ಇದ್ದಕ್ಕಿದ್ದಂತೆ 20 ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಸಿಎಂ ಯೋಗಿ ಆದೇಶ

ಕಬ್ಬಿನ ಆಯುಕ್ತ ಮನೀಶ್ ಚೌಹಾಣ್ ಅವರನ್ನು ಆಹಾರ ಮತ್ತು ಲಾಜಿಸ್ಟಿಕ್ಸ್ ವಿಭಾಗದ ಆಯುಕ್ತರನ್ನಾಗಿ ಮಾಡಲಾಗಿದೆ ಮತ್ತು ಅವರ ಸ್ಥಾನದಲ್ಲಿ ಕಬ್ಬು ಅಭಿವೃದ್ಧಿ ಮತ್ತು ಅಬಕಾರಿ ಮುಖ್ಯ ಕಾರ್ಯದರ್ಶಿ ಸಂಜಯ್ ಭೂಸ್ರೆಡ್ಡಿ ಅವರನ್ನು ನೇಮಿಸಲಾಗಿದೆ.

Last Updated : Sep 3, 2019, 02:23 PM IST
ಇದ್ದಕ್ಕಿದ್ದಂತೆ 20 ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಸಿಎಂ ಯೋಗಿ ಆದೇಶ title=
File Image

ಲಕ್ನೋ: ಯೋಗಿ ಆದಿತ್ಯನಾಥ್ ಸರ್ಕಾರ ಸೋಮವಾರ ರಾತ್ರೋರಾತ್ರಿ 20 ಹಿರಿಯ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಗಳನ್ನು ವರ್ಗಾಯಿಸಿದೆ. ಮುಖ್ಯಮಂತ್ರಿಗಳು ಅಲೋಕ್ ಕುಮಾರ್ ತೃತೀಯ ಮತ್ತು ಸಂಜಯ್ ಪ್ರಸಾದ್ ಅವರನ್ನು ಅವರ ಕಾರ್ಯದರ್ಶಿಗಳನ್ನಾಗಿ ನೇಮಿಸಿದ್ದಾರೆ.

ವರ್ಗಾವಣೆಯಾದ ಇತರ ಅಧಿಕಾರಿಗಳಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ಕಮಲೇಶ್ ಅವರನ್ನು ಅದೇ ಹಂತದಲ್ಲಿ ಯೋಜನಾ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಗೆ ಕಳುಹಿಸಲಾಗಿದೆ.

ಕಬ್ಬಿನ ಆಯುಕ್ತ ಮನೀಶ್ ಚೌಹಾಣ್ ಅವರನ್ನು ಆಹಾರ ಮತ್ತು ಲಾಜಿಸ್ಟಿಕ್ಸ್ ವಿಭಾಗದ ಆಯುಕ್ತರನ್ನಾಗಿ ಮಾಡಲಾಗಿದೆ ಮತ್ತು ಅವರ ಸ್ಥಾನದಲ್ಲಿ ಕಬ್ಬು ಅಭಿವೃದ್ಧಿ ಮತ್ತು ಅಬಕಾರಿ ಮುಖ್ಯ ಕಾರ್ಯದರ್ಶಿ ಸಂಜಯ್ ಭೂಸ್ರೆಡ್ಡಿ ಅವರನ್ನು ನೇಮಿಸಲಾಗಿದೆ.

ಲಕ್ನೋ ಆಯುಕ್ತ ಅನಿಲ್ ಗರ್ಗ್ ಅವರನ್ನು ಉತ್ತರ ಪ್ರದೇಶ ಕೈಗಾರಿಕಾ ಅಭಿವೃದ್ಧಿ ನಿಗಮದ (ಯುಪಿಎಸ್ಐಡಿಸಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಿಸಲಾಗಿದೆ. ಅವರ ಸ್ಥಾನದಲ್ಲಿ ಮುಖೇಶ್ ಮೆಶ್ರಮ್ ಸ್ಥಾನ ಪಡೆದಿದ್ದಾರೆ. ಮುಖೇಶ್ ಮೊದಲು ಆರೋಗ್ಯ ಶಿಕ್ಷಣದಲ್ಲಿ ಕಾರ್ಯದರ್ಶಿಯಾಗಿದ್ದರು.

ರೂಪೇಶ್ ಕುಮಾರ್ ಅವರನ್ನು ಆರೋಗ್ಯ ಶಿಕ್ಷಣ ವಿಶೇಷ ಕಾರ್ಯದರ್ಶಿಯನ್ನಾಗಿ ಮತ್ತು ಗೃಹ ಮತ್ತು ಜೈಲು ಆಡಳಿತದ ವಿಶೇಷ ಕಾರ್ಯದರ್ಶಿ ಸಂಜಯ್ ಕುಮಾರ್ ಖತ್ರಿ ಅವರನ್ನು ರಮೇಶ್ ರಂಜನ್ ಅವರೊಂದಿಗೆ ಉತ್ತರ ಪ್ರದೇಶದ ಜಲ ನಿಗಮದಲ್ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ವರ್ಗಾವಣೆಯಾದ ಇತರ ಅಧಿಕಾರಿಗಳಲ್ಲಿ, ಪ್ರಾಥಮಿಕ ಶಿಕ್ಷಣದ ವಿಶೇಷ ಕಾರ್ಯದರ್ಶಿ ಚಂದ್ರಶೇಖರ್ ಅವರನ್ನು ಚಿತ್ರಕೂಟ್ ವಿಭಾಗದ ಆಯುಕ್ತರನ್ನಾಗಿ ನೇಮಿಸಲಾಗಿದೆ. ರಾಜೇಶ್ ಕುಮಾರ್ ದ್ವಿತೀಯ ಅವರಿಗೆ ಕ್ರೀಡಾ ವಿಭಾಗದಲ್ಲಿ ವಿಶೇಷ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಗಿದ್ದು, ಸುರೇಂದ್ರ ಪ್ರಸಾದ್ ಸಿಂಗ್ ಅವರನ್ನು ಮಾಹಿತಿ ವಿಭಾಗದಲ್ಲಿ ವಿಶೇಷ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಸುರೇಂದ್ರ ರಾಮ್ ಲೋಕೋಪಯೋಗಿ ಇಲಾಖೆಯ ಹೊಸ ವಿಶೇಷ ಕಾರ್ಯದರ್ಶಿಯಾಗಲಿದ್ದಾರೆ.

Trending News