ಎಚ್ಚರಿಕೆ! ಅಪರಿಚಿತ ವ್ಯಕ್ತಿಯ ಹೇಳುವ ಯಾವುದೇ APP ಡೌನ್‌ಲೋಡ್ ಮಾಡಬೇಡಿ: ದೆಹಲಿ ಪೊಲೀಸ್

ಯಾವುದೇ ಇವಾಲೆಟ್ ಕಂಪನಿಯು ಕರೆ ಮಾಡುವ ಮೂಲಕ ಕೆವೈಸಿ ಪರಿಶೀಲನೆ ಮಾಡುವುದಿಲ್ಲ ಎಂದು ಸೈಬರ್ ಸೆಲ್ ಜನರಿಗೆ ಎಚ್ಚರಿಕೆ ನೀಡಿದೆ.

Last Updated : Nov 28, 2019, 10:16 AM IST
ಎಚ್ಚರಿಕೆ! ಅಪರಿಚಿತ ವ್ಯಕ್ತಿಯ ಹೇಳುವ ಯಾವುದೇ APP ಡೌನ್‌ಲೋಡ್ ಮಾಡಬೇಡಿ: ದೆಹಲಿ ಪೊಲೀಸ್ title=
Photo courtesy: Twitter@DCP_CCC_Delhi

ನವದೆಹಲಿ: ನಡೆಯುತ್ತಿರುವ ಸೈಬರ್ ಅಪರಾಧ ಪೇಟಿಎಂ (Paytm) ಅಥವಾ ಇತರ ಇ-ವ್ಯಾಲೆಟ್‌ಗಳ ಮೂಲಕ ವಂಚನೆಯನ್ನು ತಪ್ಪಿಸುವ ಸಲುವಾಗಿ, ದೆಹಲಿಯ ಸೈಬರ್ ಸೆಲ್ ಟ್ವೀಟ್ ಮಾಡುವ ಮೂಲಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಜನರಿಗೆ ಮನವಿ ಮಾಡುತ್ತಿದೆ. ಸೈಬರ್ ಸೆಲ್‌ನ ಡಿಸಿಪಿ ಅನಶ್ ರಾಯ್ ಅವರ ಪ್ರಕಾರ, ರಾಜಧಾನಿ ದೆಹಲಿಯಲ್ಲಿ ಪೇಟಿಎಂ(Paytm)ನ ಕೆವೈಸಿ ಹೆಸರಿನಲ್ಲಿ ವಂಚನೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಈ ಕಾರಣದಿಂದಾಗಿ, Paytm KYC ಯ ಪರಿಶೀಲನೆಯ ಹೆಸರಿನಲ್ಲಿ ಯಾರಾದರೂ ನಿಮಗೆ ಕರೆ ಮಾಡಿದರೆ ಅಥವಾ SMS ಮಾಡಿದರೆ, ಅವರನ್ನು ನಂಬಬೇಡಿ ಎಂದು ದೆಹಲಿ ಪೊಲೀಸರ ಸೈಬರ್ ಸೆಲ್ ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ಮನವಿ ಮಾಡಿದೆ.

ಯಾವುದೇ ಇವಾಲೆಟ್ ಕಂಪನಿಯು ಕರೆ ಮಾಡುವ ಮೂಲಕ ಕೆವೈಸಿ ಪರಿಶೀಲನೆ ಮಾಡುವುದಿಲ್ಲ ಎಂದು ಸೈಬರ್ ಸೆಲ್ ಜನರಿಗೆ ಎಚ್ಚರಿಕೆ ನೀಡಿದೆ.  ಅಪರಿಚಿತ ವ್ಯಕ್ತಿಯ ಹೇಳುವ ಯಾವುದೇ APP ಡೌನ್‌ಲೋಡ್ ಮಾಡಬೇಡಿ ದೆಹಲಿ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಯಾವುದೇ ಇವಾಲೆಟ್ ಕಂಪನಿಯು ಕರೆ ಮಾಡುವ ಮೂಲಕ ಕೆವೈಸಿ ಪರಿಶೀಲನೆ ಮಾಡುವುದಿಲ್ಲ ಎಂದು ಸೈಬರ್ ಸೆಲ್ ಜನರಿಗೆ ಎಚ್ಚರಿಕೆ ನೀಡಿದೆ.

ಇಂಟರ್ನೆಟ್ ಜಗತ್ತಿನಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆಯ ಬಗ್ಗೆ ಕಂಪನಿಗಳು ಆಗಾಗ್ಗೆ ತಮ್ಮ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಲೇ ಇರುತ್ತವೆ. ಇದಕ್ಕೂ ಮೊದಲು ಒಂದು ವಾರದ ಹಿಂದೆ, ಮೊಬೈಲ್ ಪಾವತಿ ಕಂಪನಿ ಪೇಟಿಎಂ (Paytm) ತನ್ನ ಬಳಕೆದಾರರನ್ನು ಜಾಗರೂಕರಾಗಿರಲು ಎಚ್ಚರಿಕೆ ನೀಡಿದೆ. ಎಚ್ಚರಿಕೆಯನ್ನು ತೆಗೆದುಕೊಳ್ಳದಿದ್ದರೆ, ಬಳಕೆದಾರರು ತೊಂದರೆಗೀಡಾಗುವ ಸಾಧ್ಯತೆಯಿದೆ.

ಕೆವೈಸಿ ಮತ್ತು ಅಕೌಂಟ್ ಬ್ಲಾಕ್‌ಗಳಿಗೆ ಸಂಬಂಧಿಸಿದ ಮೋಸದ ಸಂದೇಶಗಳು ಮತ್ತು ಕರೆಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು Paytm ಮಾಲೀಕ ವಿಜಯ್ ಶೇಖರ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಈ ವಂಚನೆ ಸಂದೇಶಗಳ ಮೂಲಕ ಕೆವೈಸಿ ನವೀಕರಣವನ್ನು ಉಲ್ಲೇಖಿಸಿ ಅಪ್ಲಿಕೇಶನ್ ಅನ್ನು ಬಳಕೆದಾರರ ಫೋನ್‌ಗೆ ಡೌನ್‌ಲೋಡ್ ಮಾಡಲಾಗುತ್ತಿದೆ. ಅಂತಹ ಸಂವಹನದಿಂದ ಎಚ್ಚರದಿಂದಿರಿ ಎಂದು ಅವರು ಗ್ರಾಹಕರಿಗೆ ತಿಳಿಸಿದ್ದರು.

ಟ್ವೀಟ್‌ನಲ್ಲಿ, Paytm ಕೆವೈಸಿಗೆ ಯಾವುದೇ ರೀತಿಯ ಸಂದೇಶಗಳನ್ನು ಕಳುಹಿಸುವುದಿಲ್ಲ ಅಥವಾ ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಕೇಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಿಮ್ಮ ವಿವರಗಳನ್ನು ತೆಗೆದುಕೊಳ್ಳುವ ಮೂಲಕ ನಿಮ್ಮ ಖಾತೆಯಿಂದ ಹಣವನ್ನು ಕದಿಯಲು ಬಯಸುವ ಮೋಸಗಾರರ ಬಗ್ಗೆ ಎಚ್ಚರದಿಂದಿರಿ ಎಂದವರು ಗ್ರಾಹಕರಿಗೆ ಮನವಿ ಮಾಡಿದ್ದರು.

Trending News