Covid-19 Rule Violation: ಸಾಕು ನಾಯಿಯ ಹುಟ್ಟುಹಬ್ಬಕ್ಕೆ 7 ಲಕ್ಷ ವೆಚ್ಚ, ಕೊವಿಡ್ ನಿಯಮ ಉಲ್ಲಂಘನೆ ಹಿನ್ನೆಲೆ ಮೂವರ ಬಂಧನ

Covid-19 Rule Violation: ಗುಜರಾತ್ ನ (Gujrat) ಅಹಮದಾಬಾದ್‌ನಲ್ಲಿ (Ahmedabad) ಕುಟುಂಬವೊಂದು ತನ್ನ ಸಾಕು ನಾಯಿಯ ಹುಟ್ಟುಹಬ್ಬ (Pet Dog Birthday Celebration) ಆಚರಿಸಲು ದೊಡ್ಡ ಔತಣಕೂದವನ್ನೇ ಆಯೋಜಿಸಿದೆ. ಈ ಸಮಾರಂಭಕ್ಕೆ ಆಗಮಿಸಿದ ಜನರು ಕೋವಿಡ್-19 ನಿಯಮಗಳನ್ನು(Covid-19 Rules) ಉಲ್ಲಂಘಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರು ಸಹೋದರರು ಸೇರಿದಂತೆ ಒಟ್ಟು ಮೂವರನ್ನು ಬಂಧಿಸಿದ್ದಾರೆ.

Written by - Nitin Tabib | Last Updated : Jan 8, 2022, 08:30 PM IST
  • ಸಾಕುನಾಯಿಯ ಹುಟ್ಟುಹಬ್ಬಕ್ಕೆ ಔತಣಕೂಟ
  • ಕೊವಿಡ್-19 ನಿಯಮಗಳನ್ನು ಗಾಳಿಗೆ ತೂರಿದ ಗುಜರಾತ್ ಕುಟುಂಬ
  • ಮೂವರ ವಿರುದ್ಧ FIR ದಾಖಲು, ಬಂಧನ.
Covid-19 Rule Violation: ಸಾಕು ನಾಯಿಯ ಹುಟ್ಟುಹಬ್ಬಕ್ಕೆ 7 ಲಕ್ಷ ವೆಚ್ಚ, ಕೊವಿಡ್ ನಿಯಮ ಉಲ್ಲಂಘನೆ ಹಿನ್ನೆಲೆ ಮೂವರ ಬಂಧನ title=
Covid-19 Rule Violation (File Photo)

ಅಹಮದಾಬಾದ್: ಒಮಿಕ್ರಾನ್ (Omicron) ರೂಪಾಂತರದಿಂದಾಗಿ ದೇಶದಲ್ಲಿ ಕರೋನಾ (Coronavirus) ಸೋಂಕಿನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಾದ ನಿರ್ಬಂಧಗಳನ್ನು ಜಾರಿಗೆ ತಂದಿವೆ. ಆದರೆ ಈ ನಿಯಮಗಳನ್ನು ಪಾಲಿಸುವಲ್ಲಿ ನಾಗರಿಕರು ನಿರ್ಲಕ್ಷ್ಯ ಧೋರಣೆ ತಲೆಯುತ್ತಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ, ಸಾಕು ನಾಯಿಯ ಹುಟ್ಟುಹಬ್ಬವನ್ನು ಆಚರಿಸಲು ಕೆಲವರು ಕೋವಿಡ್ -19 (Covid-19) ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಒಟ್ಟು ಮೂವರನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಈ ಜನರು ಸಾಕು ನಾಯಿಯ ಹುಟ್ಟುಹಬ್ಬವನ್ನು ಆಚರಿಸುವಾಗ ಕೋವಿಡ್ -19 ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆ ಇಬ್ಬರು ಸಹೋದರರು ಸೇರಿದಂತೆ ಒಟ್ಟು ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಚಿರಾಗ್ ಪಟೇಲ್ ಮತ್ತು ಅವರ ಸಹೋದರ ಉರ್ವೀಶ್ ಪಟೇಲ್ ಇಬ್ಬರೂ ಅಹಮದಾಬಾದ್ ನಗರದ ಕೃಷ್ಣನಗರದ ನಿವಾಸಿಗಳಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ತನ್ನ ಮುದ್ದಿನ ನಾಯಿ 'ಎಬಿ' ಹುಟ್ಟುಹಬ್ಬದಂದು ತನ್ನ ಸ್ನೇಹಿತ ದಿವ್ಯೇಶ್ ಮಹಾರಿಯಾ ಜೊತೆ ದೊಡ್ಡ ಔತಣವನ್ನು ಈ ಸಹೋದರರು ಏರ್ಪಡಿಸಿದ್ದಾರೆ. 

ತಮ್ಮ ನಾಯಿಯ ಹುಟ್ಟುಹಬ್ಬವನ್ನು ಆಚರಿಸಲು ಶುಕ್ರವಾರ ರಾತ್ರಿ ಪ್ಲಾಟ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ಮೂವರ ಕುಟುಂಬದ ಸದಸ್ಯರು ಸೇರಿದಂತೆ, ಅವರ ಸ್ನೇಹಿತರು  ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಸಾಮಾಜಿಕ ಅಂತರ ಮತ್ತು ಮುಖವಾಡಗಳನ್ನು ಧರಿಸುವುದರ ಕುರಿತಾದ ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ. ಪೊಲೀಸ್ ಅಧಿಕಾರಿಯ ಪ್ರಕಾರ, ಜನಪ್ರಿಯ ಜಾನಪದ ಗಾಯಕರೊಬ್ಬರು ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನೀಡಿದ್ದಾರೆ ಮತ್ತು ಕೇಕ್ ಅನ್ನು ಸಹ ಕತ್ತರಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಸಮಾರಂಭದಲ್ಲಿ ಕುಟುಂಬವು ಸುಮಾರು 7 ಲಕ್ಷ ರೂ. ಹಣ ವೆಚ್ಚ ಮಾಡಿದೆ ಎನ್ನಲಾಗಿದೆ. 

ಇದನ್ನೂ ಓದಿ-Good News: PM Awas ಯೋಜನೆಯ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ! ಎಲ್ಲರ ಮೇಲೂ ಪ್ರಭಾವ ಬೀರಲಿದೆ

ಈ ಪ್ರಕರಣದಲ್ಲಿ, ಭಾರತೀಯ ದಂಡ ಸಂಹಿತೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ನಿಕೋಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಂತರ ಚಿರಾಗ್ ಪಟೇಲ್, ಉರ್ವೀಶ್ ಪಟೇಲ್ ಮತ್ತು ದಿವ್ಯೇಶ್ ಮಹರಿಯಾ ಅವರನ್ನು ಬಂಧಿಸಲಾಗಿದೆ. 

ಇದನ್ನೂ ಓದಿ-ಪಂಚರಾಜ್ಯಗಳ ಚುನಾವಣೆ ಘೋಷಣೆ: ಯಾರಿಗೆ ಒಲಿಯಲಿದೆ ಪಂಚರಾಜ್ಯಗಳ ಗದ್ದುಗೆ?

ಕರೋನಾ ಸೋಂಕಿನ ವಿಷಯದಲ್ಲಿ ಮಹಾರಾಷ್ಟ್ರ ಮತ್ತು ದೆಹಲಿಯ ನಂತರ ಗುಜರಾತ್ ಅತಿ ಹೆಚ್ಚು ಪೀಡಿತ ರಾಜ್ಯವಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ರಾಜ್ಯದಲ್ಲಿ ಓಮಿಕ್ರಾನ್ ರೂಪಾಂತರಿಯ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದೆ. ಇವುಗಳಲ್ಲಿ ರಾತ್ರಿ ಕರ್ಫ್ಯೂ, ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಮುಂತಾದ ನಿಯಮಗಳು ಶಾಮೀಲಾಗಿವೆ.

ಇದನ್ನೂ ಓದಿ-ಪಂಚ ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ: ಏಳು ಹಂತದಲ್ಲಿ ಚುನಾವಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News