Coronavirus Third Wave In India: ಭಾರತದಲ್ಲಿ ತಡವಾಗಿ ಬರಲಿದೆ ಮೂರನೇ ಅಲೆ, ನೆಮ್ಮದಿಯ ವರದಿ ನೀಡಿದ ICMR

Coronavirus Third Wave In India: ದೇಶದಲ್ಲಿ ಕೊರೊನಾ ವೈರಸ್ ನ ಮೂರನೇ ಅಲೆ ಡಿಸೆಂಬರ್ ವರೆಗೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಕೊವಿಡ್-19 ಕಾರ್ಯಪಡೆಯ ಮುಖ್ಯಸ್ಥ ಎನ್. ಕೆ. ಆರೋರಾ ಭಾನುವಾರ ಹೇಳಿದ್ದಾರೆ.

Written by - Nitin Tabib | Last Updated : Jun 27, 2021, 08:45 PM IST
  • ಭಾರತದಲ್ಲಿ ತಡವಾಗಿ ಬರಲಿದೆ ಕೊರೊನಾ ವೈರಸ್ ಮೂರನೇ ಅಲೆ.
  • ICMR ಅಧ್ಯಯನ ವರದಿಯಲ್ಲಿ ಈ ಅಂಶ ಬಹಿರಂಗ.
  • ಕೊವಿಡ್-19 ಸೆಂಟ್ರಲ್ ಪ್ಯಾನಲ್ ಅಧ್ಯಕ್ಷ ಎನ್.ಕೆ ಆರೋರಾ ಹೇಳಿದ್ದೇನು?
Coronavirus Third Wave In India: ಭಾರತದಲ್ಲಿ ತಡವಾಗಿ ಬರಲಿದೆ ಮೂರನೇ ಅಲೆ, ನೆಮ್ಮದಿಯ ವರದಿ ನೀಡಿದ ICMR title=
Coronavirus Third Wave In India (File Photo)

Coronavirus Third Wave In India: ದೇಶದಲ್ಲಿ ಕೊರೊನಾ ವೈರಸ್ ನ ಮೂರನೇ ಅಲೆ ಡಿಸೆಂಬರ್ ವರೆಗೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಕೊವಿಡ್-19 ಕಾರ್ಯಪಡೆಯ ಮುಖ್ಯಸ್ಥ ಎನ್. ಕೆ. ಆರೋರಾ ಭಾನುವಾರ ಹೇಳಿದ್ದಾರೆ. ದೇಶದಲ್ಲಿ ಮೂರನೆಯ ಕೊರೊನಾ ಅಲೆ ತಡವಾಗಿ ಬರಲಿದೆ ಎಂದು ICMR ಅಧ್ಯಯನ (ICMR Study) ಹೇಳಿದೆ ಎಂದು ಡಾ.ಆರೋರಾ ಹೇಳಿದ್ದಾರೆ. ಹೀಗಿರುವಾಗ ದೇಶದಲ್ಲಿ ಲಸಿಕಾಕರಣ ಪ್ರಕ್ರಿಯೆಗೆ ಇನ್ನಷ್ಟು ಕಾಲಾವಕಾಶ ಸಿಗಲಿದೆ. ಇದೇ ಕಾರಣದಿಂದ ಸರ್ಕಾರ ಪ್ರತಿ ನಿತ್ಯ 1 ಕೋಟಿ ಲಸಿಕೆಯ ಗುರಿಯನ್ನು ನಿಗದಿಪಡಿಸಿದೆ ಎಂದು ಅವರು ಹೇಳಿದ್ದಾರೆ.

"ದೇಶದ (India) ಪ್ರತಿಯೊಬ್ಬರಿಗೂ ಲಸಿಕೆ ಹಾಕಲು ನಮ್ಮ ಬಳಿ 6-8 ತಿಂಗಳುಗಳಿವೆ." ಮುಂದಿನ ದಿನಗಳಲ್ಲಿ ಸರ್ಕಾರವು ಪ್ರತಿದಿನ 1 ಕೋಟಿ ಜನರಿಗೆ ಲಸಿಕೆ ನೀಡಲಿದೆ ಎಂದು ಸೆಂಟ್ರಲ್ ಪ್ಯಾನಲ್ (Government Experts Panel) ಅಧ್ಯಕ್ಷರೂ ಆಗಿರುವ ಆರೋರಾ ಹೇಳಿದ್ದಾರೆ. ಅಷ್ಟೇ ಅಲ್ಲ ದೇಶದಲ್ಲಿ ಮೂರನೇ ಅಲೆ ಡೆಲ್ಟಾ ಪ್ಲಸ್ ವೇರಿಯಂಟ್ ನಿಂದ ಬರಲಿದೆ ಎಂದು ಹೇಳುವುದು ಸ್ವಲ್ಪ ತರಾತುರಿಯ ಹೇಳಿಕೆಯಾಗಲಿದೆ. ಆದ್ರೆ, ಈ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ANEC New Corona Risk: ಕೊರೊನಾದಿಂದ ಚೇತರಿಸಿಕೊಂಡ 13 ವರ್ಷದ ಬಾಲಕನ ಮೆದುಳು ನಿಷ್ಕ್ರೀಯ!

"ಅಲೆಗಳು ಹೊಸ ರೂಪಾಂತರಗಳು ಅಥವಾ ಹೊಸ ಮ್ಯೂಟೆಶನ್ ನೊಂದಿಗೆ  ಸಂಬಂಧ ಹೊಂದಿವೆ, ಆದರಿಂದ ಇದು ಸಂಭವಿಸಬಹುದು. ಆದರೆ ಇದು ಮೂರನೇ ಅಲೆಯನ್ನು ಸೃಷ್ಟಿಸಲಿದೆ ಎಂದು ಹೇಳುವುದು ಸ್ವಲ್ಪ ಕಷ್ಟ. ಏಕೆಂದರೆ ಇದು ಎರಡು ಅಥವಾ ಮೂರು ವಿಷಯಗಳನ್ನು ಅವಲಂಭಿಸಿದೆ" ಎಂದು ಡಾ. ಆರೋರಾ ಹೇಳಿದ್ದಾರೆ.

ಇದನ್ನೂ ಓದಿ-CBSE Launches DADS Portal: CBSE ವಿದ್ಯಾರ್ಥಿಗಳಿಗೊಂದು ನೆಮ್ಮದಿಯ ಸುದ್ದಿ, DADS Portal ಬಿಡುಗಡೆಗೊಳಿಸಿದ CBSE

ಮೂರನೇ ಅಲೆಯನ್ನು ಬರುವುದರಿಂದ ತಡೆಯಬಹುದೇ?
ಡೆಲ್ಟಾ ಪ್ಲಸ್ (Covid-19) ರೂಪಾಂತರಗಳ ಹೆಚ್ಚುತ್ತಿರುವ ಪ್ರಕರಣಗಳ ನಡುವೆ ದೇಶದಲ್ಲಿ ಮೂರನೇ ಕೊರೊನಾ ಅಲೆಯ ಭಯ ಹೆಚ್ಚುತ್ತಿದೆ, ಆದರೆ ಇದನ್ನು ಸಹ ತಪ್ಪಿಸಬಹುದು ಎಂದು ತಜ್ಞರು ಹೇಳುತ್ತಾರೆ. ಜನಸಂಖ್ಯೆಯ ಶೇಕಡಾ 20 ಕ್ಕಿಂತ ಹೆಚ್ಚು ಜನರಿಗೆ ಲಸಿಕೆ ಹಾಕಿದ ದೇಶಗಳಲ್ಲಿ, ಮೂರನೇ ಅಲೆ ಕಂಡುಬಂದಿಲ್ಲ. ICMR ಮತ್ತು ಲಂಡನ್‌ನ ಇಂಪೀರಿಯಲ್ ಕಾಲೇಜಿನ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ, ಮೂರನೇ ಅಲೆ,  ಎರಡನೇ ಅಲೆಯಂತೆ  ಹಾನಿ ಉಂಟುಮಾಡುವುದಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ-ಮಕ್ಕಳಲ್ಲಿನ ಕಿರಿಕಿರಿ ತೊಡೆದುಹಾಕಲು ಬೈಬೇಡಿ, ಹೊಡೆಯಬೇಡಿ, ಈ ಸಿಂಪಲ್ ವಿಧಾನಗಳನ್ನು ಅನುಸರಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News