CBSE Board 12th Exams 2022: ಖಾಸಗಿ ಅಭ್ಯರ್ಥಿಗಳಿಗೆ ಮಹತ್ವದ ಘೋಷಣೆ ಮಾಡಿದ CBSE

CBSE Board 12th Exams 2022 Important Updates: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 12 ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗುವ ಖಾಸಗಿ ಅಭ್ಯರ್ಥಿಗಳು (Private Candidates) ಗುರುವಾರ ಅಂದರೆ ಡಿಸೆಂಬರ್ 2 ರಿಂದ ತಮ್ಮ ಹೆಸರನ್ನು ಪರೀಕ್ಷೆಗೆ ನೋಂದಣಿ ಮಾಡಬಹುದು ಎಂದು ಸೂಚಿಸಿದೆ. ಮಂಡಳಿಯು ಈ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸುತ್ತದೆ.  

Written by - Nitin Tabib | Last Updated : Nov 29, 2021, 04:16 PM IST
  • ಖಾಸಗಿ ಅಭ್ಯರ್ಥಿಗಳು ಡಿಸೆಂಬರ್ 2 ರಿಂದ ತಮ್ಮ ನೋಂದಾಯಿಸಿಕೊಳ್ಳಬಹುದು
  • CBSE ಈ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುತ್ತದೆ
  • ವಿದ್ಯಾರ್ಥಿಗಳಿಗೆ ಹೊಸ ರೋಲ್ ಸಂಖ್ಯೆಯನ್ನು ನೀಡಲಾಗುವುದು
CBSE Board 12th Exams 2022: ಖಾಸಗಿ ಅಭ್ಯರ್ಥಿಗಳಿಗೆ ಮಹತ್ವದ ಘೋಷಣೆ ಮಾಡಿದ CBSE title=
CBSE Board 12th Exams 2022 Important updates (File Photo)

ನವದೆಹಲಿ: CBSE Board 12th Exams 2022 Important Updates - ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಬೋರ್ಡ್ ಎಕ್ಸಾಮಿನೇಷನ್ 2022 (CBSE Board Exams 2022) ಗಾಗಿ ಪ್ರಮುಖ ಮಾಹಿತಿಯನ್ನು ಬಿಡುಗಡೆ ಮಾಡಿದೆ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗುವ ಖಾಸಗಿ ಅಭ್ಯರ್ಥಿಗಳು (Private Candidates)  ಗುರುವಾರದಿಂದ ಅಂದರೆ ಡಿಸೆಂಬರ್ 2 ರಿಂದ ತಮ್ಮ  ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಸೂಚಿಸಿದೆ. ಈ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ (CBSE) ಪರೀಕ್ಷೆ ನಡೆಸಲಿದೆ.

ಈ ವಿದ್ಯಾರ್ಥಿಗಳು ಪರೀಕ್ಷೆಯನ್ನು ನೀಡಬಹುದು (Who will Participate in Exam)
CBSE ಯ ಸೂಚನೆಗಳ ಪ್ರಕಾರ, 2021 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಉತ್ತೀರ್ಣರಾದ ವಿದ್ಯಾರ್ಥಿಗಳು ಸಹ ಪರೀಕ್ಷೆಗೆ ಹಾಜರಾಗಬಹುದು. ಯಾವುದೇ ಒಂದು ಅಥವಾ ಹೆಚ್ಚಿನ ವಿಷಯಗಳಲ್ಲಿ ತಮ್ಮ ಅಂಕಗಳನ್ನು ಸುಧಾರಿಸಲು ಬಯಸುವ ವಿದ್ಯಾರ್ಥಿಗಳು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ. ಈ ವರ್ಗಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಟರ್ಮ್ 2 ಪಠ್ಯಕ್ರಮದ ಆಧಾರದ ಮೇಲೆ ಮಾತ್ರ ನಡೆಸಲಾಗುವುದು ಎಂದು CBSE ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಗಳಿಗೆ ಹೊಸ ರೋಲ್ ಸಂಖ್ಯೆ (CBSE Exam Roll Number) ನೀಡಲಾಗುವುದು
ಬೋರ್ಡ್ ಪರೀಕ್ಷೆ 2022 ರಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಖಾಸಗಿ ವಿದ್ಯಾರ್ಥಿಗಳಿಗೆ ಹೊಸ ರೋಲ್ ಸಂಖ್ಯೆಯನ್ನು ನೀಡಲಾಗುತ್ತದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಹೊಸ ರೋಲ್ ಸಂಖ್ಯೆಗಳನ್ನು ನೀಡಲಾಗುವುದು ಎಂದು ಸಿಬಿಎಸ್‌ಇ ತಿಳಿಸಿದೆ. ಯಾವುದೇ ಸಂದರ್ಭದಲ್ಲೂ ಅಭ್ಯರ್ಥಿಗಳನ್ನು ಹಿಂದಿನ ವರ್ಷದ ರೋಲ್ ಸಂಖ್ಯೆಯೊಂದಿಗೆ  ಪರೀಕ್ಷೆಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ.

ಇದನ್ನೂ ಓದಿ-CBSE 10th-12th Exam Latest: Term-1 Examಗೆ ಈ ದಿನ ಬಿಡುಗಡೆಯಾಗಲಿದೆ Admit Card, ಈ ರೀತಿ ಡೌನ್ಲೋಡ್ ಮಾಡಿ

ನೋಂದಣಿಯ ಕೊನೆಯ ದಿನಾಂಕ (CBSE Exam Last Day Registration)
ಖಾಸಗಿ ವಿದ್ಯಾರ್ಥಿಗಳಿಗೆ  (Private Students) CBSE ಪರೀಕ್ಷೆ 2022ಕ್ಕೆ ಹೆಸರು ನೋಂದಾಯಿಸಲು ಕೊನೆಯ ದಿನಾಂಕ 20 ಡಿಸೆಂಬರ್ 2021 ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಪ್ರತಿ ಅಭ್ಯರ್ಥಿಗೆ ರೂ.2000 ವಿಳಂಬ ಶುಲ್ಕದೊಂದಿಗೆ ಡಿಸೆಂಬರ್ 30 ರವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ-CBSE ವಿದ್ಯಾರ್ಥಿಗಳಿಗೊಂದು ಮಹತ್ವದ ಸುದ್ದಿ, ಇದೆ ಮೊದಲ ಬಾರಿಗೆ ಹೊಸ ಪ್ಯಾಟರ್ನ್ ನಲ್ಲಿ ನಡೆಯಲಿವೆ ಪರೀಕ್ಷೆ, ಇಲ್ಲಿದೆ ವಿವರ

CBSE 10ನೇ ಮತ್ತು 12ನೇ ಪರೀಕ್ಷೆಗಳು ನಡೆಯುತ್ತಿವೆ (CBSE 10th, 12th Exam Date)
CBSE ಯ 10 ನೇ ಮತ್ತು 12 ನೇ ಅವಧಿ 1 ಬೋರ್ಡ್ ಪರೀಕ್ಷೆ (CBSE Class 10th and 12th Term 1 Board Exam) ಈಗಾಗಲೇ ನಡೆಯುತ್ತಿದೆ. 10 ನೇ ತರಗತಿ ಪರೀಕ್ಷೆಗಳು ನವೆಂಬರ್ 17 ರಿಂದ ಪ್ರಾರಂಭವಾಗಿದ್ದರೆ, 12 ನೇ ತರಗತಿ ಪರೀಕ್ಷೆಗಳು ನವೆಂಬರ್ 16 ರಿಂದ (CBSE Class 10 And 12 Term-1 Exam) ಪ್ರಾರಂಭವಾಗಿದೆ. 10 ನೇ ತರಗತಿಯ ವಿದ್ಯಾರ್ಥಿಗಳ ಮುಖ್ಯ ವಿಷಯಗಳ ಪರೀಕ್ಷೆಗಳು ನವೆಂಬರ್ 30 ರಿಂದ ಡಿಸೆಂಬರ್ 11, 2021 ರವರೆಗೆ ನಡೆಯಲಿದ್ದು, 12 ನೇ ತರಗತಿಯ ವಿದ್ಯಾರ್ಥಿಗಳ ಮುಖ್ಯ ವಿಷಯಗಳ ಪರೀಕ್ಷೆಗಳು ಡಿಸೆಂಬರ್ 1 ರಿಂದ ಡಿಸೆಂಬರ್ 22 ರವರೆಗೆ ನಡೆಯಲಿವೆ. ಇದೇ ವೇಳೆ ಪ್ರಾಯೋಗಿಕ ಪರೀಕ್ಷೆಗಳನ್ನು ನವೆಂಬರ್ 30 ಮತ್ತು ಡಿಸೆಂಬರ್ 23 ರ ನಡುವೆ ನಡೆಯಲಿವೆ. 

ಇದನ್ನೂ ಓದಿ-CBSE Term 1 Practical Exam: ಪ್ರಾಯೋಗಿಕ ಪರೀಕ್ಷೆಗಳಿಗೆ ಲೋಕಲ್ ಶಿಕ್ಷಕರೇ ಎಕ್ಸಾಮಿನರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News