COVID-19 Update: ಮುಂದಿನ 40 ದಿನಗಳು ಭಾರತಕ್ಕೆ ನಿರ್ಣಾಯಕ, ತಜ್ಞರ ವಾರ್ನಿಂಗ್!

COVID-19 Update: ಭಾರತದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳವಾಗುತ್ತಿರುವ ಹಿನ್ನೆಲೆ ಮುಂದಿನ ಕೆಲವು ದಿನಗಳು ದೇಶಕ್ಕೆ ನಿರ್ಣಾಯಕವಾಗಲಿದೆ ಎಂದು ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Written by - Puttaraj K Alur | Last Updated : Dec 29, 2022, 07:56 AM IST
  • ಭಾರತ ಸೇರಿದಂತೆ ಹಲವು ದೇಶಗಳಿಗೆ ಕೋವಿಡ್‌-19ನ ಬಿಎಫ್‌. 7 ರೂಪಾಂತರಿ ವೈರಸ್‌ ಭೀತಿ
  • ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆ ಮುಂದಿನ 40 ದಿನ ಭಾರತಕ್ಕೆ ನಿರ್ಣಾಯಕ
  • ಕೋವಿಡ್-19 ಪರಿಸ್ಥಿತಿ ಮತ್ತು ಸಿದ್ಧತೆಯ ಕುರಿತು ರಾಜ್ಯ ಸರ್ಕಾರಗಳಿಗೆ ಕೇಂದ್ರದ ಸೂಚನೆ
COVID-19 Update: ಮುಂದಿನ 40 ದಿನಗಳು ಭಾರತಕ್ಕೆ ನಿರ್ಣಾಯಕ, ತಜ್ಞರ ವಾರ್ನಿಂಗ್! title=
COVID-19 Updates

ನವದೆಹಲಿ: ಕೋವಿಡ್‌-19ನ ಬಿಎಫ್‌. 7 ರೂಪಾಂತರಿ ವೈರಸ್‌ ಭೀತಿಯಿಂದ ಭಾರತವೂ ಸೇರಿ ಎಲ್ಲಾ ದೇಶಗಳಲ್ಲಿ ಹೈ ಅಲರ್ಟ್‌ ಘೋಷಿಸಿದೆ. ಬೇರೆ ಯಾವುದೇ ಕೋವಿಡ್ ಅಲೆ ಇಲ್ಲವೆಂದು ತಜ್ಞರು ಸೂಚಿಸಿದ್ದರೂ, ಹೆಚ್ಚುತ್ತಿರುವ ಪ್ರಕರಣಗಳಿಂದ ಭಯ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಮುಂದಿನ 40 ದಿನಗಳು ಭಾರತಕ್ಕೆ ನಿರ್ಣಾಯಕವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಭಾರತದಲ್ಲಿ ಜನವರಿ ಮಧ್ಯದಲ್ಲಿ COVID-19 ಪ್ರಕರಣ ಉಲ್ಬಣಗೊಂಡಿರುವುದು ಹಿಂದಿನ ಟ್ರೆಂಡ್‌ಗಳಿಂದ ಕಂಡುಬಂದಿದೆ. ಕಳೆದ ಕೆಲವು ದಿನಗಳಲ್ಲಿ ಭಾರತಕ್ಕೆ ಆಗಮಿಸಿದ ಕೆಲವು ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಕೋವಿಡ್ ದೃಢಪಟ್ಟಿದೆ. ಹೀಗಾಗಿ ದೇಶದಲ್ಲಿ ಮುಂಜಾಗೃತಾ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ, ಕೋವಿಡ್-19 ಪರಿಸ್ಥಿತಿ ಮತ್ತು ಸಿದ್ಧತೆಯ ಕುರಿತು ರಾಜ್ಯ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 'ಟೆಸ್ಟ್-ಟ್ರ್ಯಾಕ್-ಟ್ರೀಟ್ & ವ್ಯಾಕ್ಸಿನೇಷನ್' ಮೇಲೆ ಕೇಂದ್ರೀಕರಿಸಲು ನಿರ್ದೇಶಿಸಲಾಗಿದೆ.

ಇದನ್ನೂ ಓದಿ: Railway Rules: ರೈಲಿನಲ್ಲಿ ಪ್ರಯಾಣಿಸುವ ಮಹಿಳಾ ಯಾತ್ರಿಗಳಿಗೆ ಸಂತಸದ ಸುದ್ದಿ

ಚೀನಾ, ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್, ಬ್ರೆಜಿಲ್‌ನಂತಹ ದೇಶಗಳಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾದ ನಂತರ ದೇಶದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಈ ಸಲಹೆ ನೀಡಲಾಗಿದೆ.   

ಭಾರತದಲ್ಲಿ ಕೊರೊನಾ ಅಪ್‌ಡೇಟ್!   

  • ವರದಿಯ ಪ್ರಕಾರ, ರಾಷ್ಟ್ರೀಯ ಬಂಡವಾಳವು 60+ ವಯಸ್ಸಿನವರಿಗೆ ಲಭ್ಯವಿರುವ ಉಚಿತ-ವೆಚ್ಚದ COVID ಬೂಸ್ಟರ್ ಲಸಿಕೆಗಳನ್ನು ಮೀರಿದೆಯಂತೆ. 386.25 ರೂ. ಬೆಲೆಯ ಖಾಸಗಿ ಆಸ್ಪತ್ರೆಗಳಲ್ಲಿ ನೀಡಿದ ಕೊರೊನಾ ಲಸಿಕೆಗಳು ಮುಂದಿನ ಕೆಲವು ದಿನಗಳಲ್ಲಿ ಲಭ್ಯವಿರುತ್ತವೆ. ಜನರು ಹಣ ಪಾವತಿಸಿ ಈ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ.    
  • ಕಳೆದ ವಾರ ಪ್ರತಿರಕ್ಷಣೆ ಕಾರ್ಯಕ್ರಮದ ಭಾಗವಾಗಿ ಅನುಮೋದಿಸಲಾದ ಭಾರತ್ ಬಯೋಟೆಕ್‌ನ ಇಂಟ್ರಾನಾಸಲ್ ಲಸಿಕೆ ಕುರಿತು ಹೇಳುವುದಾದರೆ, ಖಾಸಗಿ ಆಸ್ಪತ್ರೆಗಳಿಗೆ ಸರಕು ಮತ್ತು ಸೇವಾ ತೆರಿಗೆ(GST) ಹೊರತುಪಡಿಸಿ iNCOVACCನ 1 ಡೋಸ್‍ಗೆ 800 ರೂ.ಇದೆ. ಇದಕ್ಕಾಗಿ ಸ್ಲಾಟ್‌ಗಳನ್ನು ಈಗ CoWin ಪೋರ್ಟಲ್‌ನಲ್ಲಿ ಬುಕ್ ಮಾಡಬಹುದು.
  • ಜನವರಿ 4ನೇ ವಾರದಿಂದ ಮೂಗಿನ ಮೂಲಕ ನೀಡುವ ಕೊರೊನಾ ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗಲಿದೆ
  • ಕಳೆದ 3 ದಿನಗಳಲ್ಲಿ ಕೊರೊನಾ ಪ್ರಕರಣಗಳಲ್ಲಿ ಶೇ.32ರಷ್ಟು ಏರಿಕೆ ಕಂಡಿದ್ದರಿಂದ ಮುಂಬೈನಲ್ಲಿ BMC ಹೈ ಅಲರ್ಟ್ ಆಗಿದೆ.
  • ತಮಿಳುನಾಡಿನಲ್ಲಿ 4 ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ದುಬೈನಿಂದ ಬಂದ ಇಬ್ಬರಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪಾಸಿಟಿವ್ ಬಂದಿದ್ದು, ತಾಯಿ-ಮಗಳು ಇಬ್ಬರು ಚೀನಾದಿಂದ ಶ್ರೀಲಂಕಾ ಮಾರ್ಗವಾಗಿ ಭಾರತಕ್ಕೆ ಆಗಮಿಸಿದ್ದರು.

ಇದನ್ನೂ ಓದಿ: Modi Mother Health : ಹೀರಾಬೆನ್ ಮೋದಿ ಆಸ್ಪತ್ರೆಗೆ ದಾಖಲು.. ಅಮ್ಮನನ್ನು ನೋಡಲು ಆಸ್ಪತ್ರೆ ಬಂದ ಪ್ರಧಾನಿ ಮೋದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News