Uttarakhand Cloudburst: ಡೆಹ್ರಾಡೂನ್ ನಲ್ಲಿ ಮೇಘಸ್ಪೋಟ-ವೈಷ್ಣೋದೇವಿಯಲ್ಲಿ ಪ್ರವಾಹ: ತತ್ತರಿಸಿದ ‘ಉತ್ತರಾಖಂಡ’

"ಗ್ರಾಮದಲ್ಲಿ ಸಿಲುಕಿಕೊಂಡಿದ್ದ ಎಲ್ಲ ಜನರನ್ನು ರಕ್ಷಿಸಿದ್ದು, ಕೆಲವರು ಹತ್ತಿರದ ರೆಸಾರ್ಟ್‌ನಲ್ಲಿ ಆಶ್ರಯ ಪಡೆದಿದ್ದಾರೆ" ಎಂದು ವಿಪತ್ತು ಪ್ರತಿಕ್ರಿಯೆ ತಂಡ ತಿಳಿಸಿದೆ.

Written by - Bhavishya Shetty | Last Updated : Aug 20, 2022, 10:56 AM IST
    • ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಮೇಘಸ್ಫೋಟ ಸಂಭವಿಸಿದ
    • ರಾಜ್ಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಿದೆ

    • ಭಾರೀ ಮಳೆ ಮತ್ತು ಹಠಾತ್ ಪ್ರವಾಹದಿಂದ ವೈಷ್ಣೋದೇವಿ ಸಂಚಾರ ಬಂದ್

Uttarakhand Cloudburst: ಡೆಹ್ರಾಡೂನ್ ನಲ್ಲಿ ಮೇಘಸ್ಪೋಟ-ವೈಷ್ಣೋದೇವಿಯಲ್ಲಿ ಪ್ರವಾಹ: ತತ್ತರಿಸಿದ ‘ಉತ್ತರಾಖಂಡ’ title=
Dehradun

Uttarakhand Cloudburst: ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ರಾಯ್‌ಪುರ ಬ್ಲಾಕ್‌ನಲ್ಲಿ ಇಂದು ನಸುಕಿನ ಮೇಘಸ್ಫೋಟ ಸಂಭವಿಸಿದೆ. ಜಿಲ್ಲೆಯ ಸರ್ಖೇತ್ ಗ್ರಾಮದಲ್ಲಿ ಇಂದು ನಸುಕಿನ ಜಾವ 2:45 ಕ್ಕೆ ಸ್ಥಳೀಯರು ಮೇಘಸ್ಫೋಟ ವರದಿ ಮಾಡಿದ್ದಾರೆ. ಮಾಹಿತಿ ಪಡೆದ ರಾಜ್ಯ ವಿಪತ್ತು ನಿರ್ವಹಣಾ ಪಡೆ ಅಥವಾ ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿದೆ. 

ಇದನ್ನೂ ಓದಿ: Vastu Tips: ಆರ್ಥಿಕ ಅಡಚಣೆ & ಮಾನಸಿಕ ಒತ್ತಡದಿಂದ ತೊಂದರೆಯೇ? ಮನೆಗೆ ಈ 2 ವಸ್ತು ತಂದ್ರೆ ಅದೃಷ್ಟ!

"ಗ್ರಾಮದಲ್ಲಿ ಸಿಲುಕಿಕೊಂಡಿದ್ದ ಎಲ್ಲ ಜನರನ್ನು ರಕ್ಷಿಸಿದ್ದು, ಕೆಲವರು ಹತ್ತಿರದ ರೆಸಾರ್ಟ್‌ನಲ್ಲಿ ಆಶ್ರಯ ಪಡೆದಿದ್ದಾರೆ" ಎಂದು ವಿಪತ್ತು ಪ್ರತಿಕ್ರಿಯೆ ತಂಡ ತಿಳಿಸಿದೆ.

“ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಡೆಹ್ರಾಡೂನ್‌ನ ಪ್ರಸಿದ್ಧ ತಪಕೇಶ್ವರ ಮಹಾದೇವ ದೇವಸ್ಥಾನದ ಬಳಿ ಹರಿಯುವ ತಾಮಸಾ ನದಿಯು ಭೀಕರ ಸ್ವರೂಪವನ್ನು ಪಡೆದುಕೊಂಡಿದೆ. ಇದರಿಂದಾಗಿ ಮಾತಾ ವೈಷ್ಣೋದೇವಿ ಗುಹೆ ಯೋಗ ದೇವಾಲಯ ಮತ್ತು ತಪಕೇಶ್ವರ ಮಹಾದೇವನ ಸಂಪರ್ಕ ಕಡಿತಗೊಂಡಿದೆ. ಭಗವಂತನ ದಯೆಯಿಂದ ಯಾವುದೇ ಪ್ರಾಣ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ” ಎಂದು ದೇವಸ್ಥಾನದ ಸಂಸ್ಥಾಪಕ ಆಚಾರ್ಯ ಬಿಪಿನ್ ಜೋಶಿ ತಿಳಿಸಿದ್ದಾರೆ.

ಈ ಮಧ್ಯೆ ಭಾರೀ ಮಳೆಯಿಂದಾಗಿ ಇಂದು ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಕತ್ರಾ ಪಟ್ಟಣದ ಮಾತಾ ವೈಷ್ಣೋದೇವಿ ದೇಗುಲದ ಬಳಿ ಹಠಾತ್ ಪ್ರವಾಹ ಉಂಟಾಗಿದೆ.

ಭಾರೀ ಮಳೆ ಮತ್ತು ಹಠಾತ್ ಪ್ರವಾಹದ ಹಿನ್ನೆಲೆಯಲ್ಲಿ ಮಾತಾ ವೈಷ್ಣೋದೇವಿ ಭಕ್ತರ ಸಂಚಾರವನ್ನು ಕೊಂಚ ಸಮಯದವರೆಗೆ ಸ್ಥಗಿತಗೊಳಿಸಲಾಗಿದೆ. 

ಇದನ್ನೂ ಓದಿ: ಪುರುಷರು-ಮಹಿಳೆಯರಲ್ಲಿ ಯಾರಿಗೆ ಹೆಚ್ಚಿನ ಲೈಂಗಿಕ ಸಂಗಾತಿಗಳು? ಸಮೀಕ್ಷೆ ಹೇಳಿದ್ದೇನು!!

“ಭಾರೀ ಮಳೆಯ ಹಿನ್ನೆಲೆಯಲ್ಲಿ ಕತ್ರಾದಿಂದ ವೈಷ್ಣೋದೇವಿ ದೇವಸ್ಥಾನಕ್ಕೆ ಯಾತ್ರಾರ್ಥಿಗಳ ಮೇಲ್ಮುಖ ಸಂಚಾರವನ್ನು ನಿಲ್ಲಿಸಲಾಗಿದೆ. ಕೆಳಮುಖವಾಗಿ ಬರುವ ಯಾತ್ರಾರ್ಥಿಗಳಿಗೆ ಆದ್ಯತೆ ನೀಡಲಾಗಿದೆ. ಈಗಾಗಲೇ ಪೊಲೀಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅನ್ನು ನಿಯೋಜಿಸಲಾಗಿದೆ, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ” ಎಂದು ಶ್ರೀ ಮಾತಾ ವೈಷ್ಣೋದೇವಿ ದೇಗುಲ ಮಂಡಳಿ ತಿಳಿಸಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News