ದಲಿತರ ನಿಂದನೆ: ಸಲ್ಮಾನ್ ಖಾನ್,ಶಿಲ್ಪಾಶೆಟ್ಟಿ ಮೇಲೆ ಕೇಸ್ ದಾಖಲು

     

Last Updated : Dec 23, 2017, 02:53 PM IST
ದಲಿತರ ನಿಂದನೆ: ಸಲ್ಮಾನ್ ಖಾನ್,ಶಿಲ್ಪಾಶೆಟ್ಟಿ ಮೇಲೆ ಕೇಸ್ ದಾಖಲು title=

    

ಮುಂಬೈ : ಬಾಲಿವುಡ್ ನ ಖ್ಯಾತ ನಟ ನಟಿಯರಾದ ಸಲ್ಮಾನ್ ಖಾನ್ ಮತ್ತು ಶಿಲ್ಪಾಶೆಟ್ಟಿ ಮೇಲೆ  ಟಿವಿ ಕಾರ್ಯಕ್ರಮವೊಂದರಲ್ಲಿ ದಲಿತ ಸಮುದಾಯವನ್ನು ನಿಂದಿಸಿದಕ್ಕೆ ಕೇಸ್ ದಾಖಲು ಮಾಡಲಾಗಿದೆ.

ಶುಕ್ರವಾರದಂದು ವಾಲ್ಮೀಕಿ ಸಮುದಾಯ  ಜೈಪುರದ  ರಾಜಮಂದಿರ ಸಿನಿಮಾ ಥೇಟರ್ ಎದುರು  ಟೈಗರ್ ಜಿಂದಾ ಹೈ ಚಲನಚಿತ್ರದ ಪ್ರದರ್ಶನದ ಸಂದರ್ಭದಲ್ಲಿ  ಸಲ್ಮಾನ್ ಖಾನ ಪ್ರತಿಕೃತಿ ದಹನ ಮಾಡುವುದರ ಮೂಲಕ  ಪ್ರತಿಭಟನೆ ಮಾಡಿದರು.

ಇತ್ತೀಚಿಗೆ ಸಲ್ಮಾನ ಖಾನ್ ತಮ್ಮ ಚಿತ್ರದ ಪ್ರೊಮೊ ಸಂದರ್ಭದಲ್ಲಿ, ಚಿತ್ರದಲ್ಲಿನ ಡಾನ್ಸ್ ಬಗ್ಗೆ ಮಾತನಾಡುವಾಗ ಭಂಗಿ ಎಂದು ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಮುದಾಯವು ಇಬ್ಬರು ನಟರಿಂದ ಬಹಿರಂಗ ಕ್ಷಮೆಯನ್ನು ಕೇಳಿವೆ. ಈ ಹಿಂದೆ ಶಿಲ್ಪಾಶೆಟ್ಟಿಯು ಸಹಿತ  ಖಾಸಗಿ ಟಿವಿ ಕಾರ್ಯಕ್ರಮದಲ್ಲಿ ಭಂಗಿ ಎಂದು ಬಳಸಿದ್ದು ಕೂಡ ವಿವಾದಕ್ಕೆ ಕಾರಣವಾಗಿದ್ದು ಆದ್ದರಿಂದ ಅವರ ಮೇಲೆಯು ಸಹಿತ ಕೇಸ್ ದಾಖಲಿಸಲಾಗಿದೆ.
 

ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ಈಗಾಗಲೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಹಾಗೂ ದೆಹಲಿ ಮತ್ತು ಮುಂಬೈ ಪೊಲೀಸರಿಗೆ ಏಳು ದಿನಗಳೊಳಗೆ ಉತ್ತರ ನೀಡಬೇಕೆಂದು ಪತ್ರ ಬರೆದಿದೆ. 

Trending News