ಬಾಲಿವುಡ್ ನಟ ಪರೇಶ್ ರಾವಲ್ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅಧ್ಯಕ್ಷರಾಗಿ ನೇಮಕ

ಬಾಲಿವುಡ್ ನಟ ಮತ್ತು ಬಿಜೆಪಿ ಮಾಜಿ ಸಂಸದ ಪರೇಶ್ ರಾವಲ್ ಅವರನ್ನು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅಧ್ಯಕ್ಷರನ್ನಾಗಿ ಗುರುವಾರ ನೇಮಿಸಲಾಯಿತು.ಅವರು ಹಂಗಾಮಿ ಚೇರ್ಮನ್ ಅರ್ಜುನ್ ಡಿಯೋ ಚರಣ್ ಅವರ ನಂತರ ಅಧಿಕಾರ ಸ್ವೀಕರಿಸಲಿದ್ದಾರೆ.

Last Updated : Sep 10, 2020, 05:22 PM IST
ಬಾಲಿವುಡ್ ನಟ ಪರೇಶ್ ರಾವಲ್ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅಧ್ಯಕ್ಷರಾಗಿ ನೇಮಕ  title=

ನವದೆಹಲಿ: ಬಾಲಿವುಡ್ ನಟ ಮತ್ತು ಬಿಜೆಪಿ ಮಾಜಿ ಸಂಸದ ಪರೇಶ್ ರಾವಲ್ ಅವರನ್ನು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅಧ್ಯಕ್ಷರನ್ನಾಗಿ ಗುರುವಾರ ನೇಮಿಸಲಾಯಿತು.ಅವರು ಹಂಗಾಮಿ ಚೇರ್ಮನ್ ಅರ್ಜುನ್ ಡಿಯೋ ಚರಣ್ ಅವರ ನಂತರ ಅಧಿಕಾರ ಸ್ವೀಕರಿಸಲಿದ್ದಾರೆ.

ರಾವಲ್ ಅವರನ್ನು ಎನ್‌ಎಸ್‌ಡಿ ಮುಖ್ಯಸ್ಥರನ್ನಾಗಿ ಅಧ್ಯಕ್ಷ ರಾಮ್ ನಾಥ್ ಕೋವಿಂದ್ ನೇಮಕ ಮಾಡಿದ್ದಾರೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಟ್ವೀಟ್ ಮಾಡಿದ್ದಾರೆ.

65 ವರ್ಷದ ಪರೇಶ್ ರಾವಲ್ ಅವರು ಮೂರು ದಶಕಗಳಿಗಿಂತ ಹೆಚ್ಚು ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ ಮತ್ತು ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2014 ರಲ್ಲಿ ಮನರಂಜನಾ ಉದ್ಯಮಕ್ಕೆ ನೀಡಿದ ಕೊಡುಗೆಗಾಗಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಅವರಿಗೆ ಪ್ರದಾನ ಮಾಡಲಾಗಿದೆ.

ಅವರು 2014 ರಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಅಹಮದಾಬಾದ್ ಪೂರ್ವದಿಂದ ಲೋಕಸಭೆಗೆ ಆಯ್ಕೆಯಾದರು. ಆದಾಗ್ಯೂ, ಅವರು 2019 ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ.

Trending News