2014 ರಿಂದ ದೇಶದಲ್ಲಿ ಕೋಮು ಹಿಂಸಾಚಾರ ಕಡಿಮೆಯಾಗಿದೆ: ಗೃಹ ಸಚಿವಾಲಯ

ಈಗ ದೇಶದಲ್ಲಿ ಕರ್ಫ್ಯೂ ಮುಂತಾದ ಸಂದರ್ಭಗಳು ಸೃಷ್ಟಿಯಾಗುವುದಿಲ್ಲ. ಆದರೆ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಸಾಮೂಹಿಕ ಹಿಂಸಾಚಾರದ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು  ಗೃಹ ಸಚಿವ ಜಿ.ಕಿಶನ್ ರೆಡ್ಡಿ ಹೇಳಿದ್ದಾರೆ.

Last Updated : Jul 24, 2019, 04:57 PM IST
2014 ರಿಂದ ದೇಶದಲ್ಲಿ ಕೋಮು ಹಿಂಸಾಚಾರ ಕಡಿಮೆಯಾಗಿದೆ: ಗೃಹ ಸಚಿವಾಲಯ title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಯಾದ ನಂತರ ದೇಶದಲ್ಲಿ ಕೋಮು ಹಿಂಸಾಚಾರದ ಘಟನೆಗಳು ಕಡಿಮೆಯಾಗಿವೆ ಎಂದು ಗೃಹ ಸಚಿವಾಲಯ ಹೇಳಿದೆ. 

2013 ರಲ್ಲಿ ಯುಪಿಎ ಆಡಳಿತದ ಅವಧಿಯಲ್ಲಿ, ದೇಶದಲ್ಲಿ 823 ಕೋಮು ಹಿಂಸಾಚಾರದ ಘಟನೆಗಳು ವರದಿಯಾಗಿವೆ. 2014 ರಿಂದ ಈ ಘಟನೆಗಳು ಕಡಿಮೆಯಾಗಿದ್ದು, 2018 ರಲ್ಲಿ 708 ಕೋಮು ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ ಎಂದು ಗೃಹ ಸಚಿವ ಜಿ.ಕಿಶನ್ ರೆಡ್ಡಿ ರಾಜ್ಯಸಭೆಗೆ ತಿಳಿಸಿದರು.

ಈಗ ದೇಶದಲ್ಲಿ ಕರ್ಫ್ಯೂ ಮುಂತಾದ ಸಂದರ್ಭಗಳು ಸೃಷ್ಟಿಯಾಗುವುದಿಲ್ಲ. ಆದರೆ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಸಾಮೂಹಿಕ ಹಿಂಸಾಚಾರದ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು  ಗೃಹ ಸಚಿವ ಜಿ.ಕಿಶನ್ ರೆಡ್ಡಿ ಹೇಳಿದ್ದಾರೆ.

ಕೋಮು ಹಿಂಸಾಚಾರದ ಘಟನೆಗಳು ಇಳಿಕೆಯಾಗಿದೆ. ಸಂವಿಧಾನದ ನಿಬಂಧನೆಗಳ ಪ್ರಕಾರ, 'ಸಾರ್ವಜನಿಕ ಸುವ್ಯವಸ್ಥೆ' ಮತ್ತು 'ಪೊಲೀಸ್' ರಾಜ್ಯದ ವಿಷಯಗಳಾಗಿವೆ. ಕೋಮು ಹಿಂಸಾಚಾರ ಮತ್ತು ದತ್ತಾಂಶಗಳ ನಿರ್ವಹಣೆ ಸೇರಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳು ಹೊಂದಿವೆ. ದೇಶದ ಆಂತರಿಕ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಮೇಲ್ವಿಚಾರಣೆ ಮಾಡುತ್ತದೆ ಎಂದು ಗೃಹ ಸಚಿವಾಲಯ ತನ್ನ ಲಿಖಿತ ಉತ್ತರದಲ್ಲಿ ತಿಳಿಸಿದೆ. 

ಶಾಂತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು, ನಿಯತಕಾಲಿಕವಾಗಿ ಸೂಕ್ತವಾದ ಸಲಹಾ ಪತ್ರಿಕೆಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನೂ ಸಹ ನಿಯೋಜಿಸುತ್ತಿದೆ ಎಂದು ಗೃಹಸಚಿವಾಲಯ ತಿಳಿಸಿದೆ. 

Trending News