ಟ್ವಿಟ್ಟರ್ ಖಾತೆ ಡಿಲಿಟ್ ಮಾಡಿದ ರಮ್ಯಾ

ಕಾಂಗ್ರೆಸ್ ಪಕ್ಷದ ಸೋಶಿಯಲ್ ಮಿಡಿಯಾ ಮುಖ್ಯಸ್ಥೆಯಾಗಿದ್ದ ರಮ್ಯ ಈಗ ತಮ್ಮ ಸ್ವಂತ ಟ್ವಿಟ್ಟರ್ ಖಾತೆಯನ್ನು ಡಿಲಿಟ್ ಮಾಡಿದ್ದಾರೆ. 

Last Updated : Jun 2, 2019, 12:17 PM IST
ಟ್ವಿಟ್ಟರ್ ಖಾತೆ ಡಿಲಿಟ್ ಮಾಡಿದ ರಮ್ಯಾ title=
file photo

ನವದೆಹಲಿ: ಕಾಂಗ್ರೆಸ್ ಪಕ್ಷದ ಸೋಶಿಯಲ್ ಮಿಡಿಯಾ ಮುಖ್ಯಸ್ಥೆಯಾಗಿದ್ದ ರಮ್ಯ ಈಗ ತಮ್ಮ ಸ್ವಂತ ಟ್ವಿಟ್ಟರ್ ಖಾತೆಯನ್ನು ಡಿಲಿಟ್ ಮಾಡಿದ್ದಾರೆ. 

ಅವರ ಖಾತೆಯನ್ನು ಹುಡುಕಿದಾಗ ಈ ಖಾತೆ ಅಸ್ತಿತ್ವದಲ್ಲಿಲ್ಲ ಎಂದು  ತೋರಿಸುತ್ತದೆ. ಇನ್ನು ಅವರು ಟ್ವಿಟ್ಟರ್ ಖಾತೆಯನ್ನು ಏಕೆ ಡಿಲಿಟ್ ಮಾಡಿದ್ದಾರೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎನ್ನಲಾಗಿದೆ. ಎಎನ್ಐ ಸುದ್ದಿ ಸಂಸ್ಥೆ ಕಾಂಗ್ರೆಸ್ ಪಕ್ಷವನ್ನು ತೊರೆದಿರುವ ಬಗ್ಗೆ ರಮ್ಯಾರನ್ನು ಕೇಳಿದಾಗ ಅದಕ್ಕೆ ಉತ್ತರಿಸಿದ ಅವರು ನಿಮ್ಮ ಮೂಲಗಳು ತಪ್ಪಾಗಿವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆಯಾದ ನಂತರ ಪಕ್ಷದ ಅಸ್ತಿತ್ವವನ್ನು ಸೋಶಿಯಲ್ ಮಿಡಿಯಾದಲ್ಲಿ ಹೆಚ್ಚುವಂತೆ ಮಾಡಿದ್ದರು. ಅಲ್ಲದೆ ಆಗಾಗ ಬಿಜೆಪಿ ವಿರುದ್ಧ ತಮ್ಮ ಹರಿತ ಟ್ವೀಟ್ ಗಳಿಂದಾಗಿ ಹೆಸರುವಾಸಿಯಾಗಿದ್ದರು. ರಮ್ಯ ಕೊನೆಯದಾಗಿ ಅವರು ಟ್ವಿಟ್ಟರ್ ನಲ್ಲಿ  ನೂತನವಾಗಿ ಹಣಕಾಸು ಸಚಿವರಾದ ನಿರ್ಮಲಾ ಸಿತಾರಾಮನ್ ಅವರನ್ನು ಅಭಿನಂದಿಸುತ್ತಾ ಈಗ ಜಿಡಿಪಿ ಉತ್ತಮ ಸ್ಥಿತಿಯಲ್ಲಿ ಇಲ್ಲ, ಆದ್ಧರಿಂದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ನೀವು ಪ್ರಯತ್ನಿಸುತ್ತಿರಿ ಎಂದು ಆಶಿಸುತ್ತೇನೆ ಎಂದು ಹೇಳಿ ಶುಭಕೊರಿದ್ದರು. 

ಗುರುವಾರದಂದು ಕಾಂಗ್ರೆಸ್ ಪಕ್ಷವು ಟಿವಿ ಚರ್ಚೆಗಳಲ್ಲಿ ಪಕ್ಷದ ವಕ್ತಾರರು ಭಾಗವಹಿಸುವುದಕ್ಕೆ ನಿಷೇಧ ಹೇರಿದೆ.ಆದ್ದರಿಂದ "ಎಲ್ಲಾ ಮಾಧ್ಯಮ ಚಾನಲ್ಗಳು / ಸಂಪಾದಕರು ತಮ್ಮ ಶೋಗಳಲ್ಲಿ ಕಾಂಗ್ರೆಸ್ ನ ಪ್ರತಿನಿಧಿಗಳು ಇರುವುದಿಲ್ಲ ಎಂದು ಪಕ್ಷದ ವಕ್ತಾರ ರಂದೀಪ್ ಸುರ್ಜೆವಾಲಾ ಅವರು ಟ್ವೀಟ್ ಮಾಡಿದ್ದರು.

Trending News