ಸಿದ್ಧಾರ್ಥ್ 5 ಲಕ್ಷ ರೂ.ನಲ್ಲಿ ಸ್ಥಾಪಿಸಿದ್ದ ಸಿಸಿಡಿ ಕಂಪನಿಯ ಇಂದಿನ ಮೌಲ್ಯ 4,000 ಕೋಟಿ ರೂ.ಗೂ ಅಧಿಕ!

ಪ್ರಸಿದ್ಧ ಕಾಫಿ ಸಂಸ್ಥೆಯ ಮಾಲೀಕ(CCD Owner) ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ. ಸಿದ್ಧಾರ್ಥ್ ಸೋಮವಾರ ಸಂಜೆಯಿಂದ ಕಾಣೆಯಾಗಿದ್ದಾರೆ. ಅವರ ಹಠಾತ್ ಕಣ್ಮರೆಯಿಂದ ಇಡೀ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ.

Last Updated : Jul 30, 2019, 01:12 PM IST
ಸಿದ್ಧಾರ್ಥ್ 5 ಲಕ್ಷ ರೂ.ನಲ್ಲಿ ಸ್ಥಾಪಿಸಿದ್ದ ಸಿಸಿಡಿ ಕಂಪನಿಯ ಇಂದಿನ ಮೌಲ್ಯ 4,000 ಕೋಟಿ ರೂ.ಗೂ ಅಧಿಕ! title=

ಬೆಂಗಳೂರು: ಪ್ರಸಿದ್ಧ ಕಾಫಿ ಸಂಸ್ಥೆಯ ಮಾಲೀಕ(CCD Owner) ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ. ಸಿದ್ಧಾರ್ಥ್ ಸೋಮವಾರ ಸಂಜೆಯಿಂದ ಕಾಣೆಯಾಗಿದ್ದಾರೆ. ಅವರ ಹಠಾತ್ ಕಣ್ಮರೆಯಿಂದ ಇಡೀ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. ದಕ್ಷಿಣ ಕನ್ನಡ ಪೊಲೀಸರು ತಮ್ಮ ತನಿಖೆಯಲ್ಲಿ ನಿರತರಾಗಿದ್ದಾರೆ. ಮೂಲಗಳ ಪ್ರಕಾರ, ವ್ಯವಹಾರಕ್ಕೆ ಸಂಬಂಧಿಸಿದಂತೆ ಸಿದ್ಧಾರ್ಥ ಸೋಮವಾರ ಇನ್ನೋವಾ ಕಾರಿನಲ್ಲಿ ಸಕಲೇಶಪುರಕ್ಕೆ ತೆರಳುತ್ತಿರುವುದಾಗಿ ಹೇಳಿ ಹೋಗಿದ್ದರು. ಸಿದ್ದಾರ್ಥ್‌ ನೇತ್ರಾವತಿ ಸೇತುವೆ ಮೇಲೆ ತೆರಳುತ್ತಿದ್ದಾಗ ಕಡೆಕಾರು ರಸ್ತೆಯಲ್ಲಿ ಹೋಗುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಕಾರು ನಿಲ್ಲಿಸಲು ಹೇಳಿ, ಮೊಬೈಲ್ ನಲ್ಲಿ ಮಾತನಾಡುತ್ತಾ ಕಾರಿನಿಂದ ಇಳಿದು ಮುಂದಕ್ಕೆ ಹೋಗಿದ್ದಾರೆ. ಆ ಬಳಿಕ ನಾಪತ್ತೆ ಆಗಿದ್ದಾರೆ.

23 ವರ್ಷಗಳ ಹಿಂದೆ 5 ಲಕ್ಷ ರೂ.ನಲ್ಲಿ ಕಂಪನಿ ಸ್ಥಾಪಿಸಿದ್ದ ಸಿದ್ಧಾರ್ಥ್:
ದೇಶದ ಅತಿದೊಡ್ಡ ಕಾಫಿ ಚೈನ್ ಕೆಫೆ ಕಾಫಿ ಡೇ(ಸಿಸಿಡಿ) ಅನ್ನು 1996 ರಲ್ಲಿ ಸ್ಥಾಪಿಸಿದ ಸಿದ್ಧಾರ್ಥ್, ಚಿಕ್ಕಮಗಳೂರು ಕಾಫಿಯನ್ನು ವಿಶ್ವಾದ್ಯಂತ ಜನಪ್ರಿಯಗೊಳಿಸಿದರು. 23 ವರ್ಷಗಳ ಹಿಂದೆ ಸಿಸಿಡಿ ಜುಲೈ 1996 ರಲ್ಲಿ ಮೊದಲಿಗೆ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಪ್ರಾರಂಭವಾಯಿತು. ಆರಂಭದಲ್ಲಿ ಕಾಫಿ ಶಾಪ್ ಇಂಟರ್ನೆಟ್ ಕೆಫೆಯೊಂದಿಗೆ ತೆರೆಯಲ್ಪಟ್ಟಿತು. ನಗರದ ಬ್ರಿಗೇಡ್ ರಸ್ತೆಯಲ್ಲಿರುವ ಈ ಕೆಫೆ ಕಾಫಿ ಡೇ ಇಂದಿಗೂ ಯುವಕರ ಹ್ಯಾಂಗ್‌ ಔಟ್ ಸ್ಪಾಟ್ ತಾಣ. ಅಲ್ಲಿ ಅವರು ಸ್ನೇಹಿತರೊಂದಿಗೆ ಮಾತನಾಡುತ್ತಾ ಮತ್ತು ಕಾಫಿ ಸಿಪ್‌ನೊಂದಿಗೆ ಸಮಯವನ್ನು ಆನಂದಿಸುತ್ತಾರೆ. ಕ್ರಮೇಣ ಈ ಪರಿಕಲ್ಪನೆಯು ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಸಿಸಿಡಿ ಕಾಫಿಯೊಂದಿಗೆ ತನ್ನ ಮೂಲ ವ್ಯವಹಾರವನ್ನು ಪ್ರಾರಂಭಿಸಿತು.

ದೇಶದ ಅತಿದೊಡ್ಡ ಕಾಫಿ ಚೈನ್: 
ಮೊದಲ ಕೆಲವು ವರ್ಷಗಳಲ್ಲಿ, ಸಿಸಿಡಿ ಆಯ್ದ ಕೆಲವು ಪ್ರದೇಶಗಳಲ್ಲಿ ಕೆಫೆ ಕಾಫಿ ಡೇಯನ್ನು ತೆರೆಯಿತು ಮತ್ತು ಈಗ ಇದು ದೇಶದ ಅತಿದೊಡ್ಡ ಕಾಫಿ ಚೈನ್ ಆಗಿದೆ. ಇಂದು ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಕೂಡ ಸಿಸಿಡಿ ಕೆಫೆಗಳು ಹೆಸರುವಾಸಿಯಾಗಿವೆ. ದೇಶದ 247 ನಗರಗಳಲ್ಲಿ ಸಿಸಿಡಿಯ 1,758 ಕೆಫೆಗಳಿವೆ. ಸಿಸಿಡಿ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಅವರ ಕುಟುಂಬವು ನೂರಾರು ಎಕರೆ ಕಾಫಿ ತೋಟ ಹೊಂದಿದ್ದು, ಅಲ್ಲಿ ದುಬಾರಿ ಕಾಫಿ ಬೆಳೆಯಲಾಗುತ್ತಿತ್ತು. ಇಲ್ಲಿಂದಲೇ ಅವರಿಗೆ ಸಿಸಿಡಿ ಕಲ್ಪನೆ ಬಂದಿದೆ ಎನ್ನಲಾಗಿದೆ. 90 ರ ದಶಕದಲ್ಲಿ, ದಕ್ಷಿಣ ಭಾರತ ಮತ್ತು ಪಂಚತಾರಾ ಹೋಟೆಲ್‌ಗಳಲ್ಲಿ ಪ್ರವೃತ್ತಿಯಲ್ಲಿದ್ದ ಕಾಫಿ ಅವರು ಸಾಮಾನ್ಯ ಜನರನ್ನು ತಲುಪುವಂತೆ ಮಾಡಿತು.

ಷರತ್ತಿನ ಮೇಲೆ 5 ಲಕ್ಷ ರೂ. ನೀಡಿದ್ದ ಸಿದ್ಧಾರ್ಥ್ ತಂದೆ:
ಕುಟುಂಬದಲ್ಲಿ ಕಾಫಿಯ ಬಗಿಗಿದ್ದ ಆಳವಾದ ತಿಳುವಳಿಕೆಯಿಂದಾಗಿ ವಿ.ಜಿ. ಸಿದ್ಧಾರ್ಥ್ ಸಿಸಿಡಿಯನ್ನು ಪ್ರಾರಂಭಿಸಿದರು. ಸಿದ್ಧಾರ್ಥ್ ಅವರ ತಂದೆ ಆರಂಭದಲ್ಲಿ 5 ಲಕ್ಷ ರೂಪಾಯಿಗಳನ್ನು ವ್ಯವಹಾರಕ್ಕಾಗಿ ಅವರಿಗೆ  ನೀಡಿದರು. ಅವರು ಮಗ ಸಿದ್ಧಾರ್ಥನಿಗೆ ವ್ಯವಹಾರದಲ್ಲಿ ಅದರಲ್ಲಿ ಯಶಸ್ವಿಯಾಗಲು ಸಾಧ್ಯವಾಗದಿದ್ದರೆ, ಅವರು ತಮ್ಮ ಕುಟುಂಬ ವ್ಯವಹಾರಕ್ಕೆ ಮರಳಬೇಕು ಎಂದು ಆ ವೇಳೆ ಸಿದ್ಧಾರ್ಥ್ ತಂದೆ ಮಗನಿಗೆ ಷರತ್ತು ವಿಧಿಸಿದ್ದರು. ಆದರೆ ಸಿದ್ಧಾರ್ಥನ ಉತ್ಸಾಹ ಮತ್ತು ವ್ಯವಹಾರದ ಆಳವಾದ ತಿಳುವಳಿಕೆಯಿಂದಾಗಿ, ಸಿಸಿಡಿ ಇಂದು 4000 ಕೋಟಿಗೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿರುವ ಕಂಪನಿಯಾಗಿ ಮಾರ್ಪಟ್ಟಿದೆ.

Trending News