RSS On United India - ಅಖಂಡ ಭಾರತ ಬಲದಿಂದಲ್ಲ , ಧರ್ಮದಿಂದ ಮಾತ್ರ ಸಂಭವ: RSS

RSS On United India - ಪುಸ್ತಕ ಬಿಡುಗಡೆಯ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿರುವ  ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS Chief Mohan Bhagwat), ಭಾರತದಿಂದ ಬೇರ್ಪಟ್ಟ ಪಾಕಿಸ್ತಾನದಂತಹ ದೇಶಗಳು ಇಂದು ಬಿಕ್ಕತ್ತಿನಲ್ಲಿವೆ. ಇನ್ನು ಮುಂದೆ ತಮ್ಮನ್ನು ತಮ್ಮನ್ನು ಭಾರತದ ಭಾಗವೆಂದು ಕರೆದುಕೊಳ್ಳದವರು, ಭಾರತದಿಂದ ಬೇರ್ಪಟ್ಟ ಪ್ರದೇಶಗಳಿಗೆ ಹೋದವರು ಭಾರತದೊಂದಿಗೆ ಮರು ಸಂಪರ್ಕ ಸಾಧಿಸುವುದು ಬಹಳ ಮುಖ್ಯವಾಗಿದೆ ಎಂದು ಮೋಹನಜೀ ಭಾಗವತ್ ಹೇಳಿದ್ದಾರೆ.

Written by - Nitin Tabib | Last Updated : Feb 25, 2021, 10:41 PM IST
  • ಅಖಂಡ ಭಾರತ ಬಲದಿಂದಲ್ಲ, ಧರ್ಮದಿಂದ ಮಾತ್ರ ಸಂಭವ.
  • ವಸುದೈವ ಕುಟುಂಬಕಂನಿಂದ ಮಾತ್ರ ಮತ್ತೊಮ್ಮೆ ಖುಷಿ ಹಾಗು ಶಾಂತಿಯ ಮರುಸ್ಥಾಪನೆ.
  • ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮೋಹನ್ ಭಾಗವತ್ ನೇರ ನುಡಿ
RSS On United India - ಅಖಂಡ ಭಾರತ ಬಲದಿಂದಲ್ಲ , ಧರ್ಮದಿಂದ ಮಾತ್ರ ಸಂಭವ: RSS title=
RSS On Akhand Bharat (File Photo- Mohan Bhagwat)

ಹೈದ್ರಾಬಾದ್ : RSS On United India - ಭಾರತದಿಂದ ಬೇರ್ಪಟ್ಟ ಪಾಕಿಸ್ತಾನ (Pakistan) ನಂತಹ ದೇಶಗಳು ಪ್ರಸ್ತುತ ಬಿಕ್ಕಟ್ಟನ್ನು ಎದುರಿಸುತ್ತಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಅಖಂಡ ಭಾರತದ  ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. ಅಖಂಡ್ ಭಾರತ್ (Unaited India) ಬಲದಿನದಲ್ಲ, ಆದರೆ ಹಿಂದೂ ಧರ್ಮದ ಮೂಲಕ ಮಾತ್ರ ಸಾಧ್ಯ ಎಂದು ಭಾಗವತಜೀ ಹೇಳಿದ್ದಾರೆ.

ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿರುವ ಅವರು, "ಜಗತ್ತಿನ ಕಲ್ಯಾಣಕ್ಕಾಗಿ ಗೌರವಶಾಲಿ ಅಖಂಡ ಭಾರತದ ಅವಶ್ಯಕತೆ ಇದೆ. ಹೀಗಾಗಿ ದೇಶಭಕ್ತಿಯನ್ನು ಜಾಗ್ರತಗೊಳಿಸುವುದು ಅಗತ್ಯವಾಗಿದೆ. ಹಂಚಿಕೆಯಾಗಿರುವ ಭಾರತವನ್ನು ಪುನಃ ಒಗ್ಗೂಡಿಸುವ ಅವಶ್ಯಕತೆ ಇದೆ. ಭಾರತದಿಂದ ಬೇರ್ಪಟ್ಟ ಎಲ್ಲಾ ಭಾಗಗಳು ಮತ್ತು ತಮ್ಮನ್ನು ತಾವು ಭಾರತ ಭಾಗವಲ್ಲ ಎಂದು ಹೇಳಿಕೊಳ್ಳುವವರಿಗೆ ಇದರ ಅವಶ್ಯಕತೆ ಹೆಚ್ಚಾಗಿದೆ' ಎಂದು ಹೇಳಿದ್ದಾರೆ.

'ಈ ವಿಭಜನೆ ಮೂರ್ಖರ ಕನಸಾಗಿತ್ತು'
ತಮ್ಮ ಮಾತನ್ನು ಮುಂದುವರೆಸಿದ ಮೋಹನಜೀ ಭಾಗವತ್ 'ದೇಶ ವಿಭಜನೆಗೂ ಮುನ್ನ ಹಲವರು ಈ ದೇಶವನ್ನು  ವಿಭಜಿಸಲಾಗುವುದೇ ಅಥವಾ ಇಲ್ಲವೇ ಎಂಬುದರ ಮೇಲೆ ಸಂದೇಹ ವ್ಯಕ್ತಪಡಿಸಿದ್ದರು, ಆದರೆ, ಈ ಕೃತ್ಯ ನಡೆದುಹೋಯಿತು. ದೇಶ ವಿಭಜನೆಯಾಗುವ 6 ತಿಂಗಳು ಮೊದಲು ಈ ಕುರಿತು ಯಾರೂ ಊಹಿಸಿರಲಿಲ್ಲ ಕೂಡ. ಈ ಕುರಿತು ಜನರು ಪಂಡಿತ್ ಜವಾಹರಲಾಲ್ ನೆಹರು ಅವರನ್ನು ಪ್ರಶ್ನಿಸಿದ್ದರು ಕೂಡ. ಆಗ ಉತ್ತರಿಸಿದ್ದ ನೆಹರು, ಇದೇನಿದು ...ಇದೊಂದು ಮೂರ್ಖರ ಕನಸಾಗಿದೆ ಎಂದಿದ್ದರು 'ಎಂದು ಮೋಹನಜೀ ಹೇಳಿದ್ದಾರೆ.

ಅಖಂಡ ಭಾರತದ ಸಂಭವನೀಯತೆಯನ್ನು ಅಲ್ಲಗಳೆಯಲಾಗುವುದಿಲ್ಲ
ಬ್ರಿಟಿಶ್ ಶಾಸನದ ಕಾಲದಲ್ಲಿಯೂ ಕೂಡ ಈ ಕುರಿತು ಬ್ರಿಟನ್ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ ಲಾರ್ಡ್ ವಾವೆಲ್, ಭಾರತವನ್ನು ದೇವರು ಸೃಷ್ಟಿಸಿದ್ದಾನೆ. ಅದರ ವಿಭಜನೆ ಯಾರಿಂದ ಸಾಧ್ಯ ಎಂದಿದ್ದರು ಎಂದು ಭಾಗವತ್, ಅಸಂಭವ ಎನಿಸಿದ್ದು ನಡೆದು ಹೋಯಿತು. ಹೀಗಾಗಿ ಇಂದು ಅಸಂಭವ ಎನಿಸುವ ಅಖಂಡ ಭಾರತ ಕನಸು ಸಂಭವವಾಗವು ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಏಕೆಂದರೆ ಪ್ರಸ್ತುತ ಇದರ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ- ಕೆಲವರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ದೂಷಿಸುವುದು ಉಚಿತವಲ್ಲ: ಮೋಹನ್ ಭಾಗವತ್

ಹತ್ತಿಕ್ಕುವುದಲ್ಲ, ಒಗ್ಗೂಡುವ ಮಾತು
ತಮ್ಮನ್ನು ತಾವು ಭಾರತದಿಂದ ಬೇರ್ಪಡಿಸಿ ಇಂದು ತಾವು ಭಾರತದ ಭಾಗವಲ್ಲ ಎಂದು ಹೇಳಿಕೊಳ್ಳುವವರ ಅವಶ್ಯಕತೆ ಇದಾಗಿದೆ. ಈ ದೇಶಗಳು ತಮ್ಮ ದೇಶದಲ್ಲಿ ಮಾಡಬೇಕಾದ ಕೆಲಸವನ್ನೆಲ್ಲಾ ಮಾಡಿವೆ. ಆದರೆ, ಇದುವರೆಗೆ ಅವರಿಗೆ ಸಮಾಧಾನ ದೊರೆತಿಲ್ಲ. ಭಾರತದೊಂದಿಗೆ ಪುನಃ ಬೆರೆಯುವುದು ಇದರ ಏಕಮಾತ್ರ ಪರಿಹಾರವಾಗಿದೆ. ಇದರಿಂದ ಅವರ ಎಲ್ಲ ಸಮಸ್ಯೆಗಳು ಪರಿಹರಿಸಲಿವೆ. ನಾವು ಅವರನ್ನು ಹತ್ತಿಕ್ಕುವ ಮಾತನ್ನಾಡುತ್ತಿಲ್ಲ, ಬೆರೆಯುವ ಮಾತನ್ನಾಡುತ್ತಿದ್ದೇವೆ. ಒಂದು ವೇಳೆ ಇಂದು ನಾವು ಅಖಂಡ ಭಾರತದ ಕುರಿತು ಮಾತನಾಡುತ್ತಿದ್ದೇವೆ ಎಂದರೆ, ಇದರರ್ಥ ಬಲದಿಂದ ಕಿಂಚಿತ್ತು ಅಲ್ಲ. ಸನಾತನ ಧರ್ಮದ ಭದ್ರ ಬುನಾದಿಯ ಮೇಲೆ ಅವರನ್ನು ಪುನಃ ಸೇರಿಸಬೇಕಾಗಿದೆ. ಸನಾತನ ಪರಂಪರೆ ಸಂಪೂರ್ಣ ಮನುಕುಲ ಹಾಗೂ ವಿಶ್ವದ ಧರ್ಮವಾಗಿದೆ ಮತ್ತು ಅದನ್ನು ಇಂದು ಹಿಂದೂ ಧರ್ಮ ಎಂದು ಕರೆಯಲಾಗುತ್ತದೆ  ಎಂದು ಭಾಗವತ್ ಹೇಳಿದ್ದಾರೆ.

ಇದನ್ನೂ ಓದಿ-'ರಾಷ್ಟ್ರೀಯತೆ ಎಂದರೆ ಹಿಟ್ಲರನ ನಾಜಿಸಂ' ಎಂದರ್ಥ ಆದ್ದರಿಂದ ಇದನ್ನು ಬಳಸಬೇಡಿ-ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಮತ್ತೆ ಖುಷಿಯ ವಾತಾವರಣ ಹಾಗೂ ಶಾಂತಿ ನೆಲೆಸಲಿದೆ
'ಗಾಂಧಾರ ಅಫ್ಘಾನಿಸ್ಥಾನವಾಗಿ ಮಾರ್ಪಟ್ಟಿತು. ಬಳಿಕ ಅಲ್ಲಿ ಶಾಂತಿ ನೆಲೆಸಿತೆ? ಪಾಕಿಸ್ತಾನದ ರಚನೆಯಾಯಿತು. ಅಂದಿನಿಂದ ಅಲ್ಲಿಯೂ ಕೂಡ ಶಾಂತಿ ಇದೆಯೇ? ಎಂದು ಪ್ರಶ್ನಿಸಿರುವ ಅವರು, ಭಾರತದಲ್ಲಿ ಹಲವು ಸವಾಲುಗಳನ್ನು ಎದುರಿಸುವ ಸಾಮರ್ಥ್ಯವಿದೆ ಹಾಗೂ ಇಡೀ ವಿಶ್ವ ಸಂಕಷ್ಟದಿಂದ ಹೊರಬೀಳಲು ಭಾರತದತ್ತ ನೋಡುತ್ತಿದೆ. ವಸುದೈವ ಕುಟುಂಬಕಮ್ ಮೂಲಕ ಪುನ ಖುಷಿಯ ವಾತಾವರಣ ಹಾಗೂ ಶಾಂತಿಯನ್ನು ಮರುಸ್ಥಪಿಸಬಹುದು' ಎಂದು ಮೋಹನ್ ಜೀ ಹೇಳಿದ್ದಾರೆ.

ಇದನ್ನೂ ಓದಿ-ಮಹಾತ್ಮಾ ಗಾಂಧಿಜಿ ಕುರಿತು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News