Coronavirus: ಮಹಾರಾಷ್ಟ್ರದಲ್ಲಿ ಪ್ರಯೋಜನಕ್ಕೆ ಬಾರದ 'Lockdown', ಪ್ರತಿ ಗಂಟೆಗೆ 20 ಸಾವು

ಮಹಾರಾಷ್ಟ್ರದಲ್ಲಿ ವಾರಾಂತ್ಯದ ಲಾಕ್‌ಡೌನ್ ಹೊರತಾಗಿಯೂ, ಒಂದೇ ದಿನದಲ್ಲಿ 68 ಸಾವಿರಕ್ಕೂ ಹೆಚ್ಚು ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಂದೇ ದಿನದಲ್ಲಿ 503 ಕರೋನಾ ರೋಗಿಗಳು ಸಾವನ್ನಪ್ಪಿರುವುದು ಎಲ್ಲರ ಆತಂಕವನ್ನು ಹೆಚ್ಚಿಸಿದೆ.

Written by - Yashaswini V | Last Updated : Apr 19, 2021, 07:25 AM IST
  • ಮಹಾರಾಷ್ಟ್ರದಲ್ಲಿ ವಾರಾಂತ್ಯದ ಲಾಕ್‌ಡೌನ್ ಹೊರತಾಗಿಯೂ ಒಂದೇ ದಿನದಲ್ಲಿ 68 ಸಾವಿರಕ್ಕೂ ಹೆಚ್ಚು ಕರೋನಾ ಪ್ರಕರಣ ಪತ್ತೆ
  • ಕಳೆದ 24 ಗಂಟೆಗಳಲ್ಲಿ, ಗರಿಷ್ಠ 68,631 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿ
  • ಮಾಯನಗರಿ ಮುಂಬೈನಲ್ಲಿ ಅತಿ ಹೆಚ್ಚು ಕರೋನಾವೈರಸ್ ಪ್ರಕರಣಗಳು ಪತ್ತೆ
Coronavirus: ಮಹಾರಾಷ್ಟ್ರದಲ್ಲಿ ಪ್ರಯೋಜನಕ್ಕೆ ಬಾರದ 'Lockdown', ಪ್ರತಿ ಗಂಟೆಗೆ 20 ಸಾವು  title=
Weekend Lockdown did'nt worked in Maharashtra

ಮುಂಬೈ: ಮಹಾರಾಷ್ಟ್ರದಲ್ಲಿ ವೀಕೆಂಡ್ ಲಾಕ್‌ಡೌನ್ ಸಹ ನಿಷ್ಪರಿಣಾಮಕಾರಿ ಎಂದು ಸಾಬೀತಾಗಿದೆ. ಕಳೆದ 24 ಗಂಟೆಗಳಲ್ಲಿ, ಗರಿಷ್ಠ 68 ಸಾವಿರ 631 ಹೊಸ ಕೊರೊನಾವೈರಸ್ ಪ್ರಕರಣಗಳು ಇಲ್ಲಿ ವರದಿಯಾಗಿದ್ದು, 503 ರೋಗಿಗಳು ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರ-ನಾಗ್ಪುರದಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆ:
ಮಹಾರಾಷ್ಟ್ರದಲ್ಲಿ ವಾರಾಂತ್ಯದ ಲಾಕ್‌ಡೌನ್ ಹೊರತಾಗಿಯೂ, ಮಾಯನಗರಿ ಮುಂಬೈ  (Mumbai) ನಲ್ಲಿ ಅತಿ ಹೆಚ್ಚು ಕರೋನಾವೈರಸ್  ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನದಲ್ಲಿ 8479 ಕರೋನಾ ರೋಗಿಗಳನ್ನು ಇಲ್ಲಿ ಗುರುತಿಸಲಾಗಿದೆ. ಸೋಂಕಿನಿಂದಾಗಿ 53 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ, ನಗರದಲ್ಲಿ ಒಟ್ಟು ಕರೋನಾವೈರಸ್ ಪ್ರಕರಣಗಳ ಸಂಖ್ಯೆ  87698 ಕ್ಕೆ ತಲುಪಿದ್ದರೆ, ಸಾವಿನ ಸಂಖ್ಯೆ 12347 ಕ್ಕೆ ತಲುಪಿದೆ. 

ಇದನ್ನೂ ಓದಿ - ಕೊರೊನಾ ಪ್ರಕರಣಗಳ ಹೆಚ್ಚಳ: ದೆಹಲಿಯಲ್ಲಿ ವಾರಾಂತ್ಯ ಕರ್ಪ್ಯೂ ವಿಸ್ತರಣೆ ಸಾಧ್ಯತೆ

ಅದೇ ಸಮಯದಲ್ಲಿ, ನಾಗ್ಪುರದಲ್ಲಿ ಕೂಡ ಭಾನುವಾರ 85 ಜನರು ಕರೋನಾಕ್ಕೆ ಬಲಿಯಾಗಿದ್ದಾರೆ. ಇಂದಿನ ಪ್ರಕರಣಗಳನ್ನು ಒಳಗೊಂಡಂತೆ, ನಾಗ್ಪುರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,23,106 ತಲುಪಿದೆ. ನಗರದಲ್ಲಿ ಪ್ರಸ್ತುತ 69243 ಸಕ್ರಿಯ ಕೋವಿಡ್ -19 (Covid-19) ಪ್ರಕರಣಗಳಿವೆ.

ಇದನ್ನೂ ಓದಿ - ಕೊರೊನಾ ಪ್ರಕರಣಗಳಲ್ಲಿ ದಾಖಲೆಯ ಏಕದಿನ ಏರಿಕೆ ಕಂಡ ದೆಹಲಿ ಮತ್ತು ಮಹಾರಾಷ್ಟ್ರ

ರಾಜ್ಯದಲ್ಲಿ ಇನ್ನೂ 6.70 ಲಕ್ಷ ಸಕ್ರಿಯ ಪ್ರಕರಣ:
ಇಡೀ ಮಹಾರಾಷ್ಟ್ರದ ಬಗ್ಗೆ ಹೇಳುವುದಾದರೆ ರಾಜ್ಯದಲ್ಲಿ ಇನ್ನೂ 6 ಲಕ್ಷ 70 ಸಾವಿರ 388 ರೋಗಿಗಳು ಆಸ್ಪತ್ರೆಗಳು ಮತ್ತು ಹೋಂ ಕ್ವಾರೆಂಟೈನ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಆದಾಗ್ಯೂ, ಭಾನುವಾರ, 45,654 ರೋಗಿಗಳು ಕರೋನಾದಿಂದ ಚೇತರಿಸಿಕೊಂಡದ್ದಾರೆ  ಎಂಬುದು ಸಮಾಧಾನಕರ ಸಂಗತಿಯಾಗಿದೆ. ಈ ಪೈಕಿ 3987 ಜನರು ಮುಂಬೈ ಮೂಲದವರು ಎಂದು ತಿಳಿದುಬಂದಿದೆ. 

ಕೋವಿಡ್ -19 ಸೋಂಕಿನ ಪ್ರಕರಣಗಳು ಹೆಚ್ಚಾಗುವುದನ್ನು ತಡೆಯಲು ಕರ್ಫ್ಯೂ ಆದೇಶ ಮತ್ತು ನಿರ್ಬಂಧಗಳನ್ನು ಪಾಲಿಸಬೇಕು ಎಂದು ಅವರು ಟ್ವೀಟ್ ಮೂಲಕ ಮನವಿ ಮಾಡಿರುವ ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್,  ಕೋವಿಡ್ -19 ಹರಡುವುದನ್ನು ತಡೆಯಲು ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News