Corona Update: ದೇಶದಲ್ಲಿ ಸತತ 3ನೇ ದಿನವೂ ಇಳಿಕೆಯಾದ ಸೋಂಕಿನ ಪ್ರಕರಣ

ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ 6,68,154 ಸೋಂಕಿತ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ, ಇದು ಒಟ್ಟು ಪ್ರಕರಣಗಳಲ್ಲಿ 8.50 ಪ್ರತಿಶತದಷ್ಟಿದೆ.

Last Updated : Oct 25, 2020, 01:40 PM IST
  • ಭಾರತದಲ್ಲಿ 24 ಗಂಟೆಗಳಲ್ಲಿ ಸತತ ಮೂರನೇ ದಿನವೂ ಕರೋನವೈರಸ್ ಪ್ರಕರಣಗಳ ಸಂಖ್ಯೆ 55 ಸಾವಿರಕ್ಕಿಂತ ಕಡಿಮೆಯಿದೆ.
  • ಅಕ್ಟೋಬರ್ 24 ರವರೆಗೆ 10,25,23,469 ಜನರಿಗೆ ಕರೋನಾ ಟೆಸ್ಟ್ ಮಾಡಿಸಲಾಗಿದೆ ಎಂದು ಐಸಿಎಂಆರ್ (ICMR) ತಿಳಿಸಿದೆ.
  • ದೇಶದಲ್ಲಿ ಸೋಂಕಿನಿಂದಾಗಿ 1,18,534 ಜನರು ಸಾವನ್ನಪ್ಪಿದ್ದಾರೆ
Corona Update: ದೇಶದಲ್ಲಿ ಸತತ 3ನೇ ದಿನವೂ ಇಳಿಕೆಯಾದ ಸೋಂಕಿನ ಪ್ರಕರಣ title=
File Image

ನವದೆಹಲಿ: ಭಾರತದಲ್ಲಿ 24 ಗಂಟೆಗಳಲ್ಲಿ ಸತತ ಮೂರನೇ ದಿನವೂ ಕರೋನವೈರಸ್ (Coronavirus) ಪ್ರಕರಣಗಳ ಸಂಖ್ಯೆ 55 ಸಾವಿರಕ್ಕಿಂತ ಕಡಿಮೆಯಿದ್ದರೆ, ಸುಮಾರು ಮೂರು ತಿಂಗಳ ನಂತರ, ಒಂದು ದಿನದಲ್ಲಿ ಸಾವನ್ನಪ್ಪಿದವರ ಸಂಖ್ಯೆ 578ಕ್ಕೆ ಇಳಿದಿದೆ. ಬೆಳಿಗ್ಗೆ ಎಂಟು ಗಂಟೆಗೆ ಬಿಡುಗಡೆಯಾದ ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ ಭಾರತದಲ್ಲಿ 50,129 ಹೊಸ ರೋಗಿಗಳ ನಂತರ, ಒಟ್ಟು ಪ್ರಕರಣಗಳ ಸಂಖ್ಯೆ 78,64,811ಕ್ಕೆ ಏರಿದರೆ, ಸಾವಿನ ಸಂಖ್ಯೆ 1,18,534ಕ್ಕೆ ಏರಿದೆ.

ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ ಸತತ ಮೂರನೇ ದಿನ 7 ಲಕ್ಷಕ್ಕಿಂತ ಕಡಿಮೆಯಿದ್ದರೆ, ಸೋಂಕಿನಿಂದ ಗುಣಮುಖರಾದವರ ರಾಷ್ಟ್ರೀಯ ಚೇತರಿಕೆಯ ಪ್ರಮಾಣವು 90 ಪ್ರತಿಶತಕ್ಕೆ ಏರಿದೆ. ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 6,68,154 ಸೋಂಕಿತ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ, ಇದು ಒಟ್ಟು ಪ್ರಕರಣಗಳಲ್ಲಿ 8.50 

ದೇಶದಲ್ಲಿ ಒಟ್ಟು 70,78,123 ಜನರು ಸೋಂಕು ಮುಕ್ತರಾಗಿದ್ದಾರೆ. ದೇಶದಲ್ಲಿ ಸೋಂಕಿನಿಂದ ಚೇತರಿಸಿಕೊಳ್ಳುವ ಪ್ರಮಾಣ 90 ಪ್ರತಿಶತ ಮತ್ತು ಮರಣ ಪ್ರಮಾಣವು 1.51 ಶೇಕಡಾದಷ್ಟಿದೆ ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ರಾಜ್ಯಕ್ಕೆ ಕೊರೊನಾ ಲಸಿಕೆಯನ್ನು ಉಚಿತವಾಗಿ ಕೊಡಿಸುವ 'ಧಮ್ ನಿಮಗಿದೆಯೇ ಕಟೀಲ್ ಅವರೇ? -ಸಿದ್ಧು ಪ್ರಶ್ನೆ

ಭಾರತದಲ್ಲಿ ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ ಮತ್ತು ಸೋಂಕಿತರ ಸಂಖ್ಯೆ ಸೆಪ್ಟೆಂಬರ್ 5 ರಂದು 40 ಲಕ್ಷ ದಾಟಿದೆ. ಸೆಪ್ಟೆಂಬರ್ 16 ರಂದು ಒಟ್ಟು ಪ್ರಕರಣಗಳು  50 ಲಕ್ಷ, ಸೆಪ್ಟೆಂಬರ್ 28 ರಂದು 60 ಲಕ್ಷ ಮತ್ತು ಅಕ್ಟೋಬರ್ 11 ರಂದು 70 ಲಕ್ಷ ದಾಟಿದೆ.

ಅಕ್ಟೋಬರ್ 24 ರವರೆಗೆ 10,25,23,469 ಜನರಿಗೆ ಕರೋನಾ ಟೆಸ್ಟ್ ಮಾಡಿಸಲಾಗಿದೆ ಎಂದು ಐಸಿಎಂಆರ್ (ICMR) ತಿಳಿಸಿದೆ. ಶನಿವಾರ 11,40,905 ಮಾದರಿಗಳನ್ನು ಪರೀಕ್ಷಿಸಲಾಯಿತು. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಸಾವನ್ನಪ್ಪಿದ 578 ಜನರಲ್ಲಿ 137 ಮಂದಿ ಮಹಾರಾಷ್ಟ್ರದವರು, 59 ಮಂದಿ ಪಶ್ಚಿಮ ಬಂಗಾಳದವರು, 55 ಜನರು ಛತ್ತೀಸ್‌ಗಢದವರು. ಕರ್ನಾಟಕದದಿಂದ 52, ದೆಹಲಿಯಿಂದ 36 ಮತ್ತು ತಮಿಳುನಾಡಿನ 35 ಮಂದಿ ಇದ್ದಾರೆ. 

ಗುಡ್ ನ್ಯೂಸ್: ಕರೋನಾ ಲಸಿಕೆಯನ್ನು ಫ್ರೀ ಆಗಿ ನೀಡಲಿದೆಯೇ ಮೋದಿ ಸರ್ಕಾರ?

ದೇಶದಲ್ಲಿ ಸೋಂಕಿನಿಂದಾಗಿ 1,18,534 ಜನರು ಸಾವನ್ನಪ್ಪಿದ್ದಾರೆ, ಅದರಲ್ಲಿ ಮಹಾರಾಷ್ಟ್ರದಲ್ಲಿ 43,152, ತಮಿಳುನಾಡಿನಲ್ಲಿ 10,893, ಕರ್ನಾಟಕ (Karnataka)ದಲ್ಲಿ 10,873, ಉತ್ತರಪ್ರದೇಶದಲ್ಲಿ 6,854, ಆಂಧ್ರಪ್ರದೇಶದಲ್ಲಿ 6,566, ಪಶ್ಚಿಮ ಬಂಗಾಳದಲ್ಲಿ 6,227, ದೆಹಲಿಯಲ್ಲಿ 6,225, ಪಂಜಾಬ್‌ನ 4,107 ಮತ್ತು ಗುಜರಾತ್‌ನ 3,679 ಜನರು ಸೇರಿದ್ದಾರೆ. 

Trending News