COVID 19 ವೈರಸ್ ಪೀಡಿತರ ಸಂಖ್ಯೆಯಲ್ಲಿ ಜಗತ್ತಿನ ಟಾಪ್ 10 ಲಿಸ್ಟ್ ಗೆ ಏರಿದ ಭಾರತ

ಭಾರತದಲ್ಲಿ ನಿನ್ನೆ ಒಂದೇ ದಿನ 6,977 ಜನರಿಗೆ COVID 19 ಸೋಂಕು ಇರುವುದು ದೃಢಪಟ್ಟಿದೆ. 

Last Updated : May 25, 2020, 10:40 AM IST
COVID 19 ವೈರಸ್ ಪೀಡಿತರ ಸಂಖ್ಯೆಯಲ್ಲಿ ಜಗತ್ತಿನ ಟಾಪ್ 10 ಲಿಸ್ಟ್ ಗೆ ಏರಿದ ಭಾರತ title=

ನವದೆಹಲಿ: ಲಾಕ್‌ಡೌನ್ ಜಾರಿಗೊಳಿಸಿದ್ದು ನಿರರ್ಥಕವಾಗಿದೆ. ಅಥವಾ ಸೂಕ್ತ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಮಾಡಿಲ್ಲವೆನಿಸುತ್ತಿದೆ. ಏಕೆಂದರೆ ದೇಶಕ್ಕೆ ದೇಶವನ್ನೇ ದಿಗ್ಬಂಧನಗೊಳಿಸಿದರೂ  ಕೋವಿಡ್ -19 (Covid-19) ಎಂಬ ಕಂಡುಕೇಳರಿಯದ ಸೋಂಕು ಹರಡುವಿಕೆ ಕಮ್ಮಿ ಆಗಿಲ್ಲ. ಇದರ ಪರಿಣಾಮವಾಗಿ ಪ್ರಪಂಚದಲ್ಲೇ ಅತಿಹೆಚ್ಚು ಕೊರೋನಾ ವೈರಸ್ ಪೀಡಿತರರಿರುವ ಮೊದಲ ಹತ್ತು ದೇಶಗಳ ಪೈಕಿ ಭಾರತ 10ನೇ ಸ್ಥಾನಕ್ಕೆ ಏರಿದೆ.

ಭಾರತದಲ್ಲಿ ನಿನ್ನೆ ಒಂದೇ ದಿನ 6,977 ಜನರಿಗೆ COVID 19 ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಭಾರತದ COVID 19 ಸೋಂಕು ಪೀಡಿತರ ಸಂಖ್ಯೆ 1,38,845ಕ್ಕೆ ಏರಿಕೆಯಾಗಿದೆ. ಪರಿಣಾಮವಾಗಿ ಪ್ರಪಂಚದಲ್ಲೇ ಅತಿಹೆಚ್ಚು ಕೊರೋನಾ ವೈರಸ್ ಪೀಡಿತರರಿರುವ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಇರಾನ್ ಅನ್ನು ಹಿಂದಿಕ್ಕಿ ಭಾರತವು ಆ ಸ್ಥಾನಕ್ಕೆ ಏರಿದೆ. ಸದ್ಯ 11ನೇ ಸ್ಥಾನದಲ್ಲಿರುವ ಇರಾನ್ ದೇಶದ ಕೊರೋನಾ ವೈರಸ್ ಪೀಡಿತರ ಸಂಖ್ಯೆ 135,701.

ಕೆಲವರು ಕರೋನವೈರಸ್ (Coronavirus) COVID 19 ವಿಷಯ ನಿಭಾಯಿಸಿರುವುದರಲ್ಲಿ ಭಾರತ ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ಪರವಾಗಿಲ್ಲ ಎಂದು ಬೀಗುತ್ತಿದ್ದಾರೆ. ಆದರೆ ದೇಶದ ಪರಿಸ್ಥಿತಿ ಆಗಿಲ್ಲ ಎಂಬುದನ್ನು ಅಂಕಿಅಂಶಗಳು ಸಾರಿ ಸಾರಿ ಹೇಳುತ್ತವೆ. 

ದಿನದಿಂದ ದಿನಕ್ಕೆ COVID 19 ವೈರಾಣು ಪೀಡಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಇತ್ತೀಚೆಗೆ 12ನೇ ಸ್ಥಾನದಲ್ಲಿದ್ದ ಚೀನಾವನ್ನು ಹಿಂದಿಕ್ಕಿ 11ನೇ ಸ್ಥಾನಕ್ಕೆ ಬಂದಿತ್ತು.‌ ಮೊನ್ನೆಯಷ್ಟೇ ಭಾರತದ ‌ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದೂಕಾಲು ಲಕ್ಷ ದಾಟಿತ್ತು. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಾಪ್ ಟೆನ್ ಒಳಗೂ ಬಂದಿದೆ.

ಇದಕ್ಕೂ ಮೊದಲು ಮೇ 6ರಿಂದ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದ್ದವು. ಮೇ 10ರಿಂದ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಮೇ17ರಿಂದ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾದವು. ಈಗ ಮೇ 21ರಿಂದ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಗೋಚರಿಸಿದ್ದವು. ಪ್ರತಿದಿನ ಭಾರತದ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸುವ ಮಾಹಿತಿಗಳ ಪ್ರಕಾರ ಮೇ 6ರಿಂದ ಈವರೆಗಿನ ಚಿತ್ರಣ ಹೀಗಿದೆ...

  • ಮೇ 6ರಂದು 3,561,
  • ಮೇ 7ರಂದು 3,390,
  • ಮೇ 8ರಂದು 3,320,
  • ಮೇ 9ರಂದು 3,277,
  • ಮೇ 10ರಂದು 4,213,
  • ಮೇ 11ರಂದು 3,064,
  • ಮೇ 12ರಂದು 3,525,
  • ಮೇ 13ರಂದು 3,722,
  • ಮೇ 14ರಂದು 3,967,
  • ಮೇ 15ರಂದು 3,970,
  • ಮೇ 16ರಂದು 4,987,
  • ಮೇ 17ರಂದು 5,242,
  • ಮೇ 18ರಂದು 4,970,
  • ಮೇ 19ರಂದು 5,611,
  • ಮೇ 20ರಂದು 5,609,
  • ಮೇ 21ರಂದು 6,088,
  • ಮೇ 22ರಂದು 6,654,
  • ಮೇ 23ರಂದು 6,767,
  • ಮೇ 24ರಂದು 6,977.

ಅಲ್ಲದೆ ನಿನ್ನೆ ಒಂದೇ ದಿನ ದೇಶದಲ್ಲಿ 154 ಜನ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 4,021ಕ್ಕೆ ಏರಿಕೆಯಾಗಿದೆ. ಕೊರೋನಾದಿಂದ ಈವರೆಗೆ ಗುಣಮುಖರಾದವರು  57,720 ಜನ ಮಾತ್ರ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. 

ಸದ್ಯ ಪ್ರಪಂಚದಲ್ಲಿ COVID 19  ಸೋಂಕು ಪೀಡಿತರ ಸಂಖ್ಯೆಯಲ್ಲಿ ಅಮೇರಿಕಾ, ಬ್ರಿಜಿಲ್, ರಷ್ಯಾ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ.

Trending News