CAA PROTEST: ZEE NEWS ತಂಡದ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು

ಪ್ರತಿಭಟನೆಯಲ್ಲಿ ನಿರತರಾದ ವ್ಯಕ್ತಿಗಳ ಜೊತೆ ಮಾತುಕತೆ ನಡೆಸಲು ಮುಂದಾದ ZEE NEWS ಸುದ್ದಿಗಾರರ ಮೇಲೆ ಹಲ್ಲೆ ನಡೆಸಲಾಗಿದ್ದು, ಛಾಯಾಗ್ರಾಹಕರ ಬಳಿಯಿಂದ ಕ್ಯಾಮೆರಾ ಕಸಿದು ಧ್ವಂಸಗೊಳಿಸಲಾಗಿದೆ.

Last Updated : Jan 30, 2020, 07:46 PM IST
CAA PROTEST: ZEE NEWS ತಂಡದ ಮೇಲೆ ದಾಳಿ ನಡೆಸಿದ ಪ್ರತಿಭಟನಾಕಾರರು title=

ನವದೆಹಲಿ:CAA ವಿರೋಧಿಸಿ ನಡೆಸಲಾಗುತ್ತಿರುವ ವಿರೋಧ ಪ್ರತಿಭಟನೆಯ ವೇಳೆ ಪ್ರತಿಭಟನಾನಿರತರು ದೆಹಲಿಯ ಸುಖದೇವ್ ವಿಹಾರ್ ಬಳಿ ZEE NEWS ತಂಡದ ಮೇಲೆ ಹಲ್ಲೆ ನಡೆಸಿದ್ದಾರೆ. ತಂಡದ ಸದಸ್ಯರ ಜೊತೆ ನೂಕುನುಗ್ಗಲು ನಡೆಸಿದ್ದಾರೆ. ಅಷ್ಟೇ ಅಲ್ಲ ZEE NEWS ವರದಿಗಾರ ಜಿತೇಂದ್ರ ಶರ್ಮಾ ಹಾಗೂ ನೀರಜ್ ಗೌಡ ಅವರನ್ನು ಹೊಡೆದಿದ್ದಾರೆ. CAA ವಿರೋಧ ವ್ಯಕ್ತಪಡಿಸುತ್ತಿರುವವರು ಈ ಹಲ್ಲೆ ನಡೆಸಿದ್ದಾರೆ. ಪ್ರತಿಭಟನಾ ನಿರತರ ಜೊತೆ ವರದಿಗಾರರು ಮಾತುಕತೆ ನಡೆಸಲು ಮುಂದಾದ ವೇಳೆ ಈ ಹಲ್ಲೆ ನಡೆದಿದೆ. ಪ್ರತಿಭಟನಾ ನಿರತ ಯುವಕರು ZEE NEWS ತಂಡದ ಬಳಿಯಿದ್ದ ಕ್ಯಾಮೆರಾ ಕೂಡ ಕಸಿದು ಧ್ವಂಸಗೊಳಿಸಿದ್ದಾರೆ.

ಇದೆ ರೀತಿ ಇನ್ನೊಂದು ಪ್ರಕರಣದಲ್ಲಿ CAA ಅನ್ನು ವಿರೋಧಿಸಿ ನಡೆಸಲಾಗುತ್ತಿರುವ ಪ್ರತಿಭಟನೆಗಳ ಮಧ್ಯೆ ಯುವಕನೋರ್ವ ಇಂದು ನಗರದ ಜಾಮಿಯಾ ಪ್ರದೇಶದಲ್ಲಿ ಗುಂಡು ಹಾರಿಸಿದ್ದಾನೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು CAA ವಿರೋಧಿಸಿ ದೆಹಲಿಯಲ್ಲಿ ಮಾರ್ಚ್ ನಡೆಸಲು ಮುಂದಾಗಿದ್ದರು. ಅವರ ಈ ಮಾರ್ಚ್ ರಾಜಘಾಟ್ ಕಡೆಗೆ ಸಾಗುತ್ತಿತ್ತು. ಆದರೆ, ಪೊಲೀಸರು ಈ ಮಾರ್ಚ್ ಗೆ ಅನುಮತಿ ನೀಡಿರಲಿಲ್ಲ. ಈ ವೇಳೆ ಹೊಲಿ ಫ್ಯಾಮಿಲಿ ಆಸ್ಪತ್ರೆಯ ಬಳಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಈ ಮಾರ್ಚ್ ಅನ್ನು ತಡೆಯುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅಷ್ಟರಲ್ಲಿ ನೆರೆದ ಜನಸಂದನಿಯಿಂದ ಮುಂದೆ ಬಂದ ಯುವಕನೋರ್ವ ಪಿಸ್ತೂಲ್ ಮೂಲಕ ಗುಂಡು ಹಾರಿಸಿದ್ದಾನೆ. ಈ ದಾಳಿಯಲ್ಲಿ ಶಾದಾಬ್ ಹೆಸರಿನ ಜಾಮಿಯಾ ವಿಧ್ಯಾರ್ಥಿ ಗಾಯಗೊಂಡಿದ್ದಾನೆ.

ಶಾದಾಬ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಾಳಿ ನಡೆಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿಯ ಕುರಿತು ಪ್ರಾಥಮಿಕ ಮಾಹಿತಿ ಬಹಿರಂಗಗೊಂಡಿದ್ದು, ಆರೋಪಿ ಅಪ್ರಾಪ್ತ ಬಾಲಕನಾಗಿದ್ದು, ಆತನ ವಯಸ್ಸು 17 ವರ್ಷ ಎಂದು ಹೇಳಲಾಗಿದೆ. ಹಲ್ಲೆ ನಡಿಸಿರುವ ಯುವಕನ ಆಧಾರ್ ಕಾರ್ಡ್ ಪ್ರಕಾರ ಆತನ ಹೆಸರು ಗೋಪಾಲ್ ಶರ್ಮಾ ಆಗಿದ್ದು, ಆಟ ಗೌತಮ್ ಬುದ್ಧ ನಗರ(ನೋಯ್ಡಾ)ದ ಜೇವರ್ ಕಸ್ಬಾನಲ್ಲಿ ಮದುವೆಗೆ ಕುದುರೆ ನೀಡುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾನೆ. ಶಾದಾಬ್ ಜಾಮೀಯಾ ವಿಶ್ವವಿದ್ಯಾಲಯದಲ್ಲಿ ಮಾಸ್ ಕಮ್ಯೂನಿಕೇಶನ್ ಅಧ್ಯಯನ ಮಾಡುತ್ತಿದ್ದಾನೆ. ಈ ಕುರಿತು ಮಾಹಿತಿ ನೀಡಿರುವ DCP ಚಿನ್ಮಯ್ ಬಿಸ್ವಾಲ್, ಗುಂಡಿನ ದಾಳಿಯಲ್ಲಿ ಶಾದಾಬ್ ನ ಎಡಗೈಗೆ ಗುಂಡು ತಗುಲಿದ್ದು, ಸದ್ಯ ಆತ ಅಪಾಯದಿಂದ ಪಾರಾಗಿದ್ದು, ಹಲ್ಲೆ ನಡೆಸಿದ ಯುವಕನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.

Trending News