ಜಮ್ಮು-ಕಾಶ್ಮೀರದ ಅವಂತಿಪುರದಲ್ಲಿ ಉಗ್ರರ ಗುಂಡಿಗೆ ಓರ್ವ ನಾಗರೀಕ ಬಲಿ

ಮೃತನನ್ನು ಮಂಜೂರ್ ಅಹ್ಮದ್ ಲೋನ್ ಎಂದು ಗುರುತಿಸಲಾಗಿದೆ.

Last Updated : Mar 15, 2019, 09:07 AM IST
ಜಮ್ಮು-ಕಾಶ್ಮೀರದ ಅವಂತಿಪುರದಲ್ಲಿ ಉಗ್ರರ ಗುಂಡಿಗೆ ಓರ್ವ ನಾಗರೀಕ ಬಲಿ title=
File Image

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅವಂತಿಪುರದ ಗುಲ್ಜಾರ್ಪೊರಾದಲ್ಲಿ ಗುರುವಾರ ರಾತ್ರಿ ಭಯೋತ್ಪಾದಕರು ಒಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. 

ಮೃತನನ್ನು ಡೋಗ್ರಿಪೊರಾ ನಿವಾಸಿ ಮಂಜೂರ್ ಅಹ್ಮದ್ ಲೋನ್ ಎಂದು ಗುರುತಿಸಲಾಗಿದೆ. 

ಪ್ರಾಥಮಿಕ ತನಿಖಾ ವರದಿ ಪ್ರಕಾರ, ಉಗ್ರರು ಲೋನ್ ಎಂಬಾತನನ್ನು ಬಲವಂತವಾಗಿ ಕರೆದೊಯ್ದು ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.

Trending News