ಮೀಸಲಾತಿ, ಎಸ್ಸಿ/ಎಸ್ಟಿ ಕಾಯ್ದೆ ಜಾತಿ ಪದ್ಧತಿಯನ್ನು ಜೀವಂತವಾಗಿರಿಸಿದೆ- ಬಿಜೆಪಿ ಶಾಸಕ

ಎಸ್‌ಸಿ ಮತ್ತು ಎಸ್‌ಟಿಗಳ ಮೇಲಿನ ದೌರ್ಜನ್ಯ ತಡೆಗಟ್ಟುವ ಕಾನೂನುಗಳು ಮತ್ತು ಅವರಿಗೆ ನೀಡುತ್ತಿರುವ ಮೀಸಲಾತಿ ಇಂದಿನ ಸಮಾಜದಲ್ಲಿ ಜಾತಿಪದ್ದತಿಯನ್ನು ಜೀವಂತವಾಗಿರಿಸಿದೆ ಎಂದು ಬಲ್ಲಿಯಾ ವಿಧಾನಸಭಾ ಕ್ಷೇತ್ರದ ಬಿಜೆಪಿ  ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.

Last Updated : Aug 12, 2019, 01:31 PM IST
ಮೀಸಲಾತಿ, ಎಸ್ಸಿ/ಎಸ್ಟಿ ಕಾಯ್ದೆ ಜಾತಿ ಪದ್ಧತಿಯನ್ನು ಜೀವಂತವಾಗಿರಿಸಿದೆ- ಬಿಜೆಪಿ ಶಾಸಕ  title=
file photo

ನವದೆಹಲಿ: ಎಸ್‌ಸಿ ಮತ್ತು ಎಸ್‌ಟಿಗಳ ಮೇಲಿನ ದೌರ್ಜನ್ಯ ತಡೆಗಟ್ಟುವ ಕಾನೂನುಗಳು ಮತ್ತು ಅವರಿಗೆ ನೀಡುತ್ತಿರುವ ಮೀಸಲಾತಿ ಇಂದಿನ ಸಮಾಜದಲ್ಲಿ ಜಾತಿಪದ್ದತಿಯನ್ನು ಜೀವಂತವಾಗಿರಿಸಿದೆ ಎಂದು ಬಲ್ಲಿಯಾ ವಿಧಾನಸಭಾ ಕ್ಷೇತ್ರದ ಬಿಜೆಪಿ  ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.

ಭಾನುವಾರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ' "ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಕಾಯ್ದೆಯಿಂದಾಗಿ ಜಾತಿ ವ್ಯವಸ್ಥೆಯನ್ನು ಇಂದು ಜೀವಂತವಾಗಿರಿಸಿದೆ, ಈ ಕಾಯ್ದೆಯನ್ನು ರದ್ದುಗೊಳಿಸಿದರೆ ಯಾವುದೇ ಅಸ್ಪೃಶ್ಯತೆ ಇರುವುದಿಲ್ಲ ಎಂದು ಹೇಳಿದರು. 

ಉತ್ತರ ಪ್ರದೇಶ ದ ಬಲ್ಲಿಯಾ ಕ್ಷೇತ್ರವನ್ನು ಪ್ರತಿನಿಧಿಸುವ ಸಿಂಗ್, ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಜುಲೈ 30 ರಂದು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಪ್ರಾಬಲ್ಯದ ಪ್ರದೇಶಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ತತ್ವಗಳು ಅಪಾಯಕ್ಕೆ ಸಿಲುಕಿವೆ ಎಂದು ಅವರು ಹೇಳಿಕೊಂಡಿದ್ದರು. ಜುಲೈ 23 ರಂದು ಮತ್ತೊಂದು ಹೇಳಿಕೆಯಲ್ಲಿ, ಹಿಂದೂಗಳು ಸಂಪರ್ಕವನ್ನು ಬೇರ್ಪಡಿಸಲು ನಿರ್ಧರಿಸಿದರೆ, ಮುಸ್ಲಿಮರು ಹಸಿವಿನಿಂದ ಸಾಯುತ್ತಾರೆ ಎಂದು ಅವರು ಹೇಳಿದ್ದರು.

ಅಲ್ಲದೆ ಒಂದಕ್ಕಿಂತ ಅಧಿಕ ಹೆಂಡತಿ ಮತ್ತು ಬಹು ಮಕ್ಕಳನ್ನು ಹೊಂದಿರುವ ಮುಸ್ಲಿಮರಿಗೆ ಪ್ರಾಣಿ ಪ್ರವೃತ್ತಿ ಇದೆ ಎಂದು ಅವರು ಈ ಹಿಂದೆ ಹೇಳಿದ್ದರು.ಹಿಂದುತ್ವ ಉಳಿಯಬೇಕೆಂದರೆ ಹಿಂದೂ ದಂಪತಿಗಳು ಕನಿಷ್ಠ ಐದು ಮಕ್ಕಳನ್ನು ಹೇರಬೇಕು ಎಂದು ಅವರು ತಿಳಿಸಿದ್ದರು. 

Trending News