ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ ಘಡ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಚುನಾವಣಾ ಸಮೀಕ್ಷೆ

ಮುಂಬರುವ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದ ಮೂರು ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸೋಲನ್ನು ಅನುಭವಿಸಲಿದೆ ಎಂದು ಎಬಿಪಿ ನ್ಯೂಸ್-ಸಿವೊಟರ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

Last Updated : Oct 7, 2018, 03:50 PM IST
ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ ಘಡ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಚುನಾವಣಾ ಸಮೀಕ್ಷೆ  title=

ನವದೆಹಲಿ: ಮುಂಬರುವ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದ ಮೂರು ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸೋಲನ್ನು ಅನುಭವಿಸಲಿದೆ ಎಂದು ಎಬಿಪಿ ನ್ಯೂಸ್-ಸಿವೊಟರ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಈ ಸಮೀಕ್ಷೆ ಪ್ರಕಾರ ರಾಜಸ್ತಾನದಲ್ಲಿ ಕಾಂಗ್ರೆಸ್ ಅತ್ಯುತ್ತಮ ಸ್ಥಾನದಲ್ಲಿದೆ, ಸಚಿನ್ ಪೈಲೆಟ್ ಮುಖ್ಯಮಂತ್ರಿ ಹುದ್ದೆಗೆ ಮತದಾರರ ಪ್ರಥಮ ಪ್ರಾಶಸ್ತ್ಯರಾಗಿದ್ದಾರೆ ಎನ್ನಲಾಗಿದೆ.ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ 15 ವರ್ಷಗಳ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಮರಳಲಿದೆ ಎಂದು ಸಮೀಕ್ಷೆ ಹೇಳಿದೆ.

ಮಧ್ಯಪ್ರದೇಶ ಮತ್ತು ಛತ್ತಿಸ್ ಘಡ್ ನಲ್ಲಿ ಮತ ಹಂಚಿಕೆಯಲ್ಲಿ ಸಣ್ಣ ವ್ಯತ್ಯಾಸವಷ್ಟೇ ಇರಲಿದೆ, ಅದು ಎರಡು ಪಕ್ಷಗಳ ಪರವಾಗಿಯೂ ವಾಲಬಹುದು ಎಂದು ಸಮೀಕ್ಷೆ ಹೇಳಿದೆ.ಈಗಲೇ ರಾಜಸ್ಥಾನದಲ್ಲಿ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷವು 142 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಸಚಿನ್ ಪೈಲೆಟ್ ಮುಖ್ಯಮಂತ್ರಿಯಾಗಲು 36 ಪ್ರತಿಶತದಷ್ಟು ಮತದಾರರು ಅವರನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿದ್ದಾರೆ. 

230 ಸದಸ್ಯರ ಮಧ್ಯಪ್ರದೇಶ ವಿಧಾನಸಭೆಯಲ್ಲಿ, ಕಾಂಗ್ರೆಸ್ ಸುಮಾರು 122 ಸೀಟುಗಳನ್ನು ಮತ್ತು 90 ಸದಸ್ಯರ ಛತ್ತೀಸ್ ಘಡ್  ವಿಧಾನಸಭೆಯಲ್ಲಿ 47 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಅಲ್ಲದೆ ಬಿಜೆಪಿ ಎರಡು ರಾಜ್ಯಗಳಲ್ಲಿ ಕ್ರಮವಾಗಿ 108 ಮತ್ತು 40 ಸ್ಥಾನಗಳನ್ನು ಗಳಿಸಲಿದೆ ಎನ್ನಲಾಗಿದೆ.

ಆದರೆ ವಿಶೇಷವೆಂದರೆ ಈ ಎರಡು ರಾಜ್ಯಗಳಲ್ಲಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅವರ ಛತ್ತೀಸ್ ಘಡ್ ದ ಮುಖ್ಯಮಂತ್ರಿ ರಮಣ ಸಿಂಗ್ ಅವರು ಆಡಳಿತ ವಿರೋಧಿ ಅಲೆ ಹೊಂದಿದ್ದರು ಸಹಿತ ಮುಖ್ಯಮಂತ್ರಿ ಸ್ಥಾನಕ್ಕೆ ಮತದಾರರ ಮೊದಲ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ 42.2 ಮತ್ತು 41.5 ರಷ್ಟು ಮತಗಳು ಮತ್ತು ಛತ್ತೀಸ್ಗಡದಲ್ಲಿ 38.9 ಮತ್ತು 38.2 ರಷ್ಟು ಮತಗಳನ್ನು ಪಡೆಯಲಿವೆ ಸಮೀಕ್ಷೆ ಲೆಕ್ಕಾಚಾರ ಮಾಡಿದೆ.ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇಕಡಾ 49.9 ರಷ್ಟು ಮತದಾರರ ಬೆಂಬಲವಿದ್ದರೆ , ಆಡಳಿತ ಪಕ್ಷ ಬಿಜೆಪಿ  ಶೇ 34.3 ರಷ್ಟು ಬೆಂಬಲವಿದೆ ಎನ್ನಲಾಗಿದೆ

 

Trending News