ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್​ಗೆ 2 ವರ್ಷ ಜೈಲು

ಈ ಮೊದಲು ಅಕ್ಟೋಬರ್ 26 ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಜಾಮೀನು ಮಂಜೂರಾಗಿತ್ತು.  

Last Updated : Jul 25, 2018, 04:00 PM IST
ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್​ಗೆ 2 ವರ್ಷ ಜೈಲು title=
Pic : ANI

ವಿಸ್ನಾಗರ್‌: ಗುಜರಾತ್ ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್'ಗೆ ಸ್ಥಳೀಯ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ. 

2015ರಲ್ಲಿ ನಡೆದ ಪಾಟೀದಾರ್ ಆಂದೋಲನದ ಸಂದರ್ಭದಲ್ಲಿ ಗಲಭೆ ಎಬ್ಬಿಸಿ, ಸಾರ್ವಜನಿಕ ಆಸ್ತಿಪಾಸ್ತಿ ನಾಶ, ಹಿಂಸಾಚಾರಕ್ಕೆ ಪ್ರೇರಣೆ ನೀಡಿದ ಆರೋಪ ಹಾರ್ದಿಕ್ ಮತ್ತು ಅವರ ಸಹಚರರಾದ ಲಾಲ್ಜಿ ಪಟೇಲ್ ಮತ್ತು ಅಂಬಾಲಾಲ್ ಪಟೇಲ್ ಮೇಲಿತ್ತು. ಮೂವರನ್ನು ಅಪರಾಧಿಗಳೆಂದು ಪರಿಗಣಿಸಿರುವ ವಿಸ್ನಗರ್ ಸೆಷನ್ ಕೋರ್ಟ್ ನ್ಯಾಯಾಧೀಶರಾದ ವಿ.ಪಿ.ಅಗ್ರವಾಲ್ ಎರಡು ವರ್ಷ ಜೈಲುವಾಸದ ಶಿಕ್ಷೆ ಮತ್ತು ತಲಾ 50,000 ದಂಡ ವಿಧಿಸಿದ್ದಾರೆ. ಈ ಪ್ರಕರಣದಲ್ಲಿ 17 ಮಂದಿ ವಿರುದ್ಧ ದೂರು ದಾಖಲಿಸಲಾಗಿತ್ತು. 

ಈ ಮೊದಲು ಅಕ್ಟೋಬರ್ 26 ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಜಾಮೀನು ಮಂಜೂರಾಗಿತ್ತು.

Trending News