Viral video: ಕಾಡು ಪ್ರಾಣಿಗಳ ಬಗ್ಗೆ ನಾವು ಎಷ್ಟು ಜಾಗರೂಕರಾಗಿದ್ದರೂ ಕೂಡ ಸಾಲದು, ಅದರಲ್ಲೂ ವಿಶೇಷವಾಗಿ ಹಾವುಗಳ ವಿಷಯದಲ್ಲಿ ಮಾತ್ರ ನಾವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಲೇ ಬಾರದು. ಹಾವು ತುಂಬಾ ಅಪಾಯಕಾರಿ, ಈ ಹೆಸರು ಕೇಳುತ್ತಿದ್ದಂತೆ ನಮ್ಮ ಎದೆ ಢವ ಢವ ಅಂತಾ ಜೋರಾಗಿ ಹೊಡೆದುಕೊಳ್ಳೋಕೆ ಶುರುಮಾಡುತ್ತೆ, ಇನ್ನೂ ಇದು ಕಣ್ಣು ಮುಂದೆ ಕಾಣಿಸಿಕೊಂಡುಬಿಟ್ಟರಂತೂ ನಾವು ಕಾಲ್ಕಿತ್ತೋದು ಗ್ಯಾರಂಟಿ.
ನಮಗೆ ನಿಮಗೆ ಹಾವುಗಳೆಂದರೆ ಭಯ ಇರಬಹುದು, ಆದರೆ ಕೆಲವರಿಗೆ ಈ ವಿಷಕಾರಿ ಹಾವುಗಳನ್ನು ನೋಡಿದರೆ ಸ್ವಲ್ಪ ಕೂಡ ಭಯ ಇರುವುದಿಲ್ಲ, ಇನ್ನೂ ಕೆಲವರಂತರೂ ವಿಡಿಯೋ ಮಾಡಿ ಫೇಮಸ್ ಆಗುವ ಕಾರಣಕ್ಕಾಗಿ ಈ ವಿಷಕಾತರಿ ಸರ್ಪಗಳ ಜೊತೆಗೆ ಆಟಕ್ಕೆ ಇಳಿಯುತ್ತಾರೆ, ಆದರೆ ಅನಿರೀಕ್ಷಿತ ಸಂದರ್ಭದಲ್ಲಿ ಇಂತಹ ಜನರು ತಮ್ಮ ಪ್ರಾಣ ಕಳೆದುಕೊಂಡ ಅದೆಷ್ಟೋ ಉದಹಾರಣೆಗಳು ಕೂಡ ಇದೆ. ಇತ್ತೀಚೆಗೆ ಯುವಕನೊಬ್ಬ ಇಂತಹದ್ದೆ ಸಾಹಸಕ್ಕೆ ಕೈ ಹಾಕಿದ್ದಾನೆ, ಹಾವಿನೊಂದಿಗೆ ಚೆಲ್ಲಾಟವಾಡಲು ಹೋಗಿ ಅದರ ಕೈಯಲ್ಲಿ ಕಚ್ಚಿಸಿಕೊಂಡಿದ್ದಾನೆ.
ಕ್ಷಣಿಕ ಘಟನೆಗಳು ಜೀವ ತೆಗೆಯಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಇಂಡೋನೇಷ್ಯಾದ ಸೋಷಿಯಲ್ ಮಿಡಿಯಾ ಇನ್ಫ್ಯುಎನ್ಸರ್, ಅವರನ್ನು ಹಾವು ಕಚ್ಚಿರುವ ವಿಡಿಯೋ ಇದೀಗ ಸಾಮಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹಾವುಗಳಿಗೆ ಹೆಸರಾದ ಅಂಗಾರ ಅವರ ಈ ವಿಡಿಯೋ ಇದೀಗ ಸಂಚಲನ ಮೂಡಿಸುತ್ತಿದೆ. ಅಂಗಾರ ಮಾಡಿದ ಈ ರಿಸ್ಕಿ ಸ್ಟಂಟ್ ಎಲ್ಲರಲ್ಲೂ ಭಯ ಹುಟ್ಟಿಸಿದೆ. ವಿಡಿಯೋದಲ್ಲಿ ಹಾವು ತನ್ನ ಖಾಸಗಿ ಭಾಗಕ್ಕೆ ಕಚ್ಚುತ್ತಿದೆ. ಆದರೆ ಹಾವು ತನ್ನ ಭಾಗಕ್ಕೆ ಬಿಗಿ ಹಿಡಿದು ಎಳೆದರೂ ಬಿಡಲಿಲ್ಲ.
ಈ ವಿಡಿಯೋಗೆ ನೆಟಿಜನ್ಗಳು ಕಾಮೆಂಟ್ ಮಾಡುತ್ತಿದ್ದಾರೆ. ಹಾವುಗಳ ಕೋರೆಹಲ್ಲುಗಳಲ್ಲಿ ವಿಷವಿರುತ್ತದೆ. ಹಾವು ಕಚ್ಚಿದರೆ ಉಳಿಗಾಲವಿಲ್ಲ. ಇಂತಹ ಸಾಹಸಗಳನ್ನು ಮಾಡಬಾರದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ಹಾವು ಮ್ಯಾಂಗ್ರೋವ್ ಜಾತಿಯಾಗಿರಬಹುದು ಎನ್ನುತ್ತಾರೆ. ಈ ವಿಡಿಯೋದಲ್ಲಿ ಹಾವು ಹಳದಿ ಮತ್ತು ಕಪ್ಪು ಬಣ್ಣದಲ್ಲಿದೆ. ಮ್ಯಾಂಗ್ರೋವ್ಗಳನ್ನು ಸ್ವಲ್ಪ ವಿಷಕಾರಿ ಎಂದು ಪರಿಗಣಿಸಲಾಗುತ್ತದೆ.
ಅಂಗಾರ ಶೋಜಿ ಅವರು Instagram ನಲ್ಲಿ 3.5 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಅವರ YouTube ಚಾನಲ್ 45,000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ. ತನ್ನ ಸಾಹಸಮಯ ವೀಡಿಯೊಗಳೊಂದಿಗೆ, ಪ್ರೇಕ್ಷಕರನ್ನು ಆಕರ್ಷಿಸಲು ಅವರು ವೀಡಿಯೊಗಳನ್ನು ಮಾಡುತ್ತಾರೆ. ಇದನ್ನು ಕಂಡು ಜನ ಕಂಗಾಲಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ