ನವದೆಹಲಿ: ಬಜೆಟ್ ದಾಖಲೆಗಳ ಮುದ್ರಣ ಪ್ರಕ್ರಿಯೆಯನ್ನು ಗುರುತಿಸುವ ಸಾಂಪ್ರದಾಯಿಕ ಹಲ್ವಾ ಸಮಾರಂಭವನ್ನು ಜನವರಿ 20 ರಂದು ನಡೆಸಲಾಗುವುದು. ಅಂದರೆ ಬಜೆಟ್ ಮಂಡನೆಗೆ ಹತ್ತು ದಿನಗಳು ಇರುವ ಮುಂಚೆಯೇ ಇದಕ್ಕೆ ಚಾಲನೆ ನೀಡಲಾಗುತ್ತದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ತಯಾರಿಕೆಯಲ್ಲಿ ಭಾಗಿಯಾಗಲಿರುವ ಇತರ ಅಧಿಕಾರಿಗಳು ಮತ್ತು ಹಣಕಾಸು ಸಚಿವಾಲಯದ ಸಹಾಯಕ ಸಿಬ್ಬಂದಿಯೊಂದಿಗೆ ಹಾಜರಾಗಲಿದ್ದಾರೆ.ಸಮಾರಂಭವು ಹಣಕಾಸು ಸಚಿವಾಲಯ ಮತ್ತು ಗೃಹ ಸಚಿವಾಲಯ ಇರುವ ನಾರ್ತ್ ಬ್ಲಾಕ್‌ನಲ್ಲಿ ನಡೆಯಲಿದೆ.
ಹಲ್ವಾ ಸಮಾರಂಭದ ಮಹತ್ವ:
ದಶಕಗಳಷ್ಟು ಹಳೆಯದಾದ ಸಂಪ್ರದಾಯದಲ್ಲಿ, ಹಲ್ವಾವನ್ನು ದೊಡ್ಡ ಬೋಗಾನಿಯಲ್ಲಿ ತಯಾರಿಸಲಾಗುತ್ತದೆ ಮತ್ತು ಹಣಕಾಸು ಸಚಿವಾಲಯದ ಸಿಬ್ಬಂದಿಗೆ ಇದನ್ನು ನೀಡಲಾಗುತ್ತದೆ. ಸಮಾರಂಭದ ನಂತರ, ಬಜೆಟ್ ತಯಾರಿಕೆಯ ಪ್ರಕ್ರಿಯೆಯ ಭಾಗವಾಗಿರುವ ನೌಕರರು, ಪ್ರಸ್ತುತಿಯ ಮೊದಲು ಯಾವುದೇ ಸೋರಿಕೆಯನ್ನು ತಡೆಗಟ್ಟಲು ಸುಮಾರು 10 ದಿನಗಳ ಕಾಲ ನಾರ್ತ್ ಬ್ಲಾಕ್‌ನಲ್ಲಿಯೇ ನೌಕರರು ಉಳಿದುಕೊಂಡಿರುತ್ತಾರೆ.
ಲೋಕಸಭೆಯಲ್ಲಿ ಹಣಕಾಸು ಸಚಿವರು ಬಜೆಟ್ ಮಂಡಿಸಿದ ನಂತರವೇ ಬಜೆಟ್ ತಯಾರಿಸುವ ಗುಂಪನ್ನು ನೆಲಮಾಳಿಗೆಯಿಂದ ಬಿಡುಗಡೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳು ತಮ್ಮ ಕುಟುಂಬಗಳನ್ನು ಗೊತ್ತುಪಡಿಸಿದ ಮೊಬೈಲ್ ಫೋನ್‌ಗಳ ಮೂಲಕ ಮಾತ್ರ ಸಂಪರ್ಕಿಸಬಹುದು.ಸಮಾರಂಭವು ಬಜೆಟ್ ತಯಾರಿಕೆಯ ಪ್ರಕ್ರಿಯೆಯ ಭಾಗವಾಗಿರುವ ಪ್ರತಿಯೊಬ್ಬ ಸಿಬ್ಬಂದಿ ಸದಸ್ಯರ ಪ್ರಯತ್ನವನ್ನು ಶ್ಲಾಘಿಸುವ ಮಾನ್ಯತೆಯ ವಿಧಾನವಾಗಿಯೂ ಕಾರ್ಯನಿರ್ವಹಿಸುತ್ತದೆ.
ಕೇಂದ್ರ ಬಜೆಟ್ 2020 ಪ್ರಸ್ತುತ ಎನ್‌ಡಿಎ ಸರ್ಕಾರದ ಸತತ ಏಳನೇ ಬಜೆಟ್ ಆಗಿದ್ದು, ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಅನಾವರಣಗೊಳ್ಳಲಿದೆ.