್ಲಿ ಕರಾಟೆ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು. ಆಗ ಇನ್ನೊಬ್ಬ ವ್ಯಕ್ತಿ ತನ್ನ ಕೈಯಲ್ಲಿ ಫುಟ್ಬಾಲ್ ಗಾತ್ರದ ದೊಡ್ಡ ಕಲ್ಲನ್ನು ಎತ್ತುತ್ತಾನೆ.  

Written by - Yashaswini V | Last Updated : Jan 14, 2022, 02:34 PM IST
  • ವೀಡಿಯೋದಲ್ಲಿ ಕರಾಟೆ ಪಟುಗಳಿಗೆ ಕರಾಟೆ ಕಲಿಸುವ ವ್ಯಕ್ತಿಯೊಬ್ಬರಿಗೆ ಹಿಂದಿನಿಂದ ಚೆಂಡಿನ ಗಾತ್ರದ ಕಲ್ಲೊಂದು ಬಡಿದಿರುವುದನ್ನು ಕಾಣಬಹುದು
  • ವಿಚಿತ್ರವೆಂದರೆ ಕಲ್ಲನ್ನು ಹೊಡೆದ ನಂತರವೂ, ಆ ವ್ಯಕ್ತಿಯು ಓಡಿಹೋಗುವುದಿಲ್ಲ
  • ಬದಲಿಗೆ ಅವನು ಅಲ್ಲೇ ನಿಂತು ಕರಾಟೆ ಮಾಸ್ಟರ್ ಜೊತೆ ವಾದವನ್ನು ಪ್ರಾರಂಭಿಸುತ್ತಾನೆ
Crazy Video: ಕರಾಟೆ ಅಭ್ಯಾಸ ಮಾಡುತ್ತಿದ್ದ ಮಾಸ್ಟರ್ ಮೇಲೆ ದೊಡ್ಡ ಕಲ್ಲು ಎಸೆದ ವ್ಯಕ್ತಿ, ಮುಂದೆ... title=
Crazy Video trending

Crazy Video: ಯಾವುದೇ ಒಂದು ಘಟನೆ ನಡೆಯಲು ಹಲವು ಬಾರಿ ಅದು ಸ್ಥಳ ಮತ್ತು ಸಮಯವನ್ನು ಅವಲಂಬಿಸಿರುವುದಿಲ್ಲ. ಇಂತಹ ಹಲವು ವಿಡಿಯೋಗಳನ್ನು ನಾವು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿರುತ್ತೇವೆ. ಕೆಲವೊಮ್ಮೆ ಚೇಷ್ಟೆಗಳ ನಡುವೆಯೂ ಜನರು ಏನಾದರು ಒಂದು ಎಡವಟ್ಟು ಮಾಡುತ್ತಾರೆ. ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಗಮನ ಸೆಳೆಯುತ್ತಿದೆ. 

ವೀಡಿಯೋದಲ್ಲಿ (Viral Video) ಕರಾಟೆ ಪಟುಗಳಿಗೆ ಕರಾಟೆ ಕಲಿಸುವ ವ್ಯಕ್ತಿಯೊಬ್ಬರಿಗೆ ಹಿಂದಿನಿಂದ ಚೆಂಡಿನ ಗಾತ್ರದ ಕಲ್ಲೊಂದು ಬಡಿದಿರುವುದನ್ನು ಕಾಣಬಹುದು. ವಿಚಿತ್ರವೆಂದರೆ ಕಲ್ಲನ್ನು ಹೊಡೆದ ನಂತರವೂ, ಆ ವ್ಯಕ್ತಿಯು ಓಡಿಹೋಗುವುದಿಲ್ಲ, ಬದಲಿಗೆ ಅವನು ಅಲ್ಲೇ ನಿಂತು ಕರಾಟೆ ಮಾಸ್ಟರ್ ಜೊತೆ ವಾದವನ್ನು ಪ್ರಾರಂಭಿಸುತ್ತಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಇದನ್ನೂ ಓದಿ- Viral Video: ಬೀದಿ ಬೀದಿಗಳಲ್ಲಿ ಕಡೆಲೆಕಾಯಿ ಮಾರಾಟಕ್ಕಿಳಿದ ಸ್ಟಾರ್ ಕ್ರಿಕೆಟರ್..!

ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕರಾಟೆ ಪಟುಯೊಬ್ಬರು ತೋಟದಲ್ಲಿ ಕರಾಟೆ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು. ಆಗ ಇನ್ನೊಬ್ಬ ವ್ಯಕ್ತಿ ತನ್ನ ಕೈಯಲ್ಲಿ ಫುಟ್ಬಾಲ್ ಗಾತ್ರದ ದೊಡ್ಡ ಕಲ್ಲನ್ನು ಎತ್ತುತ್ತಾನೆ. ನೋಡು ನೋಡುತ್ತಲೇ ಆ ವ್ಯಕ್ತಿ ಕರಾಟೆ ಮಾಸ್ಟರ್ ಬೆನ್ನಿಗೆ ಕಲ್ಲನ್ನು ಹೊಡೆದನು. ಕರಾಟೆ ಪಟುವಿಗೆ ತನಗೆ ಏನಾಯಿತು ಎಂದು ಸಂಪೂರ್ಣವಾಗಿ ತಿಳಿಯಲು ಕೆಲ ಕ್ಷಣಗಳು ಬೇಕಾಯಿತು. ಅಷ್ಟರಲ್ಲಿ ಅವನು ತುಂಬಾ ನೋವು ಅನುಭವಿಸುತ್ತಿರುವಂತೆ ಕಾಣುತ್ತಾನೆ. ಮಾಸ್ಟರ್ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ಓಡಿಹೋಗದೆ ಮಾಸ್ಟರ್ ಬಳಿಗೆ ಹೋಗಿ ಆತನೊಂದಿಗೆ ಏನೋ ಹೇಳುತ್ತಿರುವುದು ಕಂಡು ಬಂದಿದೆ. 

ವೀಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ- Accindent Viral Video: ಸಾವಿನ ಬಾಯಿಗೆ ಬಂದ ವ್ಯಕ್ತಿ 'ಯಮರಾಜ'ನಿಂದ ತಪ್ಪಿಸಿಕೊಂಡಿದ್ದು ಹೀಗೆ!

ಈ ವೀಡಿಯೊವನ್ನು ಬೆಸ್ಟ್ ವೀಡಿಯೋಸ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಇದುವರೆಗೆ 4 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ 13 ಸೆಕೆಂಡುಗಳ ವೀಡಿಯೊ ಕ್ಲಿಪ್ 365 ಕ್ಕೂ ಹೆಚ್ಚು ಬಾರಿ ರೀಟ್ವೀಟ್‌ಗಳನ್ನು ಮಾಡಲಾಗಿದೆ ಮತ್ತು 1600 ಕ್ಕೂ ಹೆಚ್ಚು ಲೈಕ್ಸ್ ಗಳನ್ನು ಪಡೆದುಕೊಂಡಿದೆ. ವೈರಲ್ ಆದ ವೀಡಿಯೊವನ್ನು ನೋಡಿದ ನಂತರ, ಜನರು ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್‌ಗಳ ಮೂಲಕ ನೀಡುವುದರಲ್ಲಿ ನಿರತರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News