Corona Third Wave: ಕರೋನಾ 'ಸಾಂಕ್ರಾಮಿಕ'ದ ಬಗ್ಗೆ ಏಮ್ಸ್ ನಿರ್ದೇಶಕರ ಮಹತ್ವದ ಹೇಳಿಕೆ

ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರು, ಕರೋನಾವೈರಸ್ ಶೀಘ್ರದಲ್ಲೇ ಸಾಮಾನ್ಯ ಕಾಯಿಲೆಗಳಂತೆ ಅಂದರೆ ಜ್ವರ, ಕೆಮ್ಮು, ನೆಗಡಿಯಂತೆ ಆಗುತ್ತದೆ. ಏಕೆಂದರೆ ಈಗ ಈ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಜನರಲ್ಲಿ ಸಿದ್ಧಪಡಿಸಲಾಗಿದೆ. ಆದರೆ ಅನಾರೋಗ್ಯ ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಈ ಕಾಯಿಲೆಯಿಂದ ಜೀವಕ್ಕೆ ಅಪಾಯವನ್ನು ಎದುರಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.   

Written by - Yashaswini V | Last Updated : Sep 22, 2021, 06:58 AM IST
  • ಕರೋನಾ ಇನ್ನು ಮುಂದೆ ಭಾರತದಲ್ಲಿ ಸಾಂಕ್ರಾಮಿಕವಲ್ಲ
  • ಏಮ್ಸ್ ನಿರ್ದೇಶಕರು ದೊಡ್ಡ ಹೇಳಿಕೆಯನ್ನು ನೀಡಿದರು
  • ಡಿಸೆಂಬರ್ ವೇಳೆಗೆ ಎಲ್ಲರಿಗೂ ಲಸಿಕೆ ಹಾಕುವ ಗುರಿ
Corona Third Wave: ಕರೋನಾ 'ಸಾಂಕ್ರಾಮಿಕ'ದ ಬಗ್ಗೆ ಏಮ್ಸ್ ನಿರ್ದೇಶಕರ ಮಹತ್ವದ ಹೇಳಿಕೆ title=
Coronavirus Latest- ಕರೋನಾ ಇನ್ನು ಮುಂದೆ ಭಾರತದಲ್ಲಿ ಸಾಂಕ್ರಾಮಿಕವಲ್ಲ, ಆದರೆ ಅದು ಸಂಪೂರ್ಣವಾಗಿ ಕೊನೆಗೊಳ್ಳುವುದಿಲ್ಲ

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ (Coronavirus) ಪ್ರಕರಣಗಳು ನಿರಂತರವಾಗಿ ಕಡಿಮೆಯಾಗುತ್ತಿದ್ದು, ಮಂಗಳವಾರ 26 ಸಾವಿರ ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ 252 ಸಾವುಗಳು ದಾಖಲಾಗಿವೆ. ಏತನ್ಮಧ್ಯೆ, ಕರೋನಾವೈರಸ್ ಬಗ್ಗೆ ಮಹತ್ವದ ಮಾಹಿತಿ ನೀಡಿರುವ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ (Dr Randeep Guleria), ಕರೋನಾ ವೈರಸ್ ಇನ್ನು ಮುಂದೆ ಸಾಂಕ್ರಾಮಿಕವಲ್ಲ. ಆದಾಗ್ಯೂ, ಭಾರತದ ಪ್ರತಿಯೊಬ್ಬ ವ್ಯಕ್ತಿಯು ಲಸಿಕೆ ಪಡೆಯುವವರೆಗೂ ಜಾಗರೂಕರಾಗಿರಬೇಕು ಎಂದು ಅವರು ಎಚ್ಚರಿಸಿದರು. ವಿಶೇಷವಾಗಿ ಪ್ರತಿಯೊಬ್ಬರು ಹಬ್ಬಗಳಲ್ಲಿ ಜನದಟ್ಟಣೆಯನ್ನು ತಪ್ಪಿಸುವುದು ಮುಖ್ಯ ಎಂದವರು ತಿಳಿಸಿದ್ದಾರೆ.

ಕರೋನಾ ಸಂಪೂರ್ಣವಾಗಿ ಕೊನೆಗೊಳ್ಳುವುದಿಲ್ಲ:
ಭಾರತದಲ್ಲಿ ದಾಖಲಾಗುತ್ತಿರುವ ಅಂಕಿಅಂಶಗಳು ಈಗ 25 ಸಾವಿರದಿಂದ 40 ಸಾವಿರದ ನಡುವೆ ಬರುತ್ತಿದೆ ಎಂದು ಉಲ್ಲೇಖಿಸಿರುವ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ (Dr Randeep Guleria), ಜನರು ಜಾಗರೂಕರಾಗಿದ್ದರೆ ಈ ಪ್ರಕರಣಗಳು ಕ್ರಮೇಣ ಕಡಿಮೆಯಾಗುತ್ತವೆ. ಆದಾಗ್ಯೂ, ಕರೋನಾ ಸಂಪೂರ್ಣವಾಗಿ ಕೊನೆಗೊಳ್ಳುವುದಿಲ್ಲ. ಆದರೆ ಭಾರತದಲ್ಲಿ ಕ್ಷಿಪ್ರ ಲಸಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಕರೋನಾ ಸಾಂಕ್ರಾಮಿಕ ರೂಪವನ್ನು ತೆಗೆದುಕೊಳ್ಳುವುದು ಅಥವಾ ದೊಡ್ಡ ಪ್ರಮಾಣದಲ್ಲಿ ಹರಡುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರು, ಕರೋನಾವೈರಸ್ (Coronavirus) ಶೀಘ್ರದಲ್ಲೇ ಸಾಮಾನ್ಯ ಕಾಯಿಲೆಗಳಂತೆ ಅಂದರೆ ಜ್ವರ, ಕೆಮ್ಮು, ನೆಗಡಿಯಂತೆ ಆಗುತ್ತದೆ. ಏಕೆಂದರೆ ಈಗ ಈ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಜನರಲ್ಲಿ ಸಿದ್ಧಪಡಿಸಲಾಗಿದೆ. ಆದರೆ ಅನಾರೋಗ್ಯ ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಈ ಕಾಯಿಲೆಯಿಂದ ಜೀವಕ್ಕೆ ಅಪಾಯವನ್ನು ಎದುರಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ- Coronavirus: ಇನ್ನೂ ಎಷ್ಟು ದಿನ ಇರುತ್ತೆ ಈ ಸಾಂಕ್ರಾಮಿಕ ರೋಗ? ಕಳವಳಕಾರಿ ವಿಷಯ ಹೇಳಿದ ಡಬ್ಲ್ಯುಎಚ್‌ಒ

ಬೂಸ್ಟರ್ ಡೋಸ್‌ನ ಬಗ್ಗೆ ಮುಖ್ಯವಾದ ಮಾಹಿತಿ:
ಲಸಿಕೆ ಪಡೆಯುವ ಜನರ ಮನಸ್ಸಿನಲ್ಲಿ ಲಸಿಕೆ ಜೀವಮಾನವಿಡೀ ರಕ್ಷಣೆ ನೀಡುತ್ತದೆಯೇ ಅಥವಾ ಸ್ವಲ್ಪ ಸಮಯದ ನಂತರ ಮತ್ತೆ ಬೂಸ್ಟರ್ ಡೋಸ್ ಅಗತ್ಯವಿದೆಯೇ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡಿತ್ತು. ಈ ಸಂಬಂಧ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಾ ಗುಲೇರಿಯಾ ಅವರು ಭಾರತದಲ್ಲಿ ಎಲ್ಲಾ ಜನರು ಲಸಿಕೆಯ ಎರಡು ಡೋಸ್‌ಗಳನ್ನು ಪಡೆಯಬೇಕು. ಮಕ್ಕಳು ಕೂಡ ಲಸಿಕೆ ಪಡೆಯಬೇಕು. ಆಗ ಮಾತ್ರ ಬೂಸ್ಟರ್ ಡೋಸ್‌ಗೆ ಒತ್ತು ನೀಡಬೇಕು ಎಂದರು.

ಪ್ರಪಂಚದ ಎಲ್ಲ ದೇಶಗಳ ಜನರು ಲಸಿಕೆಯನ್ನು (Corona Vaccine) ಪಡೆಯಬೇಕು. ಇದನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು ಅಕ್ಟೋಬರ್‌ನಲ್ಲಿ ಲಸಿಕೆ ಸ್ನೇಹ ಕಾರ್ಯಕ್ರಮವನ್ನು ಪುನರಾರಂಭಿಸುವ ಬಗ್ಗೆ ಮಾತನಾಡಿದೆ ಎಂದು ಅವರು ಹೇಳಿದರು. ಏಪ್ರಿಲ್ ತಿಂಗಳಲ್ಲಿ, ಭಾರತ ಸರ್ಕಾರವು ಭಾರತೀಯರಿಗೆ ಆದ್ಯತೆ ನೀಡಿ, ಲಸಿಕೆಯನ್ನು ಇತರ ದೇಶಗಳಿಗೆ ದಾನ ಮಾಡುವ ಕೆಲಸವನ್ನು ಸ್ವಲ್ಪ ಸಮಯದವರೆಗೆ ಮುಂದೂಡಿತ್ತು. ಆದರೆ ಏಮ್ಸ್ ನಿರ್ದೇಶಕರ ಪ್ರಕಾರ, ಪ್ರಪಂಚದ ಯಾವುದೇ ದೇಶದ ಜನರಿಗೆ ಲಸಿಕೆ ಪಡೆಯಲು ಸಾಧ್ಯವಾಗದಿದ್ದರೆ ಅದರಿಂದ ಬೇರೆ ದೇಶಗಳು ಕೂಡ ಅಪಾಯಕ್ಕೆ ಸಿಲುಕಲಿವೆ ಎನ್ನಲಾಗಿದೆ.

ಇದನ್ನೂ ಓದಿ- ಸಿನಿಮಾ ಪ್ರಿಯರಿಗೆ ಸದ್ಯದಲ್ಲಿಯೇ ಗುಡ್ ನ್ಯೂಸ್: ಥಿಯೇಟರ್ ಗಳ ಮೇಲೆ ಹೇರಿದ್ದ ನಿರ್ಬಂಧ ತೆರವು?!

ಡಿಸೆಂಬರ್ ವೇಳೆಗೆ ಎಲ್ಲರಿಗೂ ಲಸಿಕೆ:
ವೈರಸ್ ಎಲ್ಲಿಂದಲಾದರೂ ಮತ್ತೆ ಹರಡಬಹುದು ಎಂದು ಶಂಕೆ ವ್ಯಕ್ತಪಡಿಸಿದ ಡಾ ಗುಲೇರಿಯಾ, ಈ ದಿಕ್ಕಿನಲ್ಲಿ, ಭಾರತವು ತನ್ನ ಜವಾಬ್ದಾರಿಯನ್ನು ವಿಶ್ವಕ್ಕೆ ಲಸಿಕೆಯನ್ನು ವಿತರಿಸುವ ಮೂಲಕ ನಿರ್ವಹಿಸುತ್ತಿದೆ. ಆದಾಗ್ಯೂ, ಸ್ವಲ್ಪ ಸಮಯದ ನಂತರ, ತುಂಬಾ ಅನಾರೋಗ್ಯ, ವೃದ್ಧರು ಅಥವಾ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಬೂಸ್ಟರ್ ಡೋಸ್ ನೀಡಬಹುದು. ಬೂಸ್ಟರ್ ಅದೇ ಲಸಿಕೆಯಿಂದ ಅಂದರೆ ಈ ಮೊದಲು ಪಡೆದಿರುವ ಲಸಿಕೆಯೇ ಆಗಿರಬೇಕು ಎಂಬುದು ಅನಿವಾರ್ಯವಲ್ಲ. ಹೊಸ ಲಸಿಕೆಯನ್ನು ಪಡೆಯುವುದರ ಮೂಲಕ ಕೂಡ ಬೂಸ್ಟರ್ ಮಾಡಬಹುದು, ಆದರೂ ಈ ನಿಟ್ಟಿನಲ್ಲಿ ಮೊದಲು ಪಾಲಿಸಿ ಮಾಡಲಾಗುವುದು ಎಂದು ತಿಳಿಸಿದರು.

ಕೆಲವು ಜನರಿಗೆ ಬೂಸ್ಟರ್ ಡೋಸ್ ಬೇಕಾಗಬಹುದು. ಈ ಬೂಸ್ಟರ್ ಅನ್ನು ಇತರ ಲಸಿಕೆಗಳಿಗೂ ಬಳಸಬಹುದು. ಆದರೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು, ಪ್ರತಿಯೊಬ್ಬರೂ ಮೊದಲು ಲಸಿಕೆ ಪಡೆಯುವುದು ಅವಶ್ಯಕ. ನಂತರ ಅದು ಬೂಸ್ಟರ್‌ನ ಸರದಿ. ಡಿಸೆಂಬರ್ ವೇಳೆಗೆ ಎಲ್ಲರಿಗೂ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಡಾ. ಗುಲೇರಿಯಾ ಅವರು  ಎಂದು ಹೇಳಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News