ಆದಿತ್ಯ ಎಲ್1: ಸೌರ ಶಕ್ತಿಗಳ ಸಮನ್ವಯ - ಸಿಎಂಇಗಳು ಹಾಗೂ ಸೌರ ಮಾರುತಗಳ ಅನಾವರಣ

Aditya L1 Mission : ಕರೋನಲ್ ಮಾಸ್ ಇಜೆಕ್ಷನ್‌ಗಳು (ಸಿಇಎಂ) ಎಂದರೆ ಸೂರ್ಯ ಕರೋನ ಎಂದು ಕರೆಯಲ್ಪಡುವ ತನ್ನ ಹೊರಮೈಯಿಂದ ಹೊರಗೆಡಹುವ ಬಿಸಿಯಾದ ಅನಿಲಗಳು ಹಾಗೂ ಕಾಂತೀಯ ಶಕ್ತಿಯಾಗಿದೆ.

Written by - Girish Linganna | Last Updated : Sep 1, 2023, 04:14 PM IST
  • ಕರೋನಲ್ ಮಾಸ್ ಇಜೆಕ್ಷನ್‌ಗಳು ನಿಧಾನಗತಿಯವಾಗಿವೆ.
  • ಕೆಲವು ಸಿಎಂಇಗಳು ಭೂಮಿಯ ಬಳಿ ತಲುಪಲು 15ರಿಂದ‌ 18 ಗಂಟೆಗಳ ಅವಧಿ ತೆಗೆದುಕೊಳ್ಳುತ್ತವೆ.
  • ನಿಧಾನವಾಗಿ ಸಾಗುವ ಕೆಲವು ಸಿಎಂಇಗಳು ಭೂಮಿಗೆ ತಲುಪಲು ಹಲವು ದಿನಗಳೇ ಬೇಕಾಗುತ್ತವೆ.
ಆದಿತ್ಯ ಎಲ್1: ಸೌರ ಶಕ್ತಿಗಳ ಸಮನ್ವಯ - ಸಿಎಂಇಗಳು ಹಾಗೂ ಸೌರ ಮಾರುತಗಳ ಅನಾವರಣ title=
aditya-l1

Aditya L1 : ಸೌರ ಜ್ವಾಲೆಗಳು ಸೂರ್ಯನಿಂದ ಚಿಮ್ಮಿ, ಅಂದಾಜು 8 ನಿಮಿಷಗಳ ಅವಧಿಯಲ್ಲಿ ಭೂಮಿಯನ್ನು ತಲುಪುವ ಇಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಶನ್‌ಗಳು. ಆದರೆ ಕರೋನಲ್ ಮಾಸ್ ಇಜೆಕ್ಷನ್‌ಗಳು ನಿಧಾನಗತಿಯವಾಗಿವೆ. ಕೆಲವು ಸಿಎಂಇಗಳು ಭೂಮಿಯ ಬಳಿ ತಲುಪಲು 15ರಿಂದ‌ 18 ಗಂಟೆಗಳ ಅವಧಿ ತೆಗೆದುಕೊಳ್ಳುತ್ತವೆ. ಇನ್ನೂ ನಿಧಾನವಾಗಿ ಸಾಗುವ ಕೆಲವು ಸಿಎಂಇಗಳು ಭೂಮಿಗೆ ತಲುಪಲು ಹಲವು ದಿನಗಳೇ ಬೇಕಾಗುತ್ತವೆ. ಅತ್ಯಂತ ವೇಗವಾಗಿ ಸಾಗುವ ಸಿಎಂಇಗಳು ಪ್ರತಿ ಸೆಕೆಂಡಿಗೆ 3,000 ಕಿಲೋಮೀಟರ್ ವೇಗದಲ್ಲಿ ಸಾಗುತ್ತವೆ! ಪ್ರತಿ ಸೆಕೆಂಡಿಗೆ 155 ಮೈಲಿ (250 ಕಿಲೋಮೀಟರ್ ಪ್ರತಿ ಗಂಟೆಗೆ) ಸಿಎಂಇಗಳು ಭೂಮಿಯ ಬಳಿ ಬರಲು ಹಲವು ದಿನಗಳು ಬೇಕಾಗುತ್ತವೆ.

ಇಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಶನ್ ಎಂದರೆ, ಬಾಹ್ಯಾಕಾಶದಲ್ಲಿ ಸಂಚರಿಸುವ ಶಕ್ತಿಯ ಅಲೆಗಳು. ಉದಾಹರಣೆಗೆ, ದೃಗ್ಗೋಚರ ಬೆಳಕು, ರೇಡಿಯೋ ತರಂಗಗಳು, ಹಾಗೂ ಕ್ಷ-ಕಿರಣಗಳು. ಗೋಚರ ಬೆಳಕು ಎನ್ನುವುದು ನಮ್ಮ ಕಣ್ಣಿಗೆ ಕಾಣುವ ಬೆಳಕಾಗಿದ್ದು, ಇದರಲ್ಲಿ ಕಾಮನಬಿಲ್ಲಿನ ಎಲ್ಲ ಬಣ್ಣಗಳೂ ಸೇರಿವೆ. ರೇಡಿಯೋ ತರಂಗಗಳು ಟಿವಿ ಮತ್ತು ರೇಡಿಯೋ ಸಂಕೇತಗಳನ್ನು ಪ್ರಸಾರ ಮಾಡಲು ಬಳಕೆಯಾಗುತ್ತವೆ. ಮೈಕ್ರೋವೇವ್‌ಗಳು ಸಾಮಾನ್ಯವಾಗಿ ಅಡುಗೆ ಮಾಡಲು ಮತ್ತು ಮೊಬೈಲ್ ಫೋನ್ ಸಂವಹನದಲ್ಲಿ ಬಳಕೆಯಾಗುತ್ತವೆ. ಕ್ಷ-ಕಿರಣಗಳು ಅತ್ಯಂತ ಕಡಿಮೆ ತರಂಗಾಂತರ ಹೊಂದಿದ್ದು, ಹಲವು ವಸ್ತುಗಳ ಮೂಲಕ ತೂರಿ ಹೋಗಬಲ್ಲವು. ಈ ಕಾರಣದಿಂದ ಅವುಗಳು ವೈದ್ಯಕೀಯ ಚಿತ್ರಣಕ್ಕೆ ಸಹಾಯಕವಾಗಿವೆ. ಈ ಮೇಲೆ ಉದಾಹರಿಸಿದ ಪ್ರತಿಯೊಂದು ರೀತಿಯ ಕಿರಣಗಳೂ ವೈವಿಧ್ಯಮಯ ಲಕ್ಷಣಗಳು ಮತ್ತು ಬಳಕೆಗಳನ್ನು ಹೊಂದಿವೆ.

ಇದನ್ನೂ ಓದಿ: 'ಭಾರತೀಯ ಜ್ಞಾನ ವ್ಯವಸ್ಥೆಯಲ್ಲಿ ಕೋರ್ಸ್‌ಗಳ ಅಭಿವೃದ್ಧಿಗೆ 17 ಕೇಂದ್ರಗಳನ್ನು ಆಯ್ಕೆ ಮಾಡಿದ ಕೇಂದ್ರ ಸರ್ಕಾರ 

ಸಿಎಂಇಗಳು ನಿಧಾನಗತಿಯಲ್ಲಿ ಸಂಚರಿಸುವುದರಿಂದ ಅವುಗಳನ್ನು ಎದುರಿಸಲು ನಮಗೆ ಹೆಚ್ಚಿನ ಸಮಯ ಸಿಗುತ್ತದೆ. ಸಿಎಂಇಗಳು ಪವರ್ ಗ್ರಿಡ್, ಸಂವಹನ ಜಾಲ, ಉಪಗ್ರಹಗಳ ಕಾರ್ಯಾಚರಣೆಗೆ ಅಡಚಣೆ ಉಂಟುಮಾಡಬಲ್ಲವು ಮತ್ತು ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳಿಗೆ ಅಪಾಯಕಾರಿ ವಿಕಿರಣಗಳಿಂದ ಅಪಾಯ ತಂದೊಡ್ಡಬಲ್ಲವು.

ಕರೋನಲ್ ಮಾಸ್ ಇಜೆಕ್ಷನ್‌ಗಳು ಸಾಮಾನ್ಯವಾಗಿ ಸೌರ ಸ್ಫೋಟಗಳ ರೀತಿಯಲ್ಲೇ ಉಂಟಾಗುತ್ತವೆ. ಸೂರ್ಯನ ಕಾಂತೀಯ ಕ್ಷೇತ್ರ ತಿರುಚಿದಾಗ, ಅಥವಾ ಬದಲಾದಾಗ, (ಸಾಮಾನ್ಯವಾಗಿ ರಬ್ಬರ್ ಬ್ಯಾಂಡನ್ನು ತಿರುಚಿದ ರೀತಿಯಲ್ಲಿ) ಇವುಗಳು ಉಂಟಾಗುತ್ತವೆ. ಈ ರೀತಿಯಲ್ಲಿ ತಿರುಚುವಿಕೆಯಿಂದ, ಸೂರ್ಯನ ಮೇಲ್ಮೈಯ ಶಕ್ತಿಶಾಲಿ ಕಾಂತೀಯ ಪ್ರದೇಶಗಳಿಂದ ಸ್ಫೋಟಗಳು ನಡೆದು, ಸಿಎಂಇಗಳು ನಿರ್ಮಾಣಗೊಳ್ಳುತ್ತವೆ. ಇದು ಒಂದು ರೀತಿ ಸೂರ್ಯನಿಂದ ಶಕ್ತಿಶಾಲಿ ಗುಳ್ಳೆ ಅಥವಾ ಅನಿಲ ಬಿಡುಗಡೆಯಾದ ರೀತಿ ತೋರುತ್ತದೆ.

ಕಾಂತೀಯ ಕ್ಷೇತ್ರ ಎನ್ನುವುದು ಸೂರ್ಯ ಅಥವಾ ಭೂಮಿಯ ರೀತಿಯ ವಸ್ತುವಿನ ಸುತ್ತಲೂ ಇರುವ, ಕಣ್ಣಿಗೆ ಕಾಣಿಸದ ಶಕ್ತಿಯಾಗಿದೆ. ಇದು ಅಯಸ್ಕಾಂತ ಲೋಹಗಳಿಗೆ ಅಂಟಿಕೊಳ್ಳುವಂತೆ, ಹಲವು ವಸ್ತುಗಳು ಬಾಹ್ಯಾಕಾಶದಲ್ಲಿ ಚಲಿಸುವಂತೆ ಮಾಡುತ್ತದೆ. ಇದು ಒಂದು ರೀತಿಯಲ್ಲಿ ಕಣ್ಣಿಗೆ ಕಾಣಿಸದ ಯಾವುದೋ ಶಕ್ತಿ ವಸ್ತುಗಳನ್ನು ಎಳೆಯುವಂತೆ, ಅಥವಾ ತಳ್ಳುವಂತೆ ಕಾರ್ಯ ನಿರ್ವಹಿಸುತ್ತದೆ. 

ಸಿಎಂಇಗಳು ಸಾಮಾನ್ಯವಾಗಿ ಸನ್ ಸ್ಪಾಟ್‌ಗಳ ಗುಂಪಿನ ಬಳಿ ಉಂಟಾಗುತ್ತವೆ ಅಥವಾ ಸೌರ ಜ್ವಾಲೆಗಳುಂಟಾಗುವ ಸಮಯದಲ್ಲೇ ಉಂಟಾಗುತ್ತವೆ. ಆದರೆ ಸಿಎಂಇಗಳು ಮತ್ತು ಸೌರ ಜ್ವಾಲೆಗಳು ಯಾವಾಗಲೂ ಜೊತೆಯಾಗಿಯೇ ಸಂಭವಿಸುವುದಿಲ್ಲ. ವಿಜ್ಞಾನಿಗಳು ಇನ್ನೂ ಈ ಎರಡು ಪ್ರಕ್ರಿಯೆಗಳ ನಡುವಿನ ಸಂಬಂಧವೇನು ಎಂದು ಅನ್ವೇಷಿಸುತ್ತಿದ್ದಾರೆ. ಸೌರ ಜ್ವಾಲೆಗಳೆಂದರೆ, ಸೂರ್ಯನ ಮೇಲ್ಮೈಯಿಂದ ಚಿಮ್ಮುವ ಅಪಾರ ಪ್ರಮಾಣದ ಪ್ರಕಾಶಮಾನವಾದ ಬೆಳಕು ಮತ್ತು ಶಕ್ತಿಯಾಗಿದೆ. ಕರೋನಲ್ ಮಾಸ್ ಇಜೆಕ್ಷನ್ (ಸಿಎಂಇ) ಎಂದರೆ ಸೂರ್ಯ ಬಾಹ್ಯಾಕಾಶಕ್ಕೆ ಚಿಮ್ಮಿಸುವ ಅನಿಲ ಹಾಗೂ ಕಾಂತೀಯ ಶಕ್ತಿಯ ಮೋಡಗಳಂತಿರುತ್ತದೆ. ಸೌರ ಜ್ವಾಲೆಗಳು ಫ್ಲಾಶ್ ಬೆಳಕಿನ ರೀತಿಯಲ್ಲಿದ್ದರೆ, ಸಿಎಂಇಗಳು ದೊಡ್ಡ ಮೋಡಗಳಂತಿರುತ್ತವೆ. ಇವೆರಡೂ ಭೂ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಬಲ್ಲವಾದರೂ, ಇವೆರಡೂ ಬೇರೆ ಬೇರೆ ಪ್ರಕ್ರಿಯೆಗಳಿಂದ ಉಂಟಾಗುತ್ತವೆ. 

ಇದನ್ನೂ ಓದಿ: ಸೂರ್ಯನ ರಹಸ್ಯಗಳ ಅನಾವರಣ: ಚಂದ್ರನ ದಕ್ಷಿಣ ಧ್ರುವದ ಬಳಿಕ, ಆದಿತ್ಯ-ಎಲ್1ನಿಂದ ಸೂರ್ಯನೆಡೆಗೆ ಭಾರತ 

ಸೌರ ಜ್ವಾಲೆಗಳು ವಿವಿಧ ರೀತಿಯ ಇಲೆಕ್ಟ್ರೋಮ್ಯಾಗ್ನೆಟಿಕ್ ವಿಕಿರಣಗಳನ್ನು ಹೊರಸೂಸುತ್ತವೆ. ಅದರಲ್ಲಿ ಕ್ಷ-ಕಿರಣಗಳು, ನೇರಳಾತೀತ ಕಿರಣಗಳು ಸಹ ಸೇರಿವೆ. ಇವುಗಳು ತರಂಗಗಳ ರೂಪದಲ್ಲಿ ಸಾಗಬಲ್ಲ ಶಕ್ತಿಯ ರೂಪವಾಗಿದ್ದು, ಅಪಾರ ಶಕ್ತಿಯನ್ನು ಸಾಗಿಸಬಲ್ಲವು. ಸೌರ ಜ್ವಾಲೆಗಳು ಸಂಭವಿಸಿದಾಗ, ಅವುಗಳು ಈ ರೀತಿಯ ಶಕ್ತಿಯನ್ನು ಅಪಾರ ಪ್ರಮಾಣದಲ್ಲಿ ಸೂರ್ಯನ ಮೇಲ್ಮೈಯಿಂದ ಬಿಡುಗಡೆಗೊಳಿಸುತ್ತವೆ.

ಸಿಎಂಇಗಳು ಸೂರ್ಯನಿಂದ ಬಾಹ್ಯಾಕಾಶಕ್ಕೆ ಚಿಮ್ಮುವ ಕಣಗಳ ಬೃಹತ್ ಮೋಡದ ರೀತಿಯಲ್ಲಿದ್ದು, ಸೌರ ಜ್ವಾಲೆಗಳು ವಿವಿಧ ತರಂಗಾಂತರಗಳಲ್ಲಿ ಸೂರ್ಯನಿಂದ ಬರುವ ಬೆಳಕಿನ ರೂಪದಲ್ಲಿರುತ್ತವೆ. 

ಸೌರ ಜ್ವಾಲೆಗಳ ರೀತಿಯಲ್ಲೇ ಸಿಎಂಇಗಳು ಸೂರ್ಯ ಅತ್ಯಂತ ಸಕ್ರಿಯವಾಗಿರು ಸಂದರ್ಭದಲ್ಲಿ ಘಟಿಸುತ್ತವೆ. ಅಂದರೆ, 'ಸೋಲಾರ್ ಮ್ಯಾಕ್ಸಿಮಮ್' ಎಂದು ಕರೆಯಲಾಗುವ ಹನ್ನೊಂದು ವರ್ಷಗಳ ಅವಧಿಯಲ್ಲಿ ಸಂಭವಿಸುತ್ತವೆ. ಸಿಎಂಇಗಳು ಸೂರ್ಯನಿಂದ ದೂರ ಚಲಿಸಿದಂತೆ, ಅವುಗಳ ಗಾತ್ರವೂ ದೊಡ್ಡದಾಗುತ್ತಾ ಸಾಗುತ್ತದೆ.

ಅತ್ಯಂತ ದೊಡ್ಡ ಸಿಎಂಇ ಭೂಮಿಯ ಬಳಿ ಬರುವಾಗ, ಅದರ ಗಾತ್ರ ಸೂರ್ಯ ಮತ್ತು ಭೂಮಿಯ ನಡುವಿನ ಅಂತರದ ಕಾಲು ಭಾಗದಷ್ಟಿರುತ್ತದೆ. ಅತ್ಯಂತ ದೊಡ್ಡದಾದ ಸಿಎಂಇ ಸೌರ ಮಾರುತಕ್ಕಿಂತಲೂ ವೇಗವಾಗಿ ಚಲಿಸಿದಾಗ, ಅದು ಶಾಕ್ ವೇವ್‌ಗಳನ್ನು ಸೃಷ್ಟಿಸುತ್ತದೆ. ಈ ತರಂಗಗಳು ತಮ್ಮ ಮುಂಭಾಗದಲ್ಲಿ ಚಾರ್ಜ್ ಹೊಂದಿರುವ ಕಣಗಳನ್ನು ತಳ್ಳುತ್ತವೆ. ಆ ಮೂಲಕ ಬಾಹ್ಯಾಕಾಶದ ವಾತಾವರಣ ಹೆಚ್ಚು ಅಸ್ಥಿರಗೊಂಡು, ಹೆಚ್ಚು ಶಕ್ತಿಶಾಲಿ ಜಿಯೋಮ್ಯಾಗ್ನೆಟಿಕ್ ಮಾರುತಗಳನ್ನು ಉಂಟು ಮಾಡುತ್ತವೆ.

ಲೇಖಕರು : ಗಿರೀಶ್ ಲಿಂಗಣ್ಣ (ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News