ಎರಡು-ಮೂರು ದಿನಗಳಲ್ಲಿ ರೈಲು ನಿಲ್ದಾಣಗಳ ಟಿಕೆಟ್ ಕೌಂಟರ್‌ಗಳಲ್ಲಿ ಬುಕಿಂಗ್ ಆರಂಭ

ಶೀಘ್ರದಲ್ಲೇ ಹೆಚ್ಚಿನ ರೈಲುಗಳ ಸಂಚಾರ ಪುನರಾರಂಭವಾಗಲಿದೆ  ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಘೋಷಿಸಿದರು, ಕರೋನವೈರಸ್ ಕಾರಣದಿಂದಾಗಿ ವಾರಗಳ ಲಾಕ್ ಡೌನ್ ನಂತರ ದೇಶವನ್ನು ಸಾಮಾನ್ಯ ಸ್ಥಿತಿಗೆ ಕೊಂಡೊಯ್ಯುವ ಸಮಯ ಇದಾಗಿದೆ ಎಂದು ಹೇಳಿದರು.

Last Updated : May 21, 2020, 04:38 PM IST
ಎರಡು-ಮೂರು ದಿನಗಳಲ್ಲಿ ರೈಲು ನಿಲ್ದಾಣಗಳ ಟಿಕೆಟ್ ಕೌಂಟರ್‌ಗಳಲ್ಲಿ ಬುಕಿಂಗ್ ಆರಂಭ title=
ಸಾಂದರ್ಭಿಕ ಚಿತ್ರ

ನವದೆಹಲಿ: ಶೀಘ್ರದಲ್ಲೇ ಹೆಚ್ಚಿನ ರೈಲುಗಳ ಸಂಚಾರ ಪುನರಾರಂಭವಾಗಲಿದೆ  ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಘೋಷಿಸಿದರು, ಕರೋನವೈರಸ್ ಕಾರಣದಿಂದಾಗಿ ವಾರಗಳ ಲಾಕ್ ಡೌನ್ ನಂತರ ದೇಶವನ್ನು ಸಾಮಾನ್ಯ ಸ್ಥಿತಿಗೆ ಕೊಂಡೊಯ್ಯುವ ಸಮಯ ಇದಾಗಿದೆ ಎಂದು ಹೇಳಿದರು.

ಹೆಚ್ಚಿನ ರೈಲುಗಳ ಪುನರಾರಂಭವನ್ನು ಪ್ರಕಟಿಸುತ್ತದೆ. ಭಾರತವನ್ನು ಸಾಮಾನ್ಯ ಸ್ಥಿತಿಗೆ ಕೊಂಡೊಯ್ಯುವ ಸಮಯ ಇದು ”ಎಂದು ಪಿಯುಷ್ ಗೋಯಲ್ ಪಿಟಿಐಗೆ ತಿಳಿಸಿದ್ದಾರೆ. ರೈಲ್ವೆ ನಿಲ್ದಾಣಗಳ ಟಿಕೆಟ್ ಕೌಂಟರ್‌ಗಳಲ್ಲಿ ಶೀಘ್ರದಲ್ಲೇ ಬುಕಿಂಗ್ ಮಾಡಬಹುದು ಎಂದು ಅವರು ಹೇಳಿದರು.ಮುಂದಿನ ಎರಡು-ಮೂರು ದಿನಗಳಲ್ಲಿ ನಿಲ್ದಾಣಗಳ ಟಿಕೆಟ್ ಕೌಂಟರ್‌ಗಳಲ್ಲಿ ಬುಕಿಂಗ್ ಪುನರಾರಂಭಗೊಳ್ಳಲಿದೆ. ಅಧ್ಯಯನ ನಡೆಸುತ್ತಿದ್ದೇವೆ, ಪ್ರೋಟೋಕಾಲ್ ಅನ್ನು ನಾವು ಸಿದ್ದಪಡಿಸುತ್ತಿದ್ದೇವೆ ”ಎಂದು ಸಚಿವರು ಹೇಳಿದರು.

ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸುವಲ್ಲಿ ರೈಲ್ವೆಗೆ ಸಹಕಾರ ನೀಡಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ರೈಲ್ವೆ ಸಚಿವರು ಶ್ಲಾಘಿಸಿದರು. ಇದೇ ವೇಳೆ ಜಾರ್ಖಂಡ್ ಮತ್ತು ಪಶ್ಚಿಮ್ ಬಂಗಾಳವನ್ನು ಟೀಕಿಸಿದರು. ಬುಧವಾರದವರೆಗೆ 279 ಶ್ರಮಿಕ್ ರೈಲುಗಳ ಮೂಲಕ ಐದು ಲಕ್ಷ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಸಿಕ್ಕಿಬಿದ್ದ ಪ್ರವಾಸಿಗರನ್ನು ತಮ್ಮ ಸ್ಥಳಗಳಿಗೆ ಸಾಗಿಸಲಾಯಿತು.

ಜೂನ್ 1 ರಿಂದ 200 ಹೊಸ ರೈಲುಗಳನ್ನು ಓಡಿಸುವುದಾಗಿ ರೈಲ್ವೆ ಇಲಾಖೆ ಘೋಷಿಸಿತು. ಈ ರೈಲುಗಳು ಶ್ರಮಿಕ್ ವಿಶೇಷ ರೈಲುಗಳಿಗೆ ಹೆಚ್ಚುವರಿಯಾಗಿರುತ್ತವೆ, ಈ  ಸಂಖ್ಯೆಯನ್ನು ಸಹ ಹೆಚ್ಚಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

Trending News