Budget 2021: ಯಾವುದು ಅಗ್ಗ, ಯಾವುದು ದುಬಾರಿ? ಇಲ್ಲಿದೆ ವಿವರ

2021-22ರ ಈ ಬಜೆಟ್ ನಿಮ್ಮ ಜೇಬಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ

Written by - Yashaswini V | Last Updated : Feb 1, 2021, 03:12 PM IST
  • ಈ ವರ್ಷದ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಮತ್ತು ಬಟ್ಟೆಗಳು ಅಗ್ಗವಾಗಿವೆ
  • ಆದರೆ ಪೆಟ್ರೋಲ್‌ಗೆ 2.5 ರೂ. ಮತ್ತು ಡೀಸೆಲ್‌ಗೆ 4 ರೂ.ಗಳನ್ನು ಸೆಸ್ ವಿಧಿಸಲಾಗಿದ್ದು ಅವು ದುಬಾರಿಯಾಗಲಿವೆ
  • 2021-22ರ ಈ ಬಜೆಟ್ ನಿಮ್ಮ ಜೇಬಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯಿರಿ...
Budget 2021: ಯಾವುದು ಅಗ್ಗ, ಯಾವುದು ದುಬಾರಿ? ಇಲ್ಲಿದೆ ವಿವರ title=
Budget 2021

ನವದೆಹಲಿ: ಫೆಬ್ರವರಿ ಮೊದಲ ದಿನ ಭಾರತ ಸರ್ಕಾರ ತನ್ನ 2021-22ರ ಬಜೆಟ್ ಮಂಡಿಸಿತು. ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸುಮಾರು 2 ಗಂಟೆಗಳ ಕಾಲ ಬಜೆಟ್ ಭಾಷಣ ಮಾಡುವ ಮೂಲಕ ದೇಶವಾಸಿಗಳ ವರ್ಷದ ಆಯ-ವ್ಯಯವನ್ನು ಮಂಡಿಸಿದರು. ಬಜೆಟ್‌ನಲ್ಲಿ ಹಣಕಾಸು ಸಚಿವರು ಇಂತಹ ಘೋಷಣೆ ಮಾಡಿದ್ದು, ಇದು ಮಹಿಳೆಯರ ಸಂತೋಷವನ್ನು ದ್ವಿಗುಣಗೊಳಿಸುತ್ತದೆ. ಈ ವರ್ಷದ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಮತ್ತು ಬಟ್ಟೆಗಳು ಅಗ್ಗವಾಗಿವೆ. ಆದರೆ ಪೆಟ್ರೋಲ್‌ಗೆ 2.5 ರೂ. ಮತ್ತು ಡೀಸೆಲ್‌ಗೆ 4 ರೂ.ಗಳನ್ನು ಸೆಸ್ ವಿಧಿಸಲಾಗಿದ್ದು, ಇದು ಸಾಮಾನ್ಯ ಜನರ ಜೇಬಿನ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. 2021-22ರ ಈ ಬಜೆಟ್ ನಿಮ್ಮ ಜೇಬಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯಿರಿ...

ಇದು ನಿಮ್ಮ ಜೇಬನ್ನು ಖಾಲಿ ಮಾಡಲಿವೆ :
1. ಮೊಬೈಲ್ ಫೋನ್ (Mobile Phone) ದುಬಾರಿ
2. ಶೂಗಳು ದುಬಾರಿ
3. ಮೊಬೈಲ್ ಚಾರ್ಜರ್ ದುಬಾರಿ
4. ವಿದೇಶದಿಂದ ಬರುವ ವಾಹನ ಬಿಡಿಭಾಗಗಳು
5. ರತ್ನಗಳು ದುಬಾರಿಯಾಗಲಿದೆ
6. ಪೆಟ್ರೋಲ್​ - ಡೀಸೆಲ್​ (Petrol Diesel)
7. ಎಲೆಕ್ಟ್ರಾನಿಕ್ಸ್​ ವಸ್ತುಗಳು
8. ಚರ್ಮ ಉತ್ಪನ್ನಗಳು
9. ಕೃಷಿ ಉತ್ಪನ್ನಗಳು
10. ಪ್ಲಾಸ್ಟಿಕ್​ 
11. ಮದ್ಯ

ಇದನ್ನೂ ಓದಿ - Budget 2021: Ujjwala Yojana ಕುರಿತು ವಿತ್ತ ಸಚಿವರಿಂದ ಮಹತ್ವದ ಘೋಷಣೆ

ಇವುಗಳು ಅಗ್ಗವಾಗಲಿವೆ :
1. ನೈಲಾನ್ ಬಟ್ಟೆಗಳು 
2. ಉಕ್ಕಿನ ಪಾತ್ರೆಗಳು 
3. ಪೇಂಟ್  
4. ಡ್ರೈ ಕ್ಲೀನಿಂಗ್ 
5. ಪಾಲಿಯೆಸ್ಟರ್ ಫ್ಯಾಬ್ರಿಕ್ 
6. ಚಿನ್ನ (Gold) ಮತ್ತು ಬೆಳ್ಳಿ ಅಗ್ಗವಾಗಿದೆ (ಇದರ ಕಸ್ಟಮ್ ಸುಂಕವನ್ನು 12.5 ಕ್ಕೆ ಇಳಿಸಲಾಗಿದೆ).
7. ಸೌರ ದೀಪಗಳು ಸಹ ಅಗ್ಗವಾಗಿವೆ
8. ತಾಮ್ರ ಅಗ್ಗವಾಗಲಿದೆ

ಇದನ್ನೂ ಓದಿ - Budget 2021 : Petrol ಬೆಲೆಯಲ್ಲಿ 2.5 ರೂ. Diesel ದರದಲ್ಲಿ 4 ರೂ. ಹೆಚ್ಚಳ

ತೆರಿಗೆಗೆ ಸಂಬಂಧಿಸಿದಂತೆ ಈ ಬದಲಾವಣೆಗಳು :
1. ಭಾರತದಲ್ಲಿ ಕಡಿಮೆ ಕಾರ್ಪೊರೇಟ್ ತೆರಿಗೆ
2. ಪಿಂಚಣಿ ಪಡೆಯುವ ಹಿರಿಯ ನಾಗರೀಕರು ಐಟಿಆರ್ (ITR) ತುಂಬಬೇಕಾಗಿಲ್ಲ
3. ಸಣ್ಣ ತೆರಿಗೆದಾರರು ಕಡಿಮೆ ತೆರಿಗೆಯನ್ನು ಹೊಂದಿರುತ್ತಾರೆ
4. ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ವಿನಾಯಿತಿ
5. ತೆರಿಗೆ ವಂಚನೆಯ ಹಳೆಯ ಪ್ರಕರಣಗಳು ತೆರೆದುಕೊಳ್ಳುತ್ತವೆ
6. 75 ವರ್ಷ ವಯಸ್ಸಿನವರು ಐಟಿಆರ್ ತುಂಬಬೇಕಾಗಿಲ್ಲ
7. ಪಿಂಚಣಿ ಆದಾಯದ ಮೇಲೆ ತೆರಿಗೆ ಇಲ್ಲ
8. ಗೃಹ ಸಾಲದ (Home Loan) ಮೇಲಿನ ಸರ್ಕಾರದ ರಿಯಾಯಿತಿ 2022 ರವರೆಗೆ ಇರುತ್ತದೆ
9. ಇದುವರೆಗಿನ ಅತಿ ಹೆಚ್ಚು ಐಟಿಆರ್ ಸಂಗ್ರಹ
10. ಮಾರ್ಚ್ 31, 2022 ರವರೆಗೆ ಸ್ಟಾರ್ಟರ್ ಅಪ್ ಮೇಲೆ ಯಾವುದೇ ತೆರಿಗೆ ಇಲ್ಲ

ಇದನ್ನೂ ಓದಿ - Budget 2021: Pensionನಿಂದ ಬಂದ ಆದಾಯಕ್ಕೆ No Tax, ಯಾವ ಯಾವ ಸರಕುಗಳ ಮೇಲೆ ಕೃಷಿ ಸೆಸ್ ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News