Covid-19 In India: ಭಾರತದಲ್ಲಿ ಶೀಘ್ರವೇ Endemic ಘೋಷಣೆಯಾಗಲಿದೆಯಾ Corona? ವಿಜ್ಞಾನಿಗಳು ಹೇಳಿದ್ದೇನು?

Covid-19 In India: ಭಾರತದಲ್ಲಿ ಕೋವಿಡ್ -19 (Covid-19) ರ ದೈನಂದಿನ ಪ್ರಕರಣಗಳ ಸಂಖ್ಯೆ ಕಡಿಮೆ ಮತ್ತು 4 ವಾರಗಳವರೆಗೆ ಸ್ಥಿರವಾಗಿದ್ದರೆ ಮಾತ್ರ, ಕರೋನವೈರಸ್ ಸೋಂಕನ್ನು ನಾವು  'Endemic' (ಸ್ಥಳೀಯ ಮಟ್ಟದಲ್ಲಿ ಹರಡುವ ಕಾಯಿಲೆ) ಎಂದು ಪರಿಗಣಿಸಬಹುದು  ಎಂದು ಖ್ಯಾತ ವೈರಾಲಾಜಿಸ್ಟ್ ಟಿ ಜಾಕೋಬ್ ಜಾನ್ (Jocob John) ಹೇಳಿದ್ದಾರೆ. 

Written by - Nitin Tabib | Last Updated : Feb 15, 2022, 06:49 PM IST
  • ಭಾರತದಲ್ಲಿ ಕೋರೋಣ ಇದುವರೆಗೆ ಸ್ಥಳೀಯವಾಗಿ ಹರಡುವ ಕಾಯಿಲೆಯಾಗಿಲ್ಲ.
  • ಇದಕ್ಕಾಗಿ ಇನ್ನೂ 4 ವಾರಗಳು ಕಾಯಬೇಕು ಎಂದ ವೈರಾಲಾಜಿಸ್ಟ್ ಟಿ. ಜೇಕಬ್
  • ಸದ್ಯ ಇರುವ ಪರಿಸ್ಥಿತಿಯನ್ನು ಎಂಡೆಮಿಕ್ ಎಂದು ಹೇಳಲು ಸಾಧ್ಯವಿಲ್ಲ
Covid-19 In India: ಭಾರತದಲ್ಲಿ ಶೀಘ್ರವೇ Endemic ಘೋಷಣೆಯಾಗಲಿದೆಯಾ Corona? ವಿಜ್ಞಾನಿಗಳು ಹೇಳಿದ್ದೇನು? title=
Covid-19 In India (File Photo)

Covid-19 In India: ಭಾರತದಲ್ಲಿ ಕೊರೊನಾ ಹೊಸ ಪ್ರಕರಣಗಳು ನಿರಂತರವಾಗಿ ಕಡಿಮೆಯಾಗುತ್ತಿವೆ. ಇನ್ನೊಂದೆಡೆ ಸಾವಿನ ಸಂಖ್ಯೆಯಲ್ಲಿಯೂ ಕೂಡ ಗಣನೀಯ ಇಳಿಮುಖವಾಗಿದೆ. ಸೋಂಕಿನ ಪ್ರಮಾಣವೂ ಕಡಿಮೆ ಮಟ್ಟದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ಖ್ಯಾತ ವೈರಾಲಜಿಸ್ಟ್ ಟಿ ಜಾಕೋಬ್ ಜಾನ್ ಅವರು ಭಾರತದಲ್ಲಿ ಕೋವಿಡ್ -19 (Coronavirus) ರ ದೈನಂದಿನ ಪ್ರಕರಣಗಳ ಸಂಖ್ಯೆ ಕಡಿಮೆ ಮತ್ತು 4 ವಾರಗಳವರೆಗೆ ಸ್ಥಿರವಾಗಿದ್ದರೆ ಮಾತ್ರ, ಕರೋನವೈರಸ್ ಸೋಂಕು 'Endemic' (ಸ್ಥಳೀಯವಾಗಿ ಹರಡುವ ಕಾಯಿಲೆ) ಎಂದು ಪರಿಗಣಿಸಬಹುದು ಎಂದು ಹೇಳಿದ್ದಾರೆ.

ಗ್ರಾಫ್ ಮೂಲಕ ಪ್ರಕರಣಗಳ ಸಂಖ್ಯೆಯನ್ನು ಗಮನಿಸಬಹುದು
ಸಮುದಾಯದಲ್ಲಿನ ಪ್ರಕರಣಗಳ ಸಂಖ್ಯೆಗಳನ್ನು ಒಂದು ಗ್ರಾಫ್ ಮೂಲಕ ನೋಡಿದಾಗ, ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದು, ಉತ್ತುಂಗ ಸ್ಥಿತಿಗೆ ತಲುಪಿರುವುದು ಮತ್ತು ಅವುಗಳ ಸಂಖ್ಯೆ ಕಡಿಮೆಯಾಗುವ ಸ್ಥಿತಿಯನ್ನು ಮಹಾಮಾರಿ (Epidemic) ಎನ್ನುತ್ತಾರೆ  ಮತ್ತು ಪ್ರಕರಣಗಳ ಸಂಖ್ಯೆಯ ಸಮತಲ ಸ್ಥಿತಿ ಸ್ಥಿರವಾಗಿರುವುದನ್ನು Endemic ಎಂದು ಕರೆಯಲಾಗುತ್ತದೆ. ಒಂದು ವೇಳೆ ಈ ಸಾಂಕ್ರಾಮಿಕ ವ್ಯವಸ್ಥೆಯು ಮತ್ತೆ ರೂಪುಗೊಂಡಾಗ ಅದನ್ನು ಅಲೆ ಎಂದು ಕರೆಯುತ್ತಾರೆ ಎಂದು ಜಾನ್ ಹೇಳಿದ್ದಾರೆ. 

ಎಂಡೇಮಿಕ್ ಸ್ಥಿತಿ ಘೋಷಿಸಲು ಸಾಧ್ಯವಿಲ್ಲ
ಪ್ರಕರಣಗಳ ಸಂಖ್ಯೆಯು 4 ವಾರಗಳವರೆಗೆ ಸ್ವಲ್ಪ ಏರಿಳಿತಗಳೊಂದಿಗೆ ಕಡಿಮೆ ಮತ್ತು ಸ್ಥಿರವಾಗಿರದ ಹೊರತು, ನಾವು ಅದನ್ನು 'ಸ್ಥಳೀಯ' ಎಂದು ಘೋಷಿಸಲು ಸಾಧ್ಯವಿಲ್ಲ. ಓಮಿಕ್ರಾನ್ ಅಲೆಯು ವೇಗವಾಗಿ ದುರ್ಬಲಗೊಳ್ಳುತ್ತಿದೆ ಮತ್ತು ಕೆಲವೇ ದಿನಗಳಲ್ಲಿ ನಾವು ಕಡಿಮೆ ಸಂಖ್ಯೆಯ ಪ್ರಕರಣಗಳನ್ನು ನೋಡಬಹುದು ಎಂದು ಜಾನ್ ಹೇಳಿದ್ದಾರೆ. ಆದರೆ ಸ್ಥಳೀಯ ಹಂತದ ಬಗ್ಗೆ ನಾವು ಖಚಿತವಾಗಿ ಹೇಳುವುದಾದರೆ ನಾವು 4 ವಾರಗಳವರೆಗೆ ಕಾಯಬೇಕಾಗುತ್ತದೆ ಎಂದೂ ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ. ಓಮಿಕ್ರಾನ್ ನಮ್ಮನ್ನು ಆಶ್ಚರ್ಯಗೊಳಿಸಿದಂತೆಯೇ, ಮತ್ತೊಂದು ವಿಚಿತ್ರ ಸ್ವರೂಪ  ನಮ್ಮನ್ನು ಮತ್ತೊಮ್ಮೆ ಆಶ್ಚರ್ಯಗೊಳಿಸಬಹುದು ಎಂದು ಜಾನ್ ಹೇಳಿದ್ದಾರೆ. 

ಅತ್ಯಧಿಕ ಅಪಾಯಕಾರಿ ರೂಪಾಂತರಿ ಬರುವ ಸಾಧ್ಯತೆ ಕಡಿಮೆ
ಮತ್ತೊಂದು ಅಪಾಯಕಾರಿ ರೂಪಾಂತರಿ ಬರುವ ಸಾಧ್ಯತೆ ಕುರಿತು ಮಾತನಾಡಿರುವ ICMRನ ವೈರಾಲಾಜಿಯಲ್ಲಿ ಸುಧಾರಿದ ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕ, ಆ ಕುರಿತು ಭವಿಷ್ಯವಾಣಿ ಮಾಡಲು ಸಾಧ್ಯವಿಲ್ಲ ಮತ್ತು ಕೇವಲ ಅದನ್ನು ಅಂದಾಜಿಸಬಹುದು ಎಂದಿದ್ದಾರೆ. ಎಂಡೇಮಿಕ್ ಹಂತ ಹಲವು ತಿಂಗಳುಗಳವರೆಗೆ ಇರಲಿದ್ದು, ಓಮಿಕ್ರಾನ್ ಗಿಂತ ಹೆಚ್ಚು ಸಾಂಕ್ರಾಮಿಕ  ಹಾಗೂ ಡೆಲ್ಟಾಗಿಂತ ಅಧಿಕ ಅಪಾಯಕಾರಿ ರೂಪಾಂತರಿ ಮುಂದೆ ಬರುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ ಎಂದಿದ್ದಾರೆ. 

ಇದನ್ನೂ ಓದಿ-Turkey: ವ್ಯಕ್ತಿಯೊಬ್ಬನ Covid-19 ವರದಿ 78 ಬಾರಿ ಸಕಾರಾತ್ಮಕ ಬಂದಿದೆಯಂತೆ! ಇದುವರೆಗೂ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ

ವೈರಸ್ ಜೊತೆಗೆ ನಾವು ಹೊಂದಾಣಿಕೆ ಮಾಡಿಕೊಳ್ಳಬೇಕು
ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ದೆಹಲಿ ಮೂಲದ ಫೌಂಡೇಶನ್ ಫಾರ್ ಪೀಪಲ್-ಸೆಂಟ್ರಿಕ್ ಹೆಲ್ತ್ ಸಿಸ್ಟಮ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಚಂದ್ರಕಾಂತ್ ಲಹಾರಿಯಾ ಪ್ರಕಾರ, ಕೋವಿಡ್-19 ಭಾರತದಲ್ಲಿ ಸ್ಥಳೀಯ ಹಂತವನ್ನು ಪ್ರವೇಶಿಸುತ್ತಿದೆಯೇ ಅಥವಾ ಇಲ್ಲವೇ, ಸಾಮಾನ್ಯ ಸಾರ್ವಜನಿಕ ದೃಷ್ಟಿಕೋನದಿಂದ ಅದರ ಪ್ರಸ್ತುತತೆ ಸೀಮಿತವಾಗಿದೆ. ಅಪಾಯದ ಮಟ್ಟವನ್ನು ಅವಲಂಬಿಸಿ ಜನರು ವೈರಸ್‌ನೊಂದಿಗೆ ಹೊಸ ಜೀವನದ ಹೊಸ ವಿಧಾನಗಳಿಗೆ ತಮ್ಮನ್ನು ತಾವು ಹೊಂದಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ಕೋವಿಡ್-19 ನಿಂದಾಗಿ ಯಾವುದೂ ನಿಲ್ಲಬಾರದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-ತಮಿಳುನಾಡಿನಲ್ಲಿ ಫೆಬ್ರವರಿ 16 ರಿಂದ ನರ್ಸರಿ ಮತ್ತು ಪ್ಲೇ ಶಾಲೆಗಳ ಪುನರಾರಂಭ

ದೇಶದಲ್ಲಿ 30 ಸಾವಿರಕ್ಕೂ ಕಡಿಮೆ ಹೊಸ ಸೋಂಕಿನ ಪ್ರಕರಣಗಳು 
ಮಂಗಳವಾರ, ಭಾರತದಲ್ಲಿ 27,409 ಹೊಸ ಕರೋನವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ  ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 4,26,92,943 ಕ್ಕೆ ಏರಿದೆ. ದೇಶದಲ್ಲಿ ಸುಮಾರು 44 ದಿನಗಳ ನಂತರ, ದಿನಕ್ಕೆ 30 ಸಾವಿರಕ್ಕೂ ಕಡಿಮೆ ಸೋಂಕಿನ ಪ್ರಕರಣಗಳು ದಾಖಲಾಗಿವೆ. , ಚಿಕಿತ್ಸೆಯಲ್ಲಿರುವ ರೋಗಿಗಳ ಸಂಖ್ಯೆ 4,23,127 ಕ್ಕೆ ಇಳಿದಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಈ ಸಾಂಕ್ರಾಮಿಕ ರೋಗದಿಂದ 347 ಹೆಚ್ಚಿನ ರೋಗಿಗಳು ಸಾವನ್ನಪ್ಪಿದ್ದರಿಂದ ಸಾವಿನ ಸಂಖ್ಯೆ 5,09,358 ಕ್ಕೆ ಏರಿದೆ. ಕೋವಿಡ್ -19 ರ ದೈನಂದಿನ ಪ್ರಕರಣಗಳು ಸತತ 9 ನೇ ದಿನವೂ 1 ಲಕ್ಷಕ್ಕಿಂತ ಕಡಿಮೆಯಾಗಿದೆ.

ಇದನ್ನೂ ಓದಿ-ಪ್ರಿನ್ಸ್ ಚಾರ್ಲ್ಸ್ ಗೆ COVID-19 ಧೃಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News