Chinnor Rice GI Tag: ಈ ರಾಜ್ಯದ ಚಿನ್ನೌರ್ ಅಕ್ಕಿಗೆ Geographical Indication Of India ಗರಿ

Chinnor Rice GI Tag:ಚಿನ್ನೌರ್ ಭತ್ತವನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ತರಲು, ಸರ್ಕಾರವು ಇದನ್ನು 'ಒಂದು ಜಿಲ್ಲೆ, ಒಂದು ಉತ್ಪನ್ನ' (ODOP) ಪಟ್ಟಿಗೆ ಸೇರಿಸಿತ್ತು.

Written by - Nitin Tabib | Last Updated : Oct 2, 2021, 02:41 PM IST
  • ಮಧ್ಯಪ್ರದೇಶದ ಚಿನ್ನೌರ್ ಭತ್ತಕ್ಕೆ ಭೌಗೋಳಿಕ ಗುರುತು ಟ್ಯಾಗ್.
  • ಈ ಭತ್ತವನ್ನು ಈಗಾಗಲೇ ರಾಜ್ಯ ಸರ್ಕಾರ ಒಂದು ಜಿಲ್ಲೆ ಒಂದು ಉತ್ಪನ್ನ ಪಟ್ಟಿಗೆ ಸೇರಿಸಿದೆ.
  • ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ ಸಿಎಂ ಶಿವರಾಜ್ ಸಿಂಗ್ ಚೌಹಾಣ್.
Chinnor Rice GI Tag: ಈ ರಾಜ್ಯದ ಚಿನ್ನೌರ್ ಅಕ್ಕಿಗೆ Geographical Indication Of India ಗರಿ title=
Chinnor Rice GI Tag (File Photo)

Chinnor Rice GI Tag: - ಮಧ್ಯಪ್ರದೇಶದ (Madhya Pradesh)ಬಾಲಘಾಟ್ ಜಿಲ್ಲೆಯಲ್ಲಿ ಚಿನ್ನೌರ್ ಭತ್ತ (Chinnor Rice) ಬಹಳ ಜನಪ್ರಿಯವಾಗಿದೆ. ಇದೀಗ ಈ ಅಕ್ಕಿಯ ಸುಗಂಧವು ರಾಜ್ಯದ ಮಾರುಕಟ್ಟೆಯಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದ ಮಾರುಕಟ್ಟೆಗಳನ್ನು ಪಸರಿಸಲಿದೆ. ಹೌದು, ಚಿನ್ನೌರ್ ಅಕ್ಕಿಗೆ ಜಿಐ ಟ್ಯಾಗ್ (GI Tag) ಲಭಿಸಿದೆ. ಇದಕ್ಕಾಗಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ (Shivaraj Singh Chauhan) ಅವರು ಪ್ರಧಾನಿ ನರೇಂದ್ರ ಮೋದಿ  (PM Narendra Modi)ಅವರಿಗೆ ಧನ್ಯವಾದ ಹೇಳಿದ್ದಾರೆ. ಇದರಿಂದ ಕೇವಲ ಪ್ರದೇಶದ ಜನರಿಗೆ ಅವರ ಹಕ್ಕು ಮಾತ್ರ ಸಿಗದೇ, ಅವರ ಆರ್ಥಿಕ ಪ್ರಗತಿ ಕೂಡ ಆಗಲಿದೆ ಎಂದು ಅವರು ಹೇಳಿದ್ದಾರೆ.

2019 ರಲ್ಲಿ ಹೈದರಾಬಾದ್‌ ಮೂಲದ  ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ಆ ಭತ್ತಕ್ಕೆ ಭೌಗೋಳಿಕ ಗುರುತು ಟ್ಯಾಗ್‌ (Geogriphical Indication Of India)ನೀಡಬೇಕು ಎಂದು ಹಕ್ಕು ಮಂಡಿಸಿತ್ತು.  ಮಧ್ಯಪ್ರದೇಶದ ಚಿನ್ನೌರ್ ಭತ್ತದ ಜಿಐ-ಟ್ಯಾಗ್‌ಗೆ ಇದೀಗ ಕೌನ್ಸಿಲ್ ಅನುಮತಿ ನೀಡಿದೆ.

ಇದನ್ನೂ ಓದಿ - ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಕತ್ತರಿ: ಪೆಟ್ರೋಲ್, ಡೀಸೆಲ್ ಬಳಿಕ CNG, PNG ಬೆಲೆಯೂ ಏರಿಕೆ..!

ಚಿನ್ನೌರ್ ಭಟ್ತದೆ ವಿಶೇಷತೆ ಏನು?
ಇದು ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ವಿಶೇಷ ತಳಿಯ ಭತ್ತವಾಗಿದೆ. ಇದನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ತರಲು, ಸರ್ಕಾರವು ಇದನ್ನು 'ಒಂದು ಜಿಲ್ಲೆ, ಒಂದು ಉತ್ಪನ್ನ' (ODOP) ಗೆ ಪಟ್ಟಿಗೆ ಸೇರಿಸಿತ್ತು. ಕೃಷಿ ವಿಜ್ಞಾನಿ ಡಾ.ಉತ್ತಮ್ ಬಿಸೆನ್ ಮಾತನಾಡಿ, ಭತ್ತವನ್ನು ವೈಜ್ಞಾನಿಕವಾಗಿ ಪರಿಮಳ-ಕಡಿಮೆ, ಮಧ್ಯಮ ಮತ್ತು ಬಲವಾದ ಪರಿಮಳಕ್ಕಾಗಿ ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಚಿನ್ನೌರ್ ಬಲವಾದ ಸುವಾಸನೆಯನ್ನು ಹೊಂದಿರುವ ಪ್ರಭೇದಗಳಲ್ಲಿ ಒಂದಾಗಿದೆ. ಅನೇಕ ಭತ್ತಗಳಲ್ಲಿ, ಅಕ್ಕಿ ಹೊಟ್ಟು ಪ್ರಮಾಣವು ಶೇ. 17-18 ರಷ್ಟಿದ್ದರೆ ,  ಚಿನ್ನೌರಿ ಭತ್ತದಲ್ಲಿಇದು ಶೇ.20-21 ರಷ್ಟಿರುತ್ತದೆ. ಈ ಅಕ್ಕಿಯ ವಿಶೇಷತೆಯೆಂದರೆ ಅದರ ಪರಿಮಳ ಮತ್ತು ರುಚಿ. ನೆನೆಸಿದ ನಂತರ ಈ ಸುಧಾರಿತ ವಿಧದ ಅಕ್ಕಿಯ ಸುವಾಸನೆಯನ್ನು ಮತ್ತು ಅಡುಗೆ ಮಾಡಿದ ನಂತರ ಸಿಹಿಯನ್ನು ರುಚಿ ನೋಡಿದವರು ಅದನ್ನು ಮರೆಯಲು ಸಾಧ್ಯವಿಲ್ಲ. ಅದರ ರುಚಿ ಮಾತ್ರವಲ್ಲದೇ ವಾಸನೆ ಕೂಡ ಅದ್ಭುತವಾಗಿದೆ.

ಇದನ್ನೂ ಓದಿ - Gandhi Jayanti 2021 : ಗಾಂಧೀಜಿಯವರ ಜೀವನವನ್ನು ವಿವರಿಸುವ ಈ 5 ಫೋಟೋಗಳು, ಮಹಾತ್ಮ ಹೇಗೆ ಬ್ಯಾರಿಸ್ಟರ್ ಆದ್ರೂ ಎಂಬುದನ್ನು ನೋಡಿ

ವಿಶ್ವಾದ್ಯಂತ ಮಧ್ಯ ಪ್ರದೇಶಕ್ಕೆ ಭಾರಿ ಮನ್ನಣೆ ಸಿಗಲಿದೆ
ಚಿನ್ನೌರಿ ಭತ್ತ ಮಧ್ಯಪ್ರದೇಶದಲ್ಲಿ ಕೃಷಿಗೆ ಮೊದಲ ಜಿಐ-ಟ್ಯಾಗ್ ಅನ್ನು ನೀಡಿದೆ. ಇದನ್ನು ಮಧ್ಯಪ್ರದೇಶ ಸರ್ಕಾರವು 'ಒಂದು ಜಿಲ್ಲೆ, ಒಂದು ಉತ್ಪನ್ನ' (ODOP) ನಲ್ಲಿ ಸೇರಿಸುವುದರ ಮೂಲಕ ಪ್ರಚಾರ ಮಾಡುತ್ತಿದೆ. ಜಿಲ್ಲೆಯ 25 ಹಳ್ಳಿಗಳ ರೈತರು ಇದನ್ನು ಉತ್ಪಾದಿಸುತ್ತಿದ್ದಾರೆ. ಈ ಟ್ಯಾಗ್ ಪಡೆದ ನಂತರ, ಇದೀಗ ಈ ಪ್ರಭೇದವು ಮಧ್ಯಪ್ರದೇಶ ಅನ್ನು ಬಾಲಘಾಟ್ ಜೊತೆಗೆ ವಿಶ್ವಾದ್ಯಂತ ವಿಶೇಷ ಮನ್ನಣೆಯನ್ನು ನೀಡಲಿದೆ. ಈ ಭತ್ತದ ಪ್ರಕಾರವನ್ನು ಇದೀಗ ಹೆಚ್ಚಿನ ಬೆಲೆಗೆ ಮಾರಲಾಗುವುದು ಎಂದು ರೈತರು ನಿರೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ-Viral Video: ಡ್ಯಾನ್ಸ್ ಮಾಡುತ್ತಲೇ ವೇದಿಕೆಯ ಮೇಲೆ ಬಿದ್ದ ಸಪ್ನಾ ಚೌಧರಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News