BSNL ಗ್ರಾಹಕರೇ! ಈ ಪ್ಲಾನ್ ಬಳಸಿ ಹಣ ಉಳಿಸಿ

ಬಿಎಸ್‌ಎನ್‌ಎಲ್(BSNL) ರೀಚಾರ್ಜ್: ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಇತರ ಟೆಲಿಕಾಂ ಕಂಪನಿಗಳು ಸುಂಕ ಹೆಚ್ಚಿಸಿದ ಬೆನ್ನಲ್ಲೇ ಸರ್ಕಾರಿ ಟೆಲಿಕಾಂ ಆಪರೇಟರ್ ಕಂಪನಿ ಬಿಎಸ್‌ಎನ್‌ಎಲ್ ಕೂಡ ಶೀಘ್ರದಲ್ಲೇ ತನ್ನ ಸುಂಕವನ್ನು ಹೆಚ್ಚಿಸುವುದಾಗಿ ತಿಳಿಸಿದೆ.  

Last Updated : Dec 3, 2019, 02:11 PM IST
BSNL ಗ್ರಾಹಕರೇ! ಈ ಪ್ಲಾನ್ ಬಳಸಿ ಹಣ ಉಳಿಸಿ title=

ನವದೆಹಲಿ: ಬಿಎಸ್‌ಎನ್‌ಎಲ್(BSNL) ರೀಚಾರ್ಜ್: ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಇತರ ಟೆಲಿಕಾಂ ಕಂಪನಿಗಳು ಸುಂಕ ಹೆಚ್ಚಿಸಿದ ಬೆನ್ನಲ್ಲೇ ಸರ್ಕಾರಿ ಟೆಲಿಕಾಂ ಆಪರೇಟರ್ ಕಂಪನಿ ಬಿಎಸ್‌ಎನ್‌ಎಲ್ ಕೂಡ ಶೀಘ್ರದಲ್ಲೇ ತನ್ನ ಸುಂಕವನ್ನು ಹೆಚ್ಚಿಸುವುದಾಗಿ ತಿಳಿಸಿದೆ. ಆದಾಗ್ಯೂ, ಬಿಎಸ್ಎನ್ಎಲ್ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸುವ ಯಾವುದೇ ಗಡುವನ್ನು ಅಥವಾ ದಿನಾಂಕವನ್ನು ನೀಡಿಲ್ಲ. ಇದರರ್ಥ ಬಿಎಸ್ಎನ್ಎಲ್(BSNL) ಗ್ರಾಹಕರು ಈಗಿರುವ ರೀಚಾರ್ಜ್ ಯೋಜನೆಗಳೊಂದಿಗೆ ತನ್ನ ಪ್ರಿಪೇಯ್ಡ್ ಸಿಮ್ ಅನ್ನು ರೀಚಾರ್ಜ್ ಮಾಡುವುದನ್ನು ಮುಂದುವರಿಸಬಹುದು.

ವೊಡಾಫೋನ್ ಐಡಿಯಾ ಸುಂಕವನ್ನು ಶೇಕಡಾ 40 ರಷ್ಟು ಹೆಚ್ಚಿಸಿದ ಮೊದಲ ಟೆಲಿಕಾಂ ಆಪರೇಟರ್ ಕಂಪನಿಯಾಗಿದೆ. ಭಾರತದ ಉಳಿದ ಟೆಲಿಕಾಂ ವಲಯಗಳು ಸಹ ತನ್ನ ಹಿಂದಿನ ಯೋಜನೆಗಳ ಸುಂಕಗಳಲ್ಲಿ ಭಾರೀ ಏರಿಕೆ ಮಾಡಿವೆ. ವೊಡಾಫೋನ್ ಐಡಿಯಾ ಸುಂಕ ಹೆಚ್ಚಳ ಘೋಷಣೆ ಬಳಿಕ, ಭಾರ್ತಿ ಏರ್‌ಟೆಲ್ ಕೂಡ ಸುಂಕ ಹೆಚ್ಚಳ ಘೋಷಿಸಿತು. ನಂತರ ರಿಲಯನ್ಸ್ ಜಿಯೋ ಕೂಡ ರೀಚಾರ್ಜ್ ಸುಂಕ ಹೆಚ್ಚಿಸಿದೆ. ಪ್ರಿಪೇಯ್ಡ್ ಸಿಮ್ ಕಾರ್ಡ್‌ಗಳಲ್ಲಿ ತಮ್ಮ ಅಸ್ತಿತ್ವದಲ್ಲಿರುವ ರೀಚಾರ್ಜ್ ಯೋಜನೆಗಳ ಸುಂಕವನ್ನು ಹೆಚ್ಚಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಈ ಎಲ್ಲಾ ಕಂಪನಿಗಳು ತಿಳಿಸಿವೆ.

ಬಿಎಸ್ಎನ್ಎಲ್ ಯಾವ ದಿನಾಂಕದಿಂದ ಸುಂಕವನ್ನು ಹೆಚ್ಚಿಸುತ್ತದೆ ಮತ್ತು ಯಾವ ಜನಪ್ರಿಯ ಬಿಎಸ್ಎನ್ಎಲ್ ರೀಚಾರ್ಜ್ ಯೋಜನೆಯನ್ನು ಘೋಷಿಸಲಿದೆ ಎಂಬ ಗುಟ್ಟನ್ನು ಬಿಟ್ಟುಕೊಡದ ಕಾರಣ, ಅದರ ಗ್ರಾಹಕರು ಈಗಿರುವ ರೀಚಾರ್ಜ್ ಯೋಜನೆಗಳೊಂದಿಗೆ ತಮ್ಮ ಪ್ರಿಪೇಯ್ಡ್ ಕಾರ್ಡ್ ಅನ್ನು ರೀಚಾರ್ಜ್ ಮಾಡುವ ಮೂಲಕ ಹಣ ಉಳಿಸಬಹುದಾಗಿದೆ.

ಬಿಎಸ್ಎನ್ಎಲ್ ಗ್ರಾಹಕರು ಆಯ್ಕೆ ಮಾಡಬಹುದಾದ ಬಿಎಸ್ಎನ್ಎಲ್ ರೀಚಾರ್ಜ್ ಯೋಜನೆಗಳು ಇಲ್ಲಿವೆ:

ರೂ. 437 ಪ್ರಿಪೇಯ್ಡ್ ಪ್ಲಾನ್:
ಈ ಪ್ಲಾನ್ ಅಡಿಯಲ್ಲಿ  ದಿನಕ್ಕೆ 1 GB ಡೇಟಾ ಪ್ರಯೋಜನದ ಜೊತೆಗೆ, ಚಂದಾದಾರರಿಗೆ ದಿನಕ್ಕೆ 100 ಎಸ್‌ಎಂಎಸ್ ಉಚಿತ ಮತ್ತು ದಿನಕ್ಕೆ 250 ನಿಮಿಷಗಳ ಉಚಿತ ಕರೆ ಸೌಲಭ್ಯ ದೊರೆಯುತ್ತದೆ. ಈ ಯೋಜನೆಯ ಸಿಂಧುತ್ವವು 90 ದಿನಗಳವರೆಗೆ ಸಿಗಲಿದೆ.

ರೂ. 666 ಪ್ರಿಪೇಯ್ಡ್ ಪ್ಲಾನ್:
ಈ ಪ್ಲಾನ್ ರೀಚಾರ್ಜ್ ಮಾಡಿಸಿದರೆ ದಿನಕ್ಕೆ 2.5 GB ಡೇಟಾ ಪ್ರಯೋಜನದ ಜೊತೆಗೆ ಮುಂಬೈ ಮತ್ತು ದೆಹಲಿಯನ್ನು ಹೊರತುಪಡಿಸಿ ಚಂದಾದಾರರಿಗೆ ದಿನಕ್ಕೆ 100 ಎಸ್‌ಎಂಎಸ್ ಮತ್ತು ದಿನಕ್ಕೆ 250 ನಿಮಿಷಗಳ ಉಚಿತ  ಕರೆ ಸೌಲಭ್ಯ ಸಿಗಲಿದೆ. ಈ ಯೋಜನೆಯ ಸಿಂಧುತ್ವವು 122 ದಿನಗಳವರೆಗೆ ಇರುತ್ತದೆ. 

ರೂ. 997 ಪ್ರಿಪೇಯ್ಡ್ ಪ್ಲಾನ್: 
ಈ ರಿಚಾರ್ಜ್ ಪ್ಲಾನ್ ನಿಮಗೆ ದಿನಕ್ಕೆ 3 GB ಡೇಟಾ ಪ್ರಯೋಜನವನ್ನು ಒದಗಿಸುತ್ತದೆ. ಯೋಜನೆಯ ಸಿಂಧುತ್ವವು 180 ದಿನಗಳವರೆಗೆ ಇರಲಿದ್ದು,  ಚಂದಾದಾರರಿಗೆ ದಿನಕ್ಕೆ 100  ಉಚಿತ ಎಸ್‌ಎಂಎಸ್ ಮತ್ತು ದಿನಕ್ಕೆ 250 ನಿಮಿಷಗಳ ಉಚಿತ ಕರೆ ಸೌಲಭ್ಯ ಸಿಗುತ್ತದೆ.

999 ರೂ. ಪ್ರಿಪೇಯ್ಡ್ ಪ್ಲಾನ್:
ಈ ಯೋಜನೆಯು ಶೂನ್ಯ ಡೇಟಾ ಪ್ರಯೋಜನದೊಂದಿಗೆ 220 ದಿನಗಳವರೆಗೆ ಸಿಂಧುತ್ವವನ್ನು ಹೊಂದಿದೆ. ಚಂದಾದಾರರಿಗೆ ದಿನಕ್ಕೆ 100 ಉಚಿತ ಎಸ್‌ಎಂಎಸ್ ಮತ್ತು  250 ನಿಮಿಷಗಳ ಉಚಿತ ಕರೆ ಸೌಲಭ್ಯ ಒದಗಿಸಲಿದೆ.

1699 ರೂ. ಪ್ರಿಪೇಯ್ಡ್ ಪ್ಲಾನ್:
ಈ ಯೋಜನೆಯು ದಿನಕ್ಕೆ 2 GB ಡೇಟಾ ಪ್ರಯೋಜನವನ್ನು ಒದಗಿಸುತ್ತದೆ. ಈ ಪ್ಲಾನ್ ರಿಚಾರ್ಜ್ ಮಾಡಿಸಿದರೆ 365 ದಿನಗಳವರೆಗೆ ಮಾನ್ಯತೆ ಇರುತ್ತದೆ. ಚಂದಾದಾರರಿಗೆ ದಿನಕ್ಕೆ 100 ಉಚಿತ ಎಸ್‌ಎಂಎಸ್ ಮತ್ತು ದಿನಕ್ಕೆ 250 ನಿಮಿಷಗಳ ಉಚಿತ ಕರೆಯನ್ನು ಒದಗಿಸುತ್ತದೆ.

ರೂ. 1999 ರ ಪ್ರಿಪೇಯ್ಡ್ ಪ್ಲಾನ್:
ಈ ಪ್ಲಾನ್ ರಿಚಾರ್ಜ್ ಮಾಡಿಸುವುದರೊಂದಿಗೆ ದಿನಕ್ಕೆ 3 GB ಡೇಟಾ ಪ್ರಯೋಜನದ ಜೊತೆಗೆ 365 ದಿನಗಳ ಮಾನ್ಯತೆ ಪಡೆಯಬಹುದು. ಇದಲ್ಲದೆ ಗ್ರಾಹಕರಿಗೆ ದಿನಕ್ಕೆ 100 ಉಚಿತ ಎಸ್‌ಎಂಎಸ್ ಮತ್ತು ದಿನಕ್ಕೆ 250 ನಿಮಿಷಗಳ ಉಚಿತ ಕರೆ ಸೌಲಭ್ಯ ಸಿಗಲಿದೆ.

Trending News