'ನನಗೆ ಸಿಎಂ ಪದವಿ ಮುಖ್ಯವಲ್ಲ' ಎಂದ ಅಶೋಕ್ ಗೆಹ್ಲೋಟ್

ರಾಜಸ್ತಾನದ ವಿಧಾನಸಭಾ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮಗೆ ಮುಖ್ಯಮಂತ್ರಿ ಪದವಿ ಮುಖ್ಯವಲ್ಲ, ಆದರೆ ತಮ್ಮ ಜೀವನದ ಕೊನೆಯ ಉಸಿರು ಇರುವವರೆಗೂ ಜನರ ಸೇವೆ ಮಾಡುವುದಾಗಿ ಹೇಳಿದ್ದಾರೆ.

Written by - Manjunath N | Last Updated : Sep 2, 2023, 05:15 PM IST
  • 1998ರಲ್ಲಿ ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಬಿಜೆಪಿಯ ಭೈರೋನ್ ಸಿಂಗ್ ಶೇಖಾವತ್ ಸಿಎಂ ಆಗಿದ್ದರು
  • ಅವರು 32 ಸ್ಥಾನಗಳನ್ನು ಗೆದ್ದರು, ನಾವು 156 ಸ್ಥಾನಗಳನ್ನು ಗಳಿಸಿದ್ದೇವೆ
  • ಸೋನಿಯಾ ಗಾಂಧಿ ನನಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ನೀಡಿದರು
'ನನಗೆ ಸಿಎಂ ಪದವಿ ಮುಖ್ಯವಲ್ಲ' ಎಂದ ಅಶೋಕ್ ಗೆಹ್ಲೋಟ್ title=

ನವದೆಹಲಿ: ರಾಜಸ್ತಾನದ ವಿಧಾನಸಭಾ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮಗೆ ಮುಖ್ಯಮಂತ್ರಿ ಪದವಿ ಮುಖ್ಯವಲ್ಲ, ಆದರೆ ತಮ್ಮ ಜೀವನದ ಕೊನೆಯ ಉಸಿರು ಇರುವವರೆಗೂ ಜನರ ಸೇವೆ ಮಾಡುವುದಾಗಿ ಹೇಳಿದ್ದಾರೆ.

ಸಚಿನ್ ಪೈಲೆಟ್ ಹಾಗೂ ತಮ್ಮ ನಡುವೆ ನಡೆಯುತ್ತಿರುವ ಶಿತಲ ಸಮರದ ಬೆನ್ನಲ್ಲೇ ಅವರು ಈ ರೀತಿ ಹೇಳಿಕೆ ನೀಡಿರುವುದು ಈಗ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.ರಾಜಸ್ತಾನದ ಬ್ಯಾವಾರಾನಲ್ಲಿ ನಡೆದ ಗ್ರಾಮೀಣ ಹಾಗೂ ನಗರ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಇದನ್ನೂ ಓದಿ: ADITYA L1 LAUNCH: ಆದಿತ್ಯ ಉಪಗ್ರಹ ಯಶಸ್ಸಿಗೆ ಹಾರೈಸಿ ಯೋಗಪಟುಗಳಿಂದ ಸೂರ್ಯ ನಮಸ್ಕಾರ

'ನಾನು ಈಗಾಗಲೇ ಮೂರು ಸಾರಿ ಮುಖ್ಯ್ಯಮಂತ್ರಿ ಪದವಿಯನ್ನು ಅಲಂಕರಿಸಿದ್ದೇನೆ, ಸಾಕಷ್ಟು ಅನುಭವವಿದೆ ಅಷ್ಟೇ ಅಲ್ಲದೆ ಎನ್ಎಸ್ಯುಐ ಅಧ್ಯಕ್ಷನಾಗಿ ಆರಂಭಿಸಿದ ನನ್ನ ರಾಜಕೀಯ ಜೀವನಕ್ಕೆ ಸುಮಾರು ಐವತ್ತು ವರ್ಷಗಳ ಆಯಸ್ಸು. ಈ ಮೂಲಕ ಗಳಿಸಿದ ಅನುಭವದಿಂದ ನಾನು ಈಗ ಸೇವೆಯನ್ನು ಮಾಡುತ್ತಿದ್ದೇನೆ' ಎಂದು ಅವರು ಹೇಳಿದರು.

ಇದನ್ನೂ ಓದಿ: "ಏಷ್ಯಾದಲ್ಲಿ ಕರ್ನಾಟಕವನ್ನು ಉತ್ತುಂಗಕ್ಕೆ ಕೊಂಡೊಯ್ಯುವುದು ನಮ್ಮ ಸರ್ಕಾರದ ಗುರಿ"

1998ರಲ್ಲಿ ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಬಿಜೆಪಿಯ ಭೈರೋನ್ ಸಿಂಗ್ ಶೇಖಾವತ್ ಸಿಎಂ ಆಗಿದ್ದರು. ಅವರು 32 ಸ್ಥಾನಗಳನ್ನು ಗೆದ್ದರು, ನಾವು 156 ಸ್ಥಾನಗಳನ್ನು ಗಳಿಸಿದ್ದೇವೆ. ಸೋನಿಯಾ ಗಾಂಧಿ ನನಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ನೀಡಿದರು. ಆ ಬಳಿಕ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಎರಡು ಬಾರಿ ಚುನಾವಣೆಯಲ್ಲಿ ಸೋತರೂ ನಾವು ಕೆಲಸ ಮಾಡುವ ಇಚ್ಛೆಯನ್ನು ಕಳೆದುಕೊಂಡಿಲ್ಲ. ಸೋತರೂ ನಾನು ಯಾವ ಹುದ್ದೆಯಲ್ಲಿದ್ದರೂ ಕೆಲಸ ಮುಂದುವರೆಸಿದೆ. 2013 ರಲ್ಲಿ ನಾವು ಸೋತಾಗ, ನೀವು ಕಳೆದ ಬಾರಿ ನಮಗೆ ಆಶೀರ್ವಾದ ಮಾಡಿದ್ದೀರಿ' ಎಂದು ಅವರು ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 
 

Trending News