ಉಬರ್‌ ಕ್ಯಾಬ್‌ನಲ್ಲಿ ರಾಹುಲ್‌ ಗಾಂಧಿ ರೈಡ್: ಚಾಲಕರ ಸಮಸ್ಯೆಗಳ ಬಗ್ಗೆ ಚರ್ಚೆ

Rahul Gandhi In Uber Cab: ರಾಹುಲ್ ಗಾಂಧಿ ಅವರು ದಿಢೀರನೆ ಉಬರ್ ಕ್ಯಾಬ್ ನಲ್ಲಿ ಪ್ರಯಾಣ ಮಾಡಿ ಉಬರ್ ಕ್ಯಾಬ್ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಷ್ಟೆಯಲ್ಲದೆ ಅವರ ಕುಟುಂಬ ವರ್ಗದವರ ಜೊತೆ ಕೂಡ ಮಾತುಕತೆ ನಡೆಸಿದ್ದಾರೆ.

Written by - Yashaswini V | Last Updated : Aug 20, 2024, 12:13 PM IST
  • ಕ್ಯಾಬ್‌ನಲ್ಲಿ ಪ್ರಯಾಣಿಸಿದ ಸಂಸದ ರಾಹುಲ್‌ ಗಾಂಧಿ: ಚಾಲಕರ ಸಮಸ್ಯೆಗಳ ಬಗ್ಗೆ ಚರ್ಚೆ
  • ದೇಶದಲ್ಲಿ ಕಡಿಮೆ ಆದಾಯ ಮತ್ತು ಹೆಚ್ಚಿರುವ ಹಣದುಬ್ಬರ ಹಲವು ಜನರ ಬದುಕನ್ನು ದುಸ್ತರಗೊಳಿಸಿದೆ.
  • ಇದರಿಂದ ಕ್ಯಾಬ್‌ ಚಾಲಕರು, ಡೆಲಿವರಿ ಏಜೆಂಟ್‌ಗಳು ಹೊರತಾಗಿಲ್ಲ ಎಂದು ಗಿಗ್‌ ವರ್ಕರ್ಸ್ ಸ್ಥಿತಿಗತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ
ಉಬರ್‌ ಕ್ಯಾಬ್‌ನಲ್ಲಿ ರಾಹುಲ್‌ ಗಾಂಧಿ ರೈಡ್: ಚಾಲಕರ ಸಮಸ್ಯೆಗಳ ಬಗ್ಗೆ ಚರ್ಚೆ title=

Rahul Gandhi In Uber Cab: ಇತ್ತೀಚೆಗೆ ತಮ್ಮ ನಡೆಗಳಲ್ಲಿ ಅಚ್ಚರಿ ಮೂಡಿಸುತ್ತಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಉಬರ್ (Ober) ಕ್ಯಾಬ್‌ನಲ್ಲಿ ಪ್ರಯಾಣಿಸಿ ಉಬರ್ ಕ್ಯಾಬ್ ಚಾಲಕರ ನೋವು-ನಲಿವುಗಳು ಏನು ಎನ್ನುವ ಬಗ್ಗೆ ಚರ್ಚೆ ಮಾಡಿದ್ದಾರೆ. ಅಷ್ಟೇಯಲ್ಲದೆ ಉಬರ್ ಕ್ಯಾಬ್‌ ಚಾಲಕನ ಪತ್ನಿ ಮತ್ತು ಮಕ್ಕಳನ್ನು ರೆಸ್ಟೋರೆಂಟ್ ಒಂದಕ್ಕೆ ಕರೆಸಿ ಅವರ ಕಷ್ಟ-ಸುಖಗಳನ್ನು ಕೇಳಿದ್ದಾರೆ.

ಇತ್ತೀಚಿಗೆ ಆಗಾಗ್ಗೆ ರಸ್ತೆ ಬದಿಯ ವ್ಯಾಪಾರಿಗಳು, ರೈಲ್ವೆ ಸ್ಟೇಷನ್ ನಲ್ಲಿ ಕೂಲಿಗಳಾಗಿ ಕೆಲಸ ಮಾಡುವವರು, ಕಟ್ಟಡ ಕಾರ್ಮಿಕರು ಸೇರಿದಂತೆ ದುಡಿಯುವ ವರ್ಗದವರನ್ನು ಭೇಟಿ ಮಾಡುತ್ತಿರುವ ಮತ್ತು ಸಂಸತ್ತಿನ ಒಳ-ಹೊರಗೆ ದುಡಿಯುವ ವರ್ಗದ ಸಮಸ್ಯೆಗಳ ಬಗ್ಗೆ ದನಿಯಾಗಿರುವ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು ನಿನ್ನೆ (ಸೋಮವಾರ) ದೆಹಲಿಯಲ್ಲಿ  ಸುನಿಲ್ ಉಪಾಧ್ಯಾಯ ಎಂಬ ಚಾಲಕರ ಉಬರ್ ಕ್ಯಾಬ್ (Uber Cab Driver) ಏರಿ ಪ್ರಯಾಣ ಮಾಡಿದ್ದಾರೆ. ಈ ರೀತಿ ಅಚ್ಚರಿಯ ಭೇಟಿ ಕೊಟ್ಟು ಅವರ ಅಂತರಾಳ ಅರಿಯಲು ಯತ್ನಿಸುತ್ತಿರುವ ರಾಹುಲ್ ಗಾಂಧಿ ಅವರು ಸುನಿಲ್ ಉಪಾಧ್ಯಾಯ ಅವರ ಜೊತೆ ಕೂಡ ಉಬರ್ ಕ್ಯಾಬ್ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ- ಬಾಂಗ್ಲಾದೇಶದ ಹಿಂಸಾಚಾರ: ಸರ್ವಪಕ್ಷದ ಸಭೆಯಲ್ಲಿ ರಾಹುಲ್ ಗಾಂಧಿ ಕೇಳಿದ ಆ ಮೂರು ಪ್ರಶ್ನೆಗಳು...!

ರಾಹುಲ್ ಗಾಂಧಿ (Rahul Gandhi) ಅವರ ಈ ನಡೆ ‘ಸಮಸ್ಯೆಯ ಆಳಕ್ಕೆ ಇಳಿದು ನೋಡುವ’ ಮಾದರಿ. ರಾಹುಲ್ ಗಾಂಧಿ ಅವರು ದಿಢೀರನೆ ಉಬರ್ ಕ್ಯಾಬ್ ನಲ್ಲಿ ಪ್ರಯಾಣ ಮಾಡಿ ಉಬರ್ ಕ್ಯಾಬ್ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಷ್ಟೆಯಲ್ಲದೆ ಅವರ ಕುಟುಂಬ ವರ್ಗದವರ ಜೊತೆ ಕೂಡ ಮಾತುಕತೆ ನಡೆಸಿದ್ದಾರೆ.

ನಿಜ, ಕೆಲವೊಮ್ಮೆ ಸಮಸ್ಯೆ ಎಂಬುದು ಅದರ ಕೇಂದ್ರ ಬಿಂದುವಾಗಿರುವ ವ್ಯಕ್ತಿ ಜೊತೆ ಮಾತಾನಾಡಿದಾಗ ಮಾತ್ರ ತಿಳಿಯುವುದಿಲ್ಲ. ಅದರ ನಿಜ ಸ್ವರೂಪ ಅರಿಯಲು ಸಂಬಂಧಿತ ವ್ಯಕ್ತಿಗಳ ಮನದ ಮಾತಿಗೂ ಕಿವಿಗೊಡಬೇಕಾಗುತ್ತದೆ. ರಾಹುಲ್ ಗಾಂಧಿ (Rahul Gandhi) ಅವರು ಇದೇ ರೀತಿ ಮಾತಾನಾಡಿದ್ದಾರೆ. ಮೊದಲಿಗೆ ಸುನಿಲ್ ಉಪಾಧ್ಯಾಯ ಎಂಬುವವರ ಉಬರ್ ಕ್ಯಾಬ್ ಅತ್ತಿ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಅವರ ಪತ್ನಿ ಮತ್ತು ಮಕ್ಕಳನ್ನು ರೆಸ್ಟೋರೆಂಟ್ ಗೆ ಕರೆಸಿ ಅವರೊಂದಿಗೂ ಚರ್ಚೆ ನಡೆಸಿದ್ದಾರೆ. 

ಇದನ್ನೂ ಓದಿ- Rahul Gandhi: ಉತ್ತರಪ್ರದೇಶದ ಚಮ್ಮಾರ ಹೊಲಿದ ಶೂ ಹಾಕಿಕೊಂಡು ಮಿಂಚಿದ ರಾಹುಲ್‌ ಗಾಂಧಿ!

ಸುನಿಲ್ ಉಪಾಧ್ಯಾಯ ಮತ್ತು ಅವರ ಕುಟುಂಬವನ್ನು ಭೇಟಿಯಾದ ನಂತರ ಕ್ಯಾಬ್ ಡ್ರೈವರ್‌ಗಳು ಮತ್ತು ಡೆಲಿವರಿ ಏಜೆಂಟ್‌ಗಳಂತಹ ಗಿಗ್ ಕೆಲಸಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ರಾಹುಲ್ ಗಾಂಧಿ ಅವರು ಪರಿಶೀಲಿಸಿದರು. 

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ (X)ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ರಾಹುಲ್ ಗಾಂಧಿ ಅವರು ‘ಕಾಂಗ್ರೆಸ್ ಪಕ್ಷವು ದೇಶದಲ್ಲಿ ಕ್ಯಾಬ್‌ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತು ಅವರು ಅನುಭವಿಸುತ್ತಿರುವ ದುಸ್ಥಿತಿಯನ್ನು ಕುರಿತು ಗಮನಹರಿಸಿದೆ. ನಮ್ಮ ಪಕ್ಷ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಇಂತಹ ಕಾರ್ಮಿಕರ ಹಿತರಕ್ಷಣೆಗೆ ಪೂರಕವಾಗಿ ನೀತಿಗಳನ್ನು ಜಾರಿಗೊಳಿಸಲಾಗಿದೆ. ಕಾಂಗ್ರೆಸ್ ಮಾತ್ರವಲ್ಲ, ವಿರೋಧ ಪಕ್ಷಗಳ ಒಕ್ಕೂಟವಾಗಿರುವ INDIA ಮೈತ್ರಿಕೂಟ ಕೂಡ ಈ ಕಾರ್ಮಿಕರ ಒಳತಿಗಾಗಿ ನೀತಿಯನ್ನು ಜಾರಿಗೆ ತರಲಿದೆ. ದೇಶದಲ್ಲಿ ಕಡಿಮೆ ಆದಾಯ ಮತ್ತು ಹೆಚ್ಚಿರುವ ಹಣದುಬ್ಬರ ಹಲವು ಜನರ ಬದುಕನ್ನು ದುಸ್ತರಗೊಳಿಸಿದೆ. ಇದರಿಂದ ಕ್ಯಾಬ್‌ ಚಾಲಕರು, ಡೆಲಿವರಿ ಏಜೆಂಟ್‌ಗಳು ಹೊರತಾಗಿಲ್ಲ. ಉಬರ್‌ ಚಾಲಕ ಸುನಿಲ್‌ ಉಪಾಧ್ಯಾಯ ಮತ್ತು ಅವರ ಕುಟುಂಬದವರ ಜೊತೆ ನಡೆಸಿದ ಮಾತುಕತೆಯಲ್ಲಿ ಕಾರ್ಮಿಕ ವರ್ಗ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪಟ್ಟಿ ಮಾಡಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News