Viral Video: ಮದುವೆ ದಿನವೇ ವಧುವಿನ ಅಸಡ್ಡೆ! ಎಲ್ಲರೆದುರು ಪೇಚಿಗೆ ಸಿಲುಕಿದ ಬಡಪಾಯಿ ವರ

Bride Groom Video: ಇದರಲ್ಲಿ ಜಯಮಾಲಾ ನಂತರ ವಧು-ವರರು ಊಟ ಮಾಡಲು ಮೇಜಿನ ಬಳಿ ಹೇಗೆ ಕುಳಿತುಕೊಳ್ಳುತ್ತಾರೆ ಎಂಬುದನ್ನು ನಾವು ನೋಡಬಹುದು. ಆಗ ಕ್ಯಾಮರಾಮನ್ ವಧುವಿಗೆ ವರನಿಗೆ ಆಹಾರವನ್ನು ನೀಡುವಂತೆ ಹೇಳುತ್ತಾನೆ. ಆ ಸಂದರ್ಭದಲ್ಲಿ ವಧುವಿಗೆ ಮದುಮಗನು ತನ್ನ ಕೈಯಿಂದಲೇ ಆಹಾರವನ್ನು ನೀಡುತ್ತಾನೆ. ಇಷ್ಟೆಲ್ಲಾ ನಡೆದ ಬಳಿಕ ಏನಾಯಿತು ಎಂದು ನೋಡಿದರೆ ನೀವು ಶಾಕ್ ಆಗೋದು ಖಂಡಿತ.

Written by - Bhavishya Shetty | Last Updated : Feb 13, 2023, 04:53 PM IST
    • ಮದುವೆಗೆ ಸಂಬಂಧಿಸಿದ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ
    • ಕೆಲವೊಮ್ಮೆ ವಧು ಮತ್ತು ವರರ ನಡುವೆ ಉತ್ತಮ ಬಾಂಧವ್ಯವನ್ನು ಕಾಣಬಹುದು
    • ಸದ್ಯ ಮದುವೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
Viral Video: ಮದುವೆ ದಿನವೇ ವಧುವಿನ ಅಸಡ್ಡೆ! ಎಲ್ಲರೆದುರು ಪೇಚಿಗೆ ಸಿಲುಕಿದ ಬಡಪಾಯಿ ವರ title=
viral wedding video

Bride Groom Video: ಮದುವೆಗೆ ಸಂಬಂಧಿಸಿದ ಹಲವು ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವೊಮ್ಮೆ ವಧು ಮತ್ತು ವರರ ನಡುವೆ ಉತ್ತಮ ಬಾಂಧವ್ಯವನ್ನು ಕಾಣಬಹುದು, ಇನ್ನೂ ಕೆಲವೊಮ್ಮೆ ಕಿಕ್ಕಿರಿದ ಸಭೆಯಲ್ಲಿ ಇಬ್ಬರ ನಡುವೆ ನಡೆಯುವ ಗಲಾಟೆಗಳಾಗಿರಬಹುದು. ಇದೀಗ ಮದುವೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Adani Stock: ಸೋಮವಾರವೂ ಅದಾನಿ ಷೇರುಗಳಲ್ಲಿ ಭಾರೀ ಕುಸಿತ! ಲೋವರ್ ಸರ್ಕ್ಯೂಟ್‍ನಲ್ಲಿ ಹಲವು ಷೇರು ಲಾಕ್!  

ಇದರಲ್ಲಿ ಜಯಮಾಲಾ ನಂತರ ವಧು-ವರರು ಊಟ ಮಾಡಲು ಮೇಜಿನ ಬಳಿ ಹೇಗೆ ಕುಳಿತುಕೊಳ್ಳುತ್ತಾರೆ ಎಂಬುದನ್ನು ನಾವು ನೋಡಬಹುದು. ಆಗ ಕ್ಯಾಮರಾಮನ್ ವಧುವಿಗೆ ವರನಿಗೆ ಆಹಾರವನ್ನು ನೀಡುವಂತೆ ಹೇಳುತ್ತಾನೆ. ಆ ಸಂದರ್ಭದಲ್ಲಿ ವಧುವಿಗೆ ಮದುಮಗನು ತನ್ನ ಕೈಯಿಂದಲೇ ಆಹಾರವನ್ನು ನೀಡುತ್ತಾನೆ. ಇಷ್ಟೆಲ್ಲಾ ನಡೆದ ಬಳಿಕ ಏನಾಯಿತು ಎಂದು ನೋಡಿದರೆ ನೀವು ಶಾಕ್ ಆಗೋದು ಖಂಡಿತ.

 

ಈ ವೀಡಿಯೋ ವೈರಲ್ ಆಗಿದ್ದು, ವಧು-ವರರು ಊಟದ ಮೇಜಿನ ಬಳಿ ವಿಧಿವಿಧಾನಗಳನ್ನು ಪೂರೈಸಿ ಕುಳಿತುಕೊಂಡಿದ್ದಾರೆ. ವರ, ಆಕೆ ತನ್ನ ಕೈಯಿಂದಲೇ ಮೊದಲ ತುತ್ತು ತಿನ್ನಿಸಲಿದ್ದಾಳೆ ಎಂದು ಕಾಯುತ್ತಿದ್ದಾನೆ. ಛಾಯಾಗ್ರಾಹಕರು ಈ ಸುಂದರ ಕ್ಷಣವನ್ನು ಸೆರೆಹಿಡಿಯಲೆಂದು ಕಾದು ಕುಳಿತಿದ್ದಾರೆ. ವರನು ತುಂಬಾ ಸಂತೋಷದಿಂದ ಕಾಣುತ್ತಿದ್ದಾನೆ. ಇದೇ ವೇಳೆ ವರನಿಗೆ ವಧು ಕೈ ತುತ್ತು ತಿನ್ನಿಸುತ್ತಿದ್ದಾಳೆ. ಆದರೆ ಮುಂದೆ ನಡೆದ ಘಟನೆ ನೆನದರೆ ನೋವಾಗುತ್ತದೆ. ಕೈ ತುತ್ತು ನೀಡಿದ ಬಳಿಕ ಆಕೆ ವರನ ಮೇಲೆ ಅಸಡ್ಡೆ ತೋರುತ್ತಾಳೆ.

ಇದನ್ನೂ ಓದಿ: NEET PG 2023ಪರೀಕ್ಷೆ ಮುಂದೂಡಲು ಅಭ್ಯರ್ಥಿಗಳ ಬೇಡಿಕೆ ! ಸರ್ಕಾರ ಕೊಟ್ಟ ಉತ್ತರವೇನು ?

ವರನು ವಧುವಿನ ಈ ಕೆಲಸದಿಂದ ಸಂಪೂರ್ಣವಾಗಿ ಆಘಾತಕ್ಕೊಳಗಾಗುತ್ತಾನೆ. ನೋವಿನ ಹೃದಯದಿಂದ ಕ್ಯಾಮರಾಮನ್ ಅನ್ನು ನೋಡಲಾರಂಭಿಸುತ್ತಾನೆ. ಈ ಮದುವೆಯಲ್ಲಿ ವಧು ಸಂತೋಷವಾಗಿಲ್ಲ ಎಂದು ತೋರುತ್ತದೆ. ಈ ವೀಡಿಯೊವನ್ನು memecentral.teb ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News