Covid-19 Latest Update: ಪಶ್ಚಿಮ ಬಂಗಾಳದಲ್ಲಿ ಕೊರೊನಾ ಮಹಾ ವಿಸ್ಫೋಟ, 24 ಗಂಟೆಗಳಲ್ಲಿ 24 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆ, 18 ಸಾವು

ನವದೆಹಲಿ: Covid-19 Latest Update - ಪಶ್ಚಿಮ ಬಂಗಾಳದಲ್ಲಿ (West Bengal) ಕೋವಿಡ್ (Covid-19), ಓಮಿಕ್ರಾನ್‌ನ (Omicron) ಹೊಸ ರೂಪಾಂತರದಿಂದಾಗಿ, ಕರೋನಾ ಸೋಂಕಿನ ಮೂರನೇ ಅಲೆಯಲ್ಲಿ ಕೊರೊನಾವೈರಸ್ (Coronavirus) ಪ್ರಕರಣಗಳು ಅನಿಯಂತ್ರಿತ ವೇಗದಲ್ಲಿ ಹೆಚ್ಚಾಗುತ್ತಿವೆ. 

Written by - Nitin Tabib | Last Updated : Jan 9, 2022, 09:04 PM IST
  • ಪಶ್ಚಿಮ ಬಂಗಾಳದಲ್ಲಿ ಕೊರೊನಾ ಮಹಾವಿಸ್ಫೋಟ
  • 24 ಗಂಟೆಗಳಲ್ಲಿ 24 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿ
  • ಸೋಂಕಿನಿಂದ 18 ಜನರ ಸಾವು
Covid-19 Latest Update: ಪಶ್ಚಿಮ ಬಂಗಾಳದಲ್ಲಿ ಕೊರೊನಾ ಮಹಾ ವಿಸ್ಫೋಟ, 24 ಗಂಟೆಗಳಲ್ಲಿ 24 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆ, 18 ಸಾವು title=
West Bengal Corona Updates(Photo Courtesy - ANI)

ನವದೆಹಲಿ: Covid-19 Latest Update - ಪಶ್ಚಿಮ ಬಂಗಾಳದಲ್ಲಿ (West Bengal) ಕೋವಿಡ್ (Covid-19), ಓಮಿಕ್ರಾನ್‌ನ (Omicron) ಹೊಸ ರೂಪಾಂತರದಿಂದಾಗಿ, ಕರೋನಾ ಸೋಂಕಿನ ಮೂರನೇ ಅಲೆಯಲ್ಲಿ ಕೊರೊನಾವೈರಸ್ (Coronavirus) ಪ್ರಕರಣಗಳು ಅನಿಯಂತ್ರಿತ ವೇಗದಲ್ಲಿ ಹೆಚ್ಚಾಗುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಭಾನುವಾರ 24 ಗಂಟೆಗಳಲ್ಲಿ 24 ಸಾವಿರಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಸಚಿವಾಲಯದ (Department Of Health & Family Welfare West Bengal) ವರದಿಯ ಪ್ರಕಾರ, ರಾಜ್ಯದಲ್ಲಿ ಕಳೆದ ಒಂದು ದಿನದಲ್ಲಿ 24 ಸಾವಿರದ 287 ಹೊಸ ಪ್ರಕರಣಗಳು ದಾಖಲಾಗಿದ್ದು, ಈ ಅವಧಿಯಲ್ಲಿ ರಾಜ್ಯದಲ್ಲಿ ಸೋಂಕಿನಿಂದ 18 ಜನರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 8 ಸಾವಿರದ 213 ಮಂದಿ ಗುಣಮುಖರಾಗಿ ತಮ್ಮ ಮನೆಗಳಿಗೆ ಮರಳಿದ್ದಾರೆ.

ಇದನ್ನೂ ಓದಿ-ದೆಹಲಿಯಲ್ಲಿ ಒಂದೇ ದಿನದಲ್ಲಿ 22,751 ಹೊಸ ಪ್ರಕರಣಗಳು,17 ಕೋವಿಡ್ ಸಾವು ವರದಿ

ರಾಜ್ಯ ಸರ್ಕಾರದ (West Bengal Government) ಆರೋಗ್ಯ ಸಚಿವಾಲಯ (Health Ministry) ಬಿಡುಗಡೆ ಮಾಡಿರುವ ಕೋವಿಡ್ ವರದಿ ಪ್ರಕಾರ, ರಾಜ್ಯದಲ್ಲಿ ಪ್ರಸ್ತುತ 78,111 ಸಕ್ರಿಯ ಪ್ರಕರಣಗಳಿದ್ದು, ಚೇತರಿಕೆ ಪ್ರಕರಣಗಳ ಬಗ್ಗೆ ಹೇಳುವುದಾದರೆ, ಇದುವರೆಗೆ ಒಟ್ಟು 16 ಲಕ್ಷ 57 ಸಾವಿರ 034 ಜನರು. ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಕೋವಿಡ್‌ನ ಮೊದಲ ಅಲೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಒಟ್ಟು 19 ಸಾವಿರದ 901 ಜನರು ಸೋಂಕಿನಿಂದ ಸಾವನ್ನಪ್ಪಿದ್ದರು.

ಇದನ್ನೂ ಓದಿ-'Article 370 ರೀತಿ ಒವೈಸಿ ಹೆಸರು ಕೂಡ ನಶಿಸಿಹೋಗಲಿದೆ'

ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾದ ನಂತರ, ರಾಜ್ಯದಲ್ಲಿ ಮತ್ತೊಮ್ಮೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ ಮತ್ತು ಸೋಂಕನ್ನು ತಡೆಗಟ್ಟಲು ಸರ್ಕಾರವೂ ನಿರ್ಬಂಧಗಳನ್ನು ಜಾರಿಗೆ ತರುತ್ತಿದೆ. 50 ರಷ್ಟು ಸಾಮರ್ಥ್ಯದೊಂದಿಗೆ ಬ್ಯೂಟಿ ಪಾರ್ಲರ್‌ಗಳು ಮತ್ತು ಸಲೂನ್‌ಗಳನ್ನು ನಿರ್ವಹಿಸಲು ರಾಜ್ಯ ಸರ್ಕಾರ ಸೂಚನೆಗಳನ್ನು ನೀಡಿದೆ.

ಇದನ್ನೂ ಓದಿ-ಕೊರೊನಾ ಹೆಚ್ಚಳ ಹಿನ್ನಲೆಯಲ್ಲಿ, ಪ್ರಧಾನಿ ಮೋದಿಯಿಂದ ಮಹತ್ವದ ಸಭೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News