Cooking Oil : ಕಡಿಮೆ ಆಗಲಿದೆ 'ಅಡುಗೆ ಎಣ್ಣೆ' ಬೆಲೆ : ಸರ್ಕಾರದಿಂದ 'ರಾಷ್ಟ್ರೀಯ ಖಾದ್ಯ ತೈಲ ಮಿಷನ್' ಆರಂಭ!

ಕೇಂದ್ರ ಸರ್ಕಾರವು ಈ ಹೊಸ ಪರಿಸರ ಯೋಜನೆಯಲ್ಲಿ 11,040 ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದೆ.

Written by - Channabasava A Kashinakunti | Last Updated : Aug 19, 2021, 11:43 AM IST
  • ಇಂದಿನಿಂದ ದೇಶದಲ್ಲಿ ಅಡುಗೆ ಎಣ್ಣೆ ಬೆಲೆ ಭಾರೀ ಅಗ್ಗವಾಗಲಿದೆ
  • ಕೇಂದ್ರ ಸರ್ಕಾರವು 'ರಾಷ್ಟ್ರೀಯ ಖಾದ್ಯ ತೈಲ ಮಿಷನ್-ಆಯಿಲ್ ಪಾಮ್ (NMEO-OP) ಎಂಬ ಹೊಸ ಯೋಜನೆ
  • ರಾಷ್ಟ್ರೀಯ ಖಾದ್ಯ ತೈಲ ಮಿಷನ್ 2025-26 ರ ವೇಳೆಗೆ ದೇಶೀಯ ತಾಳೆ ಎಣ್ಣೆಯ ಉತ್ಪಾದನೆ
Cooking Oil : ಕಡಿಮೆ ಆಗಲಿದೆ 'ಅಡುಗೆ ಎಣ್ಣೆ' ಬೆಲೆ : ಸರ್ಕಾರದಿಂದ 'ರಾಷ್ಟ್ರೀಯ ಖಾದ್ಯ ತೈಲ ಮಿಷನ್' ಆರಂಭ! title=

ನವದೆಹಲಿ : ಇಂದಿನಿಂದ ದೇಶದಲ್ಲಿ ಅಡುಗೆ ಎಣ್ಣೆ ಬೆಲೆ ಭಾರೀ ಅಗ್ಗವಾಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು 'ರಾಷ್ಟ್ರೀಯ ಖಾದ್ಯ ತೈಲ ಮಿಷನ್-ಆಯಿಲ್ ಪಾಮ್ (NMEO-OP) ಎಂಬ ಹೊಸ ಯೋಜನೆಯನ್ನು ಆರಂಭಿಸಿದ್ದು, ಇದರೊಂದಿಗೆ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲಿದೆ. ಬುಧವಾರ, ಕೇಂದ್ರ ಸರ್ಕಾರವು ಈ ಹೊಸ ಪರಿಸರ ಯೋಜನೆಯಲ್ಲಿ 11,040 ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದೆ.

ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಈ ಹೊಸ ಯೋಜನೆಯನ್ನು ಘೋಷಿಸಿದ್ದರು. "ಉತ್ತಮ ಬೀಜಗಳು ಮತ್ತು ತಂತ್ರಜ್ಞಾನವನ್ನು ಒಳಗೊಂಡಂತೆ ರೈತರಲ್ಲಿ ಲಭ್ಯವಿರುವ ಅಲ್ಲ ಸಂಪನ್ಮೂಲವನ್ನು ಒದಗಿಸಲು ಸರ್ಕಾರವು ರಾಷ್ಟ್ರೀಯ ಮಿಷನ್ ಮೂಲಕ ತೈಲ ಬೀಜಗಳು ಮತ್ತು ಆಯಿಲ್ ಪಾಮ್ ಮೂಲಕ 11,000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲಿದೆ" ಎಂದು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Whatsappನಲ್ಲಿ ಈ ಎರಡು ಕೆಲಸಗಳನ್ನು ಎಂದಿಗೂ ಮಾಡಬೇಡಿ, ಇಲ್ಲವೇ ನಿಮ್ಮ ಅಕೌಂಟ್ ಬ್ಯಾನ್ ಆಗುತ್ತೆ

ದೇಶೀಯ ಬೇಡಿಕೆಯನ್ನು ಪೂರೈಸಲು ಭಾರತವು ಪ್ರಾಥಮಿಕವಾಗಿ ಮತ್ತು ಹೆಚ್ಚಾಗಿ ತೈಲದ ಆಮದನ್ನು ಅವಲಂಬಿಸಿದೆ ಎಂಬುದನ್ನು ಗಮನಿಸಬೇಕು. ಆದಾಗ್ಯೂ, ಭಾರತವು ವಾರ್ಷಿಕವಾಗಿ 2.4 ಕೋಟಿ ಟನ್ ಖಾದ್ಯ ತೈಲ(Cooking Oil)ವನ್ನು ಉತ್ಪಾದಿಸುತ್ತದೆ. ನಂತರ ಬೇಡಿಕೆಯನ್ನು ಪೂರೈಸಲು ಉಳಿದ ತೈಲವು ಪ್ರಪಂಚದ ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ - ಇಂಡೋನೇಷ್ಯಾ ಮತ್ತು ಮಲೇಷಿಯಾದಿಂದ ತಾಳೆ ಎಣ್ಣೆ, ಬ್ರೆಜಿಲ್ ಮತ್ತು ಅರ್ಜೆಂಟೀನಾದಿಂದ ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ, ಮುಖ್ಯವಾಗಿ ರಷ್ಯಾ ಮತ್ತು ಉಕ್ರೇನ್ ನಿಂದ. ಒಟ್ಟು ಆಮದಿನಲ್ಲಿ, ತಾಳೆ ಎಣ್ಣೆಯು ಶೇಕಡಾ 55 ರಷ್ಟಿದೆ.

ಪ್ರಸ್ತುತ, ತಾಳೆ ಎಣ್ಣೆಯು ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಸಸ್ಯಜನ್ಯ ಎಣ್ಣೆಯಾಗಿದ್ದು, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಸ್ಯಜನ್ಯ ಎಣ್ಣೆಯನ್ನು ಬಳಸುವ ದೇಶವಾಗಿದೆ. ಗಮನಾರ್ಹವಾಗಿ, ಭಾರತದಲ್ಲಿ ಸೇವಿಸುವ ಖಾದ್ಯ ಎಣ್ಣೆಗಳಲ್ಲಿ ಸಾಸಿವೆ, ಸೋಯಾಬೀನ್, ನೆಲಗಡಲೆ, ಸೂರ್ಯಕಾಂತಿ ಎಳ್ಳು ಎಣ್ಣೆ(Sunflower oil), ನೈಜರ್ ಬೀಜ, ಕುಂಕುಮ ಬೀಜ, ಕ್ಯಾಸ್ಟರ್ ಮತ್ತು ಲಿನ್ಸೆಡ್ (ಪ್ರಾಥಮಿಕ ಮೂಲ) ಮತ್ತು ತೆಂಗಿನಕಾಯಿ, ತಾಳೆ ಎಣ್ಣೆ, ಹತ್ತಿಬೀಜ, ಅಕ್ಕಿ ಹೊಟ್ಟು, ದ್ರಾವಕದಿಂದ ತೆಗೆದ ಎಣ್ಣೆ, ಮರ ಮತ್ತು ಅರಣ್ಯ ಮೂಲ ತೈಲ. "ಭಾರತವು ಕೃಷಿ ಸರಕುಗಳ ಪ್ರಮುಖ ರಫ್ತುದಾರನಾಗಿ ಹೊರಹೊಮ್ಮುತ್ತಿರುವಾಗ, ನಮ್ಮ ಖಾದ್ಯ ತೈಲ ಅಗತ್ಯಗಳಿಗಾಗಿ ನಾವು ಆಮದನ್ನು ಅವಲಂಬಿಸಬಾರದು" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ : Bank Holidays In August: ಇಂದಿನಿಂದ 5 ದಿನಗಳವರೆಗೆ ಹಲವು ಬ್ಯಾಂಕ್ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ!

ಕೇಂದ್ರ ಸರ್ಕಾರದ ಈ ಹೊಸ ಯೋಜನೆಯ ಪ್ರಕಾರ, ರಾಷ್ಟ್ರೀಯ ಖಾದ್ಯ ತೈಲ ಮಿಷನ್(National Edible Oil Mission) 2025-26 ರ ವೇಳೆಗೆ ದೇಶೀಯ ತಾಳೆ ಎಣ್ಣೆಯ ಉತ್ಪಾದನೆಯನ್ನು ಮೂರು ಪಟ್ಟು 11 ಲಕ್ಷ ಮೆ.ಟನ್ ಗೆ ಏರಿಸುತ್ತದೆ. ದೇಶೀಯ ಖಾದ್ಯ ತೈಲದ ಬೆಲೆ ಏರಿಕೆಯನ್ನು ಕಡಿಮೆ ಮಾಡಲು ಈ ಯೋಜನೆ ಸರ್ಕಾರಕ್ಕೆ ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News