Covid Curfew: 75 ಜಿಲ್ಲೆಗಳಲ್ಲಿ ಕೋವಿಡ್ ಕರ್ಫ್ಯೂ ತೆರವುಗೊಳಿಸಿದ ಯುಪಿ ಸರ್ಕಾರ

ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ 797 ಹೊಸ ಕೋವಿಡ್ -19  ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಸೋಂಕಿನ ಎರಡನೇ ತರಂಗವು ಪ್ರಾರಂಭಿಸಿವಾದಾಗಿನಿಂದ ಇದೇ ಮೊದಲ ಬಾರಿಗೆ ದೈನಂದಿನ ಪ್ರಕರಣಗಳ ಸಂಖ್ಯೆ 1,000 ಕ್ಕಿಂತ ಕಡಿಮೆಯಾಗಿದೆ.

Written by - Yashaswini V | Last Updated : Jun 8, 2021, 01:25 PM IST
  • ಉತ್ತರ ಪ್ರದೇಶ ಎಲ್ಲಾ ಜಿಲ್ಲೆಗಳಿಂದ ಕರ್ಪ್ಯೂ ತೆರವು
  • ಈಗ ರಾಜ್ಯದಲ್ಲಿ ನೈಟ್ ಕರ್ಫ್ಯೂ ಮಾತ್ರ ಅನ್ವಯ
  • ಕರೋನಾ ಪ್ರಕರಣಗಳಲ್ಲಿ ದಾಖಲೆ ಪ್ರಮಾಣದಲ್ಲಿ ಇಳಿಕೆ ಕಂಡು ಬಂದ ಹಿನ್ನಲೆಯಲ್ಲಿ ಈ ನಿರ್ಧಾರ
Covid Curfew: 75 ಜಿಲ್ಲೆಗಳಲ್ಲಿ ಕೋವಿಡ್ ಕರ್ಫ್ಯೂ ತೆರವುಗೊಳಿಸಿದ ಯುಪಿ ಸರ್ಕಾರ title=
ಉತ್ತರ ಪ್ರದೇಶ ಎಲ್ಲಾ ಜಿಲ್ಲೆಗಳಿಂದ ಕರ್ಪ್ಯೂ ತೆರವು

ಲಕ್ನೋ: ಕರೋನಾದ ಪ್ರಕರಣಗಳು ಕಡಿಮೆಯಾಗುತ್ತಿರುವ ಮಧ್ಯೆ ಉತ್ತರ ಪ್ರದೇಶದಿಂದ ಪರಿಹಾರದ ಸುದ್ದಿ ಬಂದಿದೆ. ಈಗ ರಾಜ್ಯದ ಎಲ್ಲಾ 75 ಜಿಲ್ಲೆಗಳಲ್ಲಿ ಕರೋನಾ ಕರ್ಫ್ಯೂ (Corona Curfew) ತೆರವುಗೊಳಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ.  ಬುಧವಾರದಿಂದ ಇಡೀ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ (Night Curfew) ಮಾತ್ರ ಜಾರಿಯಲ್ಲಿರಲಿದೆ ಎಂದು ಹೇಳಲಾಗಿದೆ.

ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ:
ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಾಹಿತಿ ನವನೀತ್ ಸೆಹಗಲ್ ಅವರು, ಈಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕರೋನಾ ಕರ್ಫ್ಯೂ (Corona Curfew) ನಿಂದ ವಿಶ್ರಾಂತಿ ನೀಡಲಾಗಿದೆ. ಆದರೆ, ಜೂನ್ 9 ರ ಬುಧವಾರದಿಂದ ಇಡೀ ರಾಜ್ಯದ ಎಲ್ಲಾ 75 ಜಿಲ್ಲೆಗಳಲ್ಲಿ ಸಂಜೆ ಏಳು ಗಂಟೆಯಿಂದ ಬೆಳಿಗ್ಗೆ ಏಳು ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಹೇಳಿದರು.

ಇದನ್ನೂ ಓದಿ - Lockdown Relaxation in Delhi: ಜೂನ್ 7ರಿಂದ ದೆಹಲಿಯಲ್ಲಿ ಮಾರ್ಕೆಟ್, ಮಾಲ್‌ಗಳು ಓಪನ್, ಆದರೆ...

ಮಂಗಳವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕರೋನಾವೈರಸ್  (Coronavirus) ಪ್ರಕರಣಗಳು ಕಡಿಮೆಯಾಗಿವೆ ಮತ್ತು ಈಗ ರಾಜ್ಯದಲ್ಲಿ ಒಟ್ಟು 14 ಸಾವಿರ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನವನೀತ್ ಸೆಹಗಲ್ ಮಾಹಿತಿ ನೀಡಿದ್ದಾರೆ.

ಎಲ್ಲಾ ಜಿಲ್ಲೆಗಳಲ್ಲಿ 600 ಕ್ಕಿಂತ ಕಡಿಮೆ ಪ್ರಕರಣಗಳು:
ಈಗ ರಾಜ್ಯದಲ್ಲಿ 14 ಸಾವಿರಕ್ಕಿಂತ ಕಡಿಮೆ ಕರೋನಾ ಸಕ್ರಿಯ ಪ್ರಕರಣಗಳಿವೆ. ಎಲ್ಲಾ 75 ಜಿಲ್ಲೆಗಳಲ್ಲಿ 600 ಕ್ಕಿಂತ ಕಡಿಮೆ ಪ್ರಕರಣಗಳಿವೆ. ಇದಲ್ಲದೆ, ಕಳೆದ 24 ಗಂಟೆಗಳಲ್ಲಿ ಕೇವಲ 797 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ ಎಂದು ಸೆಹಗಲ್ ಹೇಳಿದ್ದಾರೆ.

ಇದನ್ನೂ ಓದಿ - ಕರೋನಾ ಸಂಖ್ಯೆಯಲ್ಲಿ ಗಣನೀಯ ಇಳಿಮುಖ..!ಅನ್ ಲಾಕ್ ನತ್ತ ಭಾರತ

ಈ ಹಿಂದೆ, ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿ, ಇಡೀ ರಾಜ್ಯದಿಂದ ಕರ್ಫ್ಯೂ ತೆಗೆದುಹಾಕಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಾಲ್ಕು ಜಿಲ್ಲೆಗಳಲ್ಲಿ ರಾಜಧಾನಿ ಲಕ್ನೋ ಸೇರಿದಂತೆ ಮೀರತ್, ಸಹರಾನ್‌ಪುರ ಮತ್ತು ಗೋರಖ್‌ಪುರ ಸೇರಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News