ಭಾರತದಲ್ಲಿ TikTok App Ban ನಿಂದ ಕಂಪನಿಗೆ ಉಂಟಾಗುವ ನಷ್ಟ ಎಷ್ಟು ಗೊತ್ತಾ?

ಭಾರತ ಚೀನಾ ಮೂಲದ ಒಟ್ಟು 59 ಆಪ್ ಗಳನ್ನು ಬ್ಯಾನ್ ಮಾಡಿದೆ. ಬ್ಯಾನ್ ಬಳಿಕ ಚೀನಾದ ವೃತ್ತಪತ್ರಿಕೆ ಗ್ಲೋಬಲ್ ಟೈಮ್ಸ್, ಈ ಬ್ಯಾನ್ ನಿಂದ ಟಿಕ್-ಟಾಕ್ ಮೂಲ ಕಂಪನಿ ByteDanceಗೆ ಕೋಟ್ಯಂತರ ರೂ.ಗಳ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಒಪ್ಪಿಕೊಂಡಿದೆ.

Last Updated : Jul 1, 2020, 09:42 PM IST
ಭಾರತದಲ್ಲಿ TikTok App Ban ನಿಂದ ಕಂಪನಿಗೆ ಉಂಟಾಗುವ ನಷ್ಟ ಎಷ್ಟು ಗೊತ್ತಾ? title=

ಬಿಜಿಂಗ್: ಪೂರ್ವ ಲಡಾಕ್ ನ ಗಡಿಭಾಗದಲ್ಲಿ ಉಂಟಾಗಿರುವ ಉದ್ವಿಗ್ನತೆಯಾ ನಂತರ ಭಾರತ ಚೀನಾ ಮೂಲದ 59 ಆಪ್ ಗಳನ್ನು ನಿಷೇಧಿಸಿತ್ತು. ಈ ಕ್ರಮದಿಂದ ಚೀನಾದ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಈ ಬ್ಯಾನ್ ನಿಂದ TikTokನ ಚೀನಾದ ಮೂಲ ಕಂಪನಿಯಾಗಿರುವ Bytedanceಗೆ ಶತಕೋಟಿ ಡಾಲರ್ ಗಳಷ್ಟು ನಷ್ಟ ಉಂಟಾಗಲಿದೆ ಎಂದು ಇದೀಗ ಚೀನಾ ಸ್ವತಃ ಒಪ್ಪಿಕೊಂಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಮತ್ತು ಚೀನಾ ಕುರಿತು ಪ್ರೋಪಗೆಂಡಾ ಮಾಡುವ ವೃತ್ತಪತ್ರಿಕೆಯಾಗಿರುವ ಗ್ಲೋಬಲ್ ಟೈಮ್ಸ್, ಲಡಾಕ್ ಘರ್ಷಣೆಯ ಬಳಿಕ ಭಾರತ ಸರ್ಕಾರ ಚೀನಾ ಮೂಲದ ಒಟ್ಟು 59 ಆಪ್ ಗಳನ್ನು ನಿಷೇಧಿಸಿದೆ. ಈ ಬ್ಯಾನ್ ನಿಂದ TikTokನ ಮೂಲ ಕಂಪನಿಯಾಗಿರುವ Bytedanceಗೆ ಒಟ್ಟು 6 ಶತಕೋಟಿ ಡಾಲರ್ ಗಳಷ್ಟು ನಷ್ಟ ಉಂಟಾಗುವ ಸಾಧ್ಯತೆ ಇದೆ. ಕೇವಲ ಒಂದು ಆಪ್ ನ ಬ್ಯಾನ್ ಮಾಡುವ ಮೂಲಕ ಇಷ್ಟೊಂದು ಪ್ರಮಾಣದ ಹಾನಿ ಉಂಟಾಗುತ್ತಿದ್ದರೆ, 59 ಆಪ್ ಗಳನ್ನು ಬ್ಯಾನ್ ಮಾಡುವುದರಿಂದ ಚೀನಾಗೆ ಎಷ್ಟೊಂದು ದೊಡ್ಡ ಆರ್ಥಿಕ ಪೆಟ್ಟು ಬೀಳಲಿದೆ ಎಂಬುದನ್ನು ಅಂದಾಜಿಸಬಹುದಾಗಿದೆ.

ಭಾರತ ಚೀನಾಗೆ ಅತಿ ದೊಡ್ಡ ಮಾರುಕಟ್ಟೆಯಾಗಿದೆ
ಭಾರತ ಕೈಗೊಂಡಿರುವ ನಿರ್ಣಯದಿಂದ ಗ್ಲೋಬಲ್ ಟೈಮ್ಸ್ ನಿರಂತರ ಭಾರತದ ಮೇಲೆ ವರದಿಗಳನ್ನು ಪ್ರಕಟಿಸುತ್ತಿದ್ದು, ಚೀನಾ ವಸ್ತುಗಳನ್ನು ಬ್ಯಾನ್ ಮಾಡುವುದರಿಂದ ಭಾರತದ ಆರ್ಥಿಕತೆಯ ಮೇಲೆ ಪ್ರಭಾವ ಉಂಟಾಗಲಿದ್ದು, ಚೀನಾ ಮೇಲೆ ಇದರ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಆದರೆ, ಚೀನಾ ಕಂಪನಿಗಳ ಪಾಲಿಗೆ ಹಾಗೂ ಹೂಡಿಕೆದಾರರಿಗೆ ಭಾರತ ಒಂದು ದೊಡ್ಡ ಮಾರುಕಟ್ಟೆಯಾಗಿದೆ ಎಂಬುದನ್ನು ಅದು ಒಪ್ಪಿಕೊಂಡಿದೆ. ಇವೆಲ್ಲವುದರ ನಡುವೆ ಭಾರತದ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗಿರುವ ನಿರ್ಣಯದಿಂದ ಚೀನಾ ಕಂಪನಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂಬುದು ಮಾತ್ರ ಸುಳ್ಳಲ್ಲ.

ಚೀನಾ ಬೆದರಿದ್ದೇಕೆ?
ಡಿಜಿಟಲ್ ಎಕಾನಾಮಿ ಮೇಲೆ ಗಮನ ಕೇಂದ್ರೀಕರಿಸುವ ತಜ್ಞರ ಅಭಿಪ್ರಾಯದಂತೆ, ಭಾರತ ಕೈಗೊಂಡಿರುವ ನಿರ್ಣಯದ ಗುರುತು ಚಿಹ್ನೆಯ ಮೇಲೆ ವಿಶ್ವದ ಇತರೆ ದೇಶಗಳು ಕೂಡ ಹೆಜ್ಜೆ ಇಡುವ ಸಾಧ್ಯತೆ ಇದ್ದು, ಇದರಿಂದ ಚೀನಾ ಬೆದರಿದೆ. ಅಮೇರಿಕಾ ಮೂಲದ ಕಂಪನಿಗಳಾಗಿರುವ ಗೂಗಲ್ ಹಾಗೂ ಫೇಸ್ ಬುಕ್ ಗಳಿಂದ ಭಾರತೇತರ ಹಾಗೂ ದಕ್ಷಿಣ ಪೂರ್ವ ಏಷ್ಯಾದ ಕೆಲ ದೇಶಗಳು ದೊಡ್ಡ ಮಾರುಕಟ್ಟೆಯನ್ನೇ ಹೊಂದಿದ್ದು, ಚೀನಾ ಕಂಪನಿಗಳು ಚೀನಾ ಹೊರತುಪಡಿಸಿ, ಈ ದೇಶಗಳಲ್ಲಿ ಸ್ಪರ್ಧೆಗೆ ಇಳಿದಿವೆ. ಚೀನಾ ಅಭಿವೃದ್ಧಿ ಹೊಂದಿದ ಬಳಿಕ ಈ ಕಂಪನಿಗಳು ಬೇರೆ ದೇಶಗಳಲ್ಲಿ ಹೂಡಿಕೆಗೆ ಮುಂದಾಗಿದ್ದು, ತನ್ನ ಸೇವೆಗಳನ್ನು ಕೂಡ ನೀಡುತ್ತಿವೆ.

Trending News