Corona Kavach App: ಹತ್ತಿರದಲ್ಲಿರುವ Coronavirus ಸೋಂಕಿತರ ಮಾಹಿತಿ ನೀಡಲಿದೆ ಈ App

ಕೊರೊನಾ ವೈರಸ್ ನಿಂದ ಪಾರಾಗಲು ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತ ಸರ್ಕಾರ ಆಪ್ ವೊಂದನ್ನು ಸಿದ್ಧಪಡಿಸುತ್ತಿದೆ. ಈ ಆಪ್ ಗೆ 'ಕೊರೊನಾ ಕವಚ್' ಆಪ್ ಎಂದು ಹೆಸರಿಸಲಾಗಿದೆ.

Last Updated : Mar 29, 2020, 10:25 AM IST
Corona Kavach App: ಹತ್ತಿರದಲ್ಲಿರುವ Coronavirus ಸೋಂಕಿತರ ಮಾಹಿತಿ ನೀಡಲಿದೆ ಈ App title=

ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ದೇಶಾದ್ಯಂತ ಲಾಕ್ ಡೌನ್ ಘೋಶಿಸಲಾಗಿದ್ದರೂ ಕೂಡ ಹೊರ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಈ ನಡುವೆ ಭಾರತ ಸರ್ಕಾರದ ಒಂದು ಪ್ರಯತ್ನ ದೇಶದ ನಾಗರಿಕರಿಗೆ ತುಸು ನೆಮ್ಮದಿ ನೀಡಲಿದೆ. 

ಇದಕ್ಕಾಗಿ ಭಾರತ ಸರ್ಕಾರ ಒಂದು ಆಪ್ ಸಿದ್ಧಪಡಿಸುತ್ತಿದೆ. ಹೌದು, ಕೊರೊನಾ ವೈರಸ್ ನಿಂದ ಪಾರಾಗಲು ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತ ಸರ್ಕಾರ ಆಪ್ ವೊಂದನ್ನು ಸಿದ್ಧಪಡಿಸುತ್ತಿದೆ. ಈ ಆಪ್ ಗೆ 'ಕೊರೊನಾ ಕವಚ್' ಆಪ್ ಎಂದು ಹೆಸರಿಸಲಾಗಿದೆ. ಸದ್ಯ ಈ ಆಪ್ ನ ಟೆಸ್ಟಿಂಗ್ ಜಾರಿಯಲ್ಲಿದೆ. ಆದರೆ, ಈ ಆಪ್ ನಮ್ಮ-ನಿಮ್ಮೆಲ್ಲರಿಗೆ ಎಷ್ಟೊಂದು ಲಾಭಕಾರಿಯಾಗಲಿದೆ ಎಂಬುದನ್ನು ತಿಳಿದರೆ, ನೀವು ಇದರ ಬಿಡುಗಡೆಗೆ ನಿಶ್ಚಿತವಾಗಿ ತುದಿಗಾಲಲ್ಲಿ ನಿಂದು ಕಾಯುವಿರಿ.

ಈ ಆಪ್ ನಿಂದ ಏನಾಗಲಿದೆ?
ವರದಿಗಳ ಪ್ರಕಾರ, ಕೊರೊನಾ ಕವಚ್ ಆಪ್ ತನ್ನ ಬಳಕೆದಾರರು ಇರುವ ಲೋಕೇಶನ್ ನ ಹತ್ತಿರದಲ್ಲಿ ಇರುವ ಕೊರೊನಾ ಸೋಂಕಿತರ ಬಗ್ಗೆ ಮಾಹಿತಿ ಒದಗಿಸಲಿದೆ. ಇದಕ್ಕಾಗಿ ಇದು ನಿಮ್ಮ ಲೋಕೇಶನ್ ಅನ್ನು ಬಳಕೆ ಮಾಡಲಿದೆ. ಲೋಕೇಶನ್ ದತ್ತಾಂಶದ ಆಧಾರದ ಮೇಲೆ ಈ ಆಪ್ ನಿಮ್ಮ ಹತ್ತಿರದಲ್ಲ್ಲಿ ಇರುವ ಕೊರೊನಾ ರೋಗಿಗಳ ಕುರಿತು ಮಾಹಿತಿ ನೀಡಲಿದೆ. ಅಷ್ಟೇ ಅಲ್ಲ ಸರ್ಕಾರ ಯಾವ ನಾಗರಿಕರಿಗೆ  ಸೆಲ್ಫ್ ಕ್ವಾರಂಟೀನ್ ಆಗಲು ಸೂಚಿಸಿದೆ ಎಂಬುದರ  ಮಾಹಿತಿಯನ್ನೂ ಸಹ ಈ ಆಪ್ ನಿಮಗೆ ನೀಡಲಿದೆ. ಈ ಆಪ್ ನಿಮ್ಮಿಂದ ಕೊರೊನಾ ಸೋಂಕಿತ ರೋಗಿ ಎಷ್ಟು ದೂರದಲ್ಲಿದ್ದಾನೆ ಎಂಬುದನ್ನು ನಿಮಗೆ ತಿಳಿಸಲಿದೆ. ಆದರೆ, ಆ ರೋಗಿಯ ಗುರುತು ಮಾತ್ರ ಗೌಪ್ಯವಾಗಿ ಇಡಲಿದೆ. ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಆಪ್ ಸಿದ್ಧಪಡಿಸಲಾಗುತ್ತಿದೆ. ಈ ಆಪ್ ಭಾರತ ಸರ್ಕಾರಕ್ಕೂ ಸಹ ಲಾಭಕಾರಿಯಾಗಲಿದೆ. ಈ ಆಪ್ ನ ಸಹಾಯದಿಂದ ಸರ್ಕಾರ ರೋಗಿಗಳ ದಾಖಲೆಗಳನ್ನು ಸಂಗ್ರಹಿಸಲಿದೆ. ಒಂದು ವೇಳೆ ನಿಮ್ಮ ಅಕ್ಕಪಕ್ಕಕ್ಕೆ ಯಾವುದೇ ಕೊರೊನಾ ವೈರಸ್ ರೋಗಿ ಇದ್ದರೆ ಅಥವಾ ನಿಮ್ಮ ಹತ್ತಿರದಿಂದ ಹಾದುಹೋದರೆ ತಕ್ಷಣ ಈ ಆಪ್ ನಿಮಗೆ ಅಲರ್ಟ್ ಕೂಡ ನೀಡಲಿದೆ. ಇದಕ್ಕಾಗಿ ರೆಡ್ ಕಲರ್ ಅಲರ್ಟ್ ಅನ್ನು ಈ ಆಪ್ ನಲ್ಲಿ ಜಾರಿಗೊಳಿಸಲಾಗುವುದು.

ಭಾರತ ಸರ್ಕಾರದ ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಐಟಿ ಈ ಆಪ್ ಅನ್ನು ಅಭಿವೃದ್ಧಿಗೊಲಿಸುತ್ತಿದೆ. ಈ ಆಪ್ ಅನ್ನು ನೀವು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ನಿಮಗೆ ಇತರೆ ಆಪ್ ಗಳಂತೆ ಮಾಹಿತಿಗಳನ್ನು ಒದಗಿಸಬೇಕಾಗಲಿದೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಅಗತ್ಯವಾಗಿದೆ. OTP ವೆರಿಫಿಕೆಶನ್ ಬಳಿಕ ನೀವು ಈ ಆಪ್ ಅನ್ನು ಬಳಸಬಹುದಾಗಿದೆ.
 

Trending News