Mera Ration Card App: ಸರ್ಕಾರದಿಂದ 'ಒನ್ ನೇಷನ್ ಒನ್ ರೇಷನ್ ಕಾರ್ಡ್ ಗೆ ಆಪ್'‌ ಬಿಡುಗಡೆ..!

ಒಂದೇ ಪಡಿತರ ಚೀಟಿ ಇಟ್ಟುಕೊಂಡು ದೇಶದ ಯಾವುದೇ ಭಾಗದಲ್ಲಾದರೂ ರೇಷನ್ ಪಡೆಯಲು ಈ ಯೋಜನೆ ನೆರವು

Last Updated : Mar 14, 2021, 06:43 PM IST
  • ಒನ್ ನೇಷನ್ ಒನ್ ರೇಷನ್ ಕಾರ್ಡ್‌ಗೆ ಸಂಬಂಧಿಸಿದ ಸ್ಮಾರ್ಟ್‌ಫೋನ್ ಆಪ್ ಅನ್ನು ಕೇಂದ್ರ ಸರ್ಕಾರ ಬಿಡುಗಡೆ
  • ಒಂದೇ ಪಡಿತರ ಚೀಟಿ ಇಟ್ಟುಕೊಂಡು ದೇಶದ ಯಾವುದೇ ಭಾಗದಲ್ಲಾದರೂ ರೇಷನ್ ಪಡೆಯಲು ಈ ಯೋಜನೆ ನೆರವು
  • ಸರ್ಕಾರ ಬಿಡುಗಡೆ ಮಾಡಿರುವ ಮೇರಾ ರೇಷನ್ ಕಾರ್ಡ್ ಆಪ್‌ನಲ್ಲಿ ಹಲವು ಲಾಭಗಳಿವೆ
Mera Ration Card App: ಸರ್ಕಾರದಿಂದ 'ಒನ್ ನೇಷನ್ ಒನ್ ರೇಷನ್ ಕಾರ್ಡ್ ಗೆ ಆಪ್'‌ ಬಿಡುಗಡೆ..! title=

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಗೆ ಈಗ ತಂತ್ರಜ್ಞಾನದ ಬೆಂಬಲ ಸಿಕ್ಕಿದೆ. ದೇಶದ ಯಾವುದೇ ಭಾಗದಲ್ಲಿ ಪಡಿತರ ಪಡೆಯಲು ಜನರಿಗೆ ಅನುಕೂಲವಾಗುವ ಈ ಒನ್ ನೇಷನ್ ಒನ್ ರೇಷನ್ ಕಾರ್ಡ್‌ಗೆ ಸಂಬಂಧಿಸಿದ ಸ್ಮಾರ್ಟ್‌ಫೋನ್ ಆಪ್ ಅನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಸರ್ಕಾರ ಬಿಡುಗಡೆ ಮಾಡಿರುವ ಈ ಆಪ್ ಹೆಸರು, ಮೇರಾ ರೇಷನ್ ಕಾರ್ಡ್(Mera Ration Card App). ಅಂದರೆ, ನನ್ನ ಪಡಿತರ ಚೀಟಿ ಎಂದರ್ಥ. ಈ ಆಪ್ ಮೂಲಕ ಪಡಿತರ ಚೀಟಿದಾರರು ಇನ್ನು ಮುಂದೆ ತಮ್ಮ ರೇಷನ್ ಪಡೆದುಕೊಳ್ಳಲು ನೆರವು ದೊರೆಯಲಿದೆ.

"ತಾಜ್ ಮಹಲ್ ನ್ನು ರಾಮ್ ಮಹಲ್ ಎಂದು ಹೆಸರಿಸಿ"

ಒಂದೇ ಪಡಿತರ ಚೀಟಿ(Ration Card) ಇಟ್ಟುಕೊಂಡು ದೇಶದ ಯಾವುದೇ ಭಾಗದಲ್ಲಾದರೂ ರೇಷನ್ ಪಡೆಯಲು ಈ ಯೋಜನೆ ನೆರವು ನೀಡುತ್ತದೆ. ವಿಶೇಷವಾಗಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಗಳಿಗೆ ವಲಸೆ ಹೋಗುವ ಕಾರ್ಮಿಕರಿಗೆ ಈ ಯೋಜನೆಯಿಂದ ಭಾರಿ ಲಾಭವಾಗಲಿದೆ.

ಹೀಗೆ ವಲಸೆ ಹೋದ ಕಾರ್ಮಿಕರು ಈ ಮೇರಾ ರೇಷನ್ ಕಾರ್ಡ್ ಆಪ್(App) ಮೂಲಕವೇ ತಮ್ಮ ಸಮೀಪದ ನ್ಯಾಯ ಬೆಲೆ ಗುರುತಿಸಿಕೊಂಡು ಅಲ್ಲಿಂದಲೇ ಪಡಿತರ ಧಾನ್ಯಗಳನ್ನು ಪಡೆಯಬಹುದಾಗಿದೆ.

ಸಿಎಂ ಮಮತಾ ಬ್ಯಾನರ್ಜೀ ಮೇಲಿನ ದಾಳಿ ಬಗ್ಗೆ ಚುನಾವಣಾ ಆಯೋಗ ಹೇಳಿದ್ದೇನು?

ಈಗ ಬಿಡುಗಡೆಯಾಗಿರುವ ಮೇರಾ ರೇಷನ್ ಕಾರ್ಡ್ ಆಪ್ ಇಂಗ್ಲಿಷ್(English) ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ. ಶೀಘ್ರದಲ್ಲೇ ದೇಶದ 14 ಪ್ರಾದೇಶಿಕ ಭಾಷೆಗಳಲ್ಲಿ ಈ ಆಪ್‌ನ ಸೇವೆ ದೊರೆಯಲಿದೆ. ಸಾಮಾನ್ಯವಾಗಿ ವಲಸೆ ಹೋಗಿರುವ ಕಾರ್ಮಿಕರು, ಫಲಾನುಭವಿಗಳಿಗೆ ತಮ್ಮ ಮಾತೃಭಾಷೆ ಬಿಟ್ಟು ಬೇರೆ ಭಾಷೆ ಓದಲು ಮತ್ತು ಬರೆಯಲು ಬರುವುದಿಲ್ಲ. ಹಾಗಾಗಿ, ಮೇರಾ ರೇಷನ್ ಕಾರ್ಡ್ 14 ಪ್ರಾದೇಶಿಕ ಭಾಷೆಗಳಲ್ಲಿ ದೊರೆತರೆ ಇದರಿಂದ ಪಡಿತರ ಚೀಟಿದಾರರಿಗೆ ಹೆಚ್ಚು ಲಾಭವಾಗಲಿದೆ. ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲೇ ಇದ್ದರೆ ಈ ಆಪ್‌ನ ಬಳಕೆಯ ವ್ಯಾಪಕತೆ ಹೆಚ್ಚಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಾ, ವಲಸಿಗರು, ಕಾರ್ಮಿಕರು ಹೆಚ್ಚು ಎಲ್ಲಿದ್ದಾರೆಂಬುದನ್ನು ಗುರುತಿಸಿ ಭಾಷೆಗಳನ್ನು ನಿರ್ಧರಿಸಲಾಗುವುದು ಎಂದು ಹೇಳಿದೆ.

Tamil Nadu Election: ತಮಿಳುನಾಡು ಎಲೆಕ್ಷನ್: ಅಣ್ಣಾಮಲೈ, ನಟಿ ಖಷ್ಬೂಗೆ ಬಿಜೆಪಿ ಟಿಕೆಟ್!

ಹಿಂದಿ ಮತ್ತು ಇಂಗ್ಲಿಷ್ ಮಾತ್ರವಲ್ಲದೇ ಆಯಾ ಸ್ಥಳೀಯ ಭಾಷೆಯಲ್ಲಿ ಮೇರಾ ರೇಷನ್ ಕಾರ್ಡ್ ಆಪ್ ಸೇವೆ ದೊರೆತರೆ ಅದರ ಲಾಭ ಹೆಚ್ಚಿನ ಪ್ರಮಾಣದಲ್ಲಿ ಆಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಸರ್ಕಾರ ಬಿಡುಗಡೆ ಮಾಡಿರುವ ಮೇರಾ ರೇಷನ್ ಕಾರ್ಡ್ ಆಪ್‌ನಲ್ಲಿ ಹಲವು ಲಾಭಗಳಿವೆ. ನಿಮ್ಮ ಸಮೀಪದ ರೇಷನ್ ಅಂಗಡಿ(Shop) ಎಲ್ಲಿದೆ ಎಂಬ ಮಾಹಿತಿಯನ್ನು ಈ ಆಪ್ ನೀಡುತ್ತದೆ. ಸಮೀಪದ ಅಂಗಡಿಗಳಲ್ಲಿ ಯಾವೆಲ್ಲ ಧಾನ್ಯಗಳು ಸಿಗಲಿವೆ ಎಂಬ ಮಾಹಿತಿಯನ್ನು ಕೂಡ ಈ ಆಪ್‌ನಿಂದಲೇ ತಿಳಿದುಕೊಳ್ಳಬಹುದಾಗಿದೆ. ಇದರಲ್ಲಿ ಇತ್ತೀಚಿನ ವಹಿವಾಟು ಮಾಹಿತಿ ಜೊತೆಗೆ ಆಧಾರ್ ನಂಬರ್ ಸಂಯೋಜನೆಯೂ ಇರುತ್ತದೆ. ವಲಸಿಗರು ಈ ಆಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ವಿವರನ್ನು ದಾಖಲಿಸಬಹುದು.

UPSC Recruitment : ಕೇಂದ್ರ ಲೋಕಸೇವಾ ಆಯೋಗದಲ್ಲಿ ಉದ್ಯೋಗವಕಾಶ..! ಇಲ್ಲಿದೆ ಅಗತ್ಯ ಮಾಹಿತಿ

ಏನಿದು ಒಂದು ದೇಶ ಒಂದು ರೇಷನ್ ಕಾರ್ಡ್(one nation one ration card)? ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ 81 ಕೋಟಿ ಜನರಿಗೆ ರಿಯಾಯ್ತಿ ದರದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುತ್ತದೆ. ಆದರೆ, ವಲಸೆ ಕಾರ್ಮಿಕರು ಅಥವಾ ಫಲಾನುಭವಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅಥವಾ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೆಲಸಕ್ಕೆ ತೆರಳಿದಾಗ ಅವರು ಪಡಿತರು ಪಡೆಯಲು ಈಗಿರುವ ವ್ಯವಸ್ಥೆಯಲ್ಲಿ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲೇ ಸಮಸ್ಯೆಯನ್ನು ನಿವಾರಿಸಲು ಕೇಂದ್ರ ಸರ್ಕಾರವು ಯಾವುದೇ ವಲಸಿಗ ವ್ಯಕ್ತಿ, ಕಾರ್ಮಿಕನು ದೇಶದ ಯಾವುದೇ ಪಡಿತರ ಅಂಗಡಿಯಿಂದ ಅಗತ್ಯವಿರುವ ಪಡಿತರ ಪಡೆಯಲು ಒಂದು ದೇಶ ಒಂದು ಪಡಿತರ ಯೋಜನೆಯನ್ನು ಜಾರಿಗೆ ತಂದೆ. ಈ ಯೋಜನೆಯನ್ನು ಹೆಚ್ಚು ತಾಂತ್ರಿಕ ಆಧರಿತ ಮತ್ತು ಆಪ್‌ ಆಧರಿತ ಮಾಡುವ ಮೂಲಕ ಅದರ ರೀಚ್ ಅನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ.

All India Permit For Vehicles: ದೇಶಾದ್ಯಂತದ ಟೂರಿಸ್ಟ್ ಆಪರೇಟರ್ ಗಳಿಗೆ ಸಂತಸದ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News