ಬಿಜೆಪಿ ಶಾಸಕನ ನಾಲಿಗೆ ಕತ್ತರಿಸಿದವರಿಗೆ 5 ಲಕ್ಷ ರೂ. ಬಹುಮಾನ ಎಂದ ಕಾಂಗ್ರೆಸ್ ನಾಯಕ

ಬಿಜೆಪಿ  ಶಾಸಕ ರಾಮ್ ಕದಮ್ ಹೆಣ್ಣು ಮಕ್ಕಳ ವಿಷಯದಲ್ಲಿ ಈ ರೀತಿಯ ಹೇಳಿಕೆ ನೀಡಿ  ಮಹಾರಾಷ್ಟ್ರ ಸಂಸ್ಕೃತಿಯನ್ನು ಅವಮಾನಿಸಿದ್ದಾರೆ ಎಂದು ಸುಬೋಧ್ ಸಾವೋಜಿ ಹೇಳಿದ್ದಾರೆ. 

Last Updated : Sep 7, 2018, 10:09 AM IST
ಬಿಜೆಪಿ ಶಾಸಕನ ನಾಲಿಗೆ ಕತ್ತರಿಸಿದವರಿಗೆ 5 ಲಕ್ಷ ರೂ. ಬಹುಮಾನ ಎಂದ ಕಾಂಗ್ರೆಸ್ ನಾಯಕ  title=

ಮುಂಬೈ : ದಹಿ ಹಂಡಿ ಕಾರ್ಯಕ್ರಮದಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡುತ್ತಾ " ನಿಮಗೆ ಕಿಡ್ನಾಪ್ ಮಾಡಿಯಾದರು ಹುಡುಗಿಯನ್ನು ನಿಮ್ಮ ಕೈ ಗೆ ಒಪ್ಪಿಸುತ್ತೇನೆ ಎಂದು ಹೇಳಿಕೆ ನೀಡಿ ಘಾಟ್ಕೋಪರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮ್ ಕದಮ್ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಸದಾ ವಿವಾದಾತ್ಮಕ ಹೇಳಿಕೆ ನೀಡುವ ಬಿಜೆಪಿ ಶಾಸಕ ರಾಮ್ ಕದಮ್ ಅವರ ನಾಲಿಗೆ ಕತ್ತರಿಸಿದವರಿಗೆ 5 ಲಕ್ಷ ರೂ.ಬಹುಮಾನ ನೀಡುವುದಾಗಿ ಕಾಂಗ್ರೆಸ್ ಮುಖಂಡ ಸುಬೋಧ್ ಸಾವೋಜಿ ಹೇಳಿದ್ದಾರೆ.

"ನೀವು ಪ್ರೀತಿಸುವ ಹುಡುಗಿಯನ್ನು ಅಪಹರಿಸಿ ತಂದು ಮದುವೆ ಮಾಡಿಸುತ್ತೇನೆ ಎಂಬ ಅಪ್ರಬುದ್ಧ, ಅಸಂಬದ್ಧ ಹೇಳಿಕೆ ನೀಡಿರುವ ರಾಮ್ ಕದಮ್ ಶಾಸಕರಾಗಲು ಲಾಯಕ್ಕಿಲ್ಲ. ಆದ್ದರಿಂದ ಅವರ ನಾಲಿಗೆ ಕತ್ತರಿಸಿದವರಿಗೆ ನಾನು 5 ಲಕ್ಷ ರೂ. ಬಹುಮಾನ ಘೋಷಿಸುತ್ತೇನೆ" ಎಂದು ಮಹಾರಾಷ್ಟ್ರದ ಮಾಜಿ ಸಚಿವ ಸುಬೋಧ್ ಹೇಳಿದ್ದಾರೆ. ಇಂತಹ ಹೇಳಿಕೆ ನೀಡುವ ಮೂಲಕ ರಾಮ್ ಕದಮ್ ಮಹಾರಾಷ್ಟ್ರ ಸಂಸ್ಕೃತಿಯನ್ನು ಅವಮಾನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ, ಛತ್ರಪತಿ ಶಿವಾಜಿ ಮಹಾರಾಜರ ಕಲ್ಪನೆಯು ಮಹಿಳೆಯನ್ನು ತಾಯಿಯಾಗಿ ಕಾಣುತ್ತದೆ. ಮಹಾರಾಷ್ಟ್ರದಲ್ಲಿ ಜನಿಸಿದ ರಾಮ್ ಕದಮ್ ಬಾಲಕಿಯರ ಅಪಹರಣ ಬಗ್ಗೆ ಮಾತಾಡುತ್ತಾನೆ. ತಾಯಿಯ ಬಗ್ಗೆ ಅಂತಹ ಹೇಳಿಕೆಯನ್ನು ನೀಡುವ ವ್ಯಕ್ತಿ ನಾಲಿಗೆ ಕಡಿದು ಹಾಕಬೇಕೆಂದು ಅವರು ಹೇಳಿದರು. ಕದಮ್ ಮಹಿಳೆಯರನ್ನು ಅವಮಾನ ಮಾಡಿದ್ದಾರೆ, ಅವರ ಹೇಳಿಕೆಯಿಂದ ಮಹಾರಾಷ್ಟ್ರದ ಸಂಸ್ಕೃತಿಗೆ ಕಳಂಕ ತಂದಿದ್ದಾರೆ. ಮಹಾರಾಷ್ಟ್ರದ ಯಾರಾದರೂ ರಾಮ್ ಕದಮ್ ನಾಲಿಗೆ ಕತ್ತರಿಸಿದರೆ ನಾನು ಅವರಿಗೆ 5 ಲಕ್ಷ ರೂ. ಬಹುಮಾನ ನೀಡುತ್ತೇನೆ ಎಂದವರು ಹೇಳಿದರು.

Trending News