ಬಿಜೆಪಿಯ ಪ್ಲಾನ್ 'ಬಿ': ಎನ್‌ಸಿಪಿ/ಶಿವಸೇನೆ ಬೆಂಬಲವಿಲ್ಲದೆ ಸರ್ಕಾರ ರಚನೆಗೆ ಸಜ್ಜು!

ಜೀ ಮೀಡಿಯಾದ ಚಾನೆಲ್ 24 ತಾಸ್‌ನ ಡೆಬಿಟ್ ಶೋನಲ್ಲಿ, ಕಾಕಡೆ ಅವರು ಶಿವಸೇನೆಯ 56 ಶಾಸಕರಲ್ಲಿ 45 ಮಂದಿ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಬಿಜೆಪಿಗೆ ಬೆಂಬಲ ನೀಡಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.

Last Updated : Oct 29, 2019, 12:09 PM IST
ಬಿಜೆಪಿಯ ಪ್ಲಾನ್ 'ಬಿ': ಎನ್‌ಸಿಪಿ/ಶಿವಸೇನೆ ಬೆಂಬಲವಿಲ್ಲದೆ ಸರ್ಕಾರ ರಚನೆಗೆ ಸಜ್ಜು! title=

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ಕಳೆದ ಎರಡೂವರೆ ವರ್ಷಗಳಿಂದ ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರಚಿಸಲು ಬಿಜೆಪಿ ಯೋಜನೆ 'ಬಿ' ಸಿದ್ಧಪಡಿಸಿದೆ. ಶಿವಸೇನೆಯ 56 ಶಾಸಕರಲ್ಲಿ 45 ಮಂದಿ ಪ್ರತ್ಯೇಕ ಪಕ್ಷ ರಚಿಸುವ ಮೂಲಕ ಬಿಜೆಪಿಯನ್ನು ಬೆಂಬಲಿಸಲು ಸಿದ್ಧರಿದ್ದಾರೆ ಎಂದು ಬಿಜೆಪಿಯ ರಾಜ್ಯಸಭಾ ಸಂಸದ ಸಂಜಯ್ ಕಾಕಡೆ ಹೇಳಿದ್ದಾರೆ.

ಜೀ ಮೀಡಿಯಾದ ಚಾನೆಲ್ 24 ತಾಸ್‌ನ ಡೆಬಿಟ್ ಶೋನಲ್ಲಿ, ಕಾಕಡೆ ಅವರು ಶಿವಸೇನೆಯ 56 ಶಾಸಕರಲ್ಲಿ 45 ಮಂದಿ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಬಿಜೆಪಿಗೆ ಬೆಂಬಲ ನೀಡಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ಬಿಜೆಪಿಯ 'ಪ್ಲ್ಯಾನ್ ಬಿ' ಅಡಿಯಲ್ಲಿ ಒತ್ತಡ ರಾಜಕಾರಣವಾಗಿ ನೋಡಲಾಗುತ್ತಿದೆ.

ಪಟ್ಟು ಸಡಿಲಿಸದ ಶಿವಸೇನೆ, ತಲೆಬಾಗದ ಬಿಜೆಪಿ: 
ಒಂದೆಡೆ ಸಿಎಂ ಪಟ್ಟ, 50-50 ಸೂತ್ರಕ್ಕೆ ಶಿವಸೇನೆ ಪಟ್ಟು ಹಿಡಿದಿದೆ. ಇನ್ನೊಂದೆಡೆ ಶಿವಸೇನೆ ಷರತ್ತುಗಳಿಗೆ ತಲೆಬಾಗದಿರಲು ಬಿಜೆಪಿ ನಿರ್ಧರಿಸಿದೆ. ಇದಕ್ಕಾಗಿ ಅಕ್ಟೋಬರ್ 31 ರವರೆಗೆ ಶಿವಸೇನೆಗೆ ಗಡುವು ನೀಡಲಾಗಿದೆ. ಈ ಸಮಯ ಮಿತಿಯೊಳಗೆ ಶಿವಸೇನೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಒಪ್ಪದಿದ್ದರೆ, ಬಿಜೆಪಿ ಪ್ಲಾನ್ 'ಬಿ'ಗೆ ತಯಾರಿ ನಡೆಸಿದೆ.

ಪ್ಲಾನ್ 'ಬಿ' ಅಡಿಯಲ್ಲಿ, ಸರ್ಕಾರ ರಚಿಸುವ ಹಕ್ಕು ಮಂಡಿಸಲಿರುವ ಬಿಜೆಪಿ, ಶಿವಸೇನೆ ಇಲ್ಲದೆ ರಾಜ್ಯಪಾಲರ ಬಳಿಗೆ ಹೋಗಲು ನಿರ್ಧರಿಸಿದೆ. ಸಣ್ಣ ಪಕ್ಷಗಳು ಮತ್ತು ಸ್ವತಂತ್ರರ ಬೆಂಬಲ ಪತ್ರವನ್ನೂ ಅವರು ತಮ್ಮೊಂದಿಗೆ ಕೊಂಡೊಯ್ಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯು, ದೇವೇಂದ್ರ ಫಡ್ನವೀಸ್ ಅವರ ನೇತೃತ್ವದಲ್ಲಿ ಸರ್ಕಾರ ರಚಿಸಲು ತಯಾರಿ ನಡೆಸಿದ್ದು, ಫಡ್ನವೀಸ್ ಅವರು ಬಿಜೆಪಿ ಶಾಸಕರು ಮತ್ತು ಸ್ವತಂತ್ರ ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಹಸ್ತಾಂತರಿಸುವ ಮೂಲಕ ಸರ್ಕಾರ ರಚಿಸುವ ಹಕ್ಕನ್ನು ಪಡೆಯಲು ಸಿದ್ಧರಾಗಿದ್ದಾರೆ.

ದೇವೇಂದ್ರ ಫಡ್ನವೀಸ್ ಅವರು ಶಿವಸೇನೆ ಅಥವಾ ಶಿವಸೇನೆಯ ಸಹಕಾರವಿಲ್ಲದಿದ್ದರೂ ಸಹ ಸರ್ಕಾರ ರಚಿಸಿ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವ ಪಣ ತೊಟ್ಟಿದ್ದಾರೆ ಎನ್ನಲಾಗಿದೆ. ಅವರ ಜೊತೆಗೆ ಇತರ ಕೆಲವು ಹಿರಿಯ ಬಿಜೆಪಿ ನಾಯಕರು ಮತ್ತು ಮೈತ್ರಿ ಸದಸ್ಯರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲರು ಮುಖ್ಯಮಂತ್ರಿಗೆ ಬಹುಮತ ಸಾಬೀತು ಪಡಿಸಲು ಸಮಯ ನಿಗದಿಪಡಿಸಿದಾಗ ಮತ್ತೆ ಶಿವಸೇನೆಯೊಂದಿಗೆ ಮಾತಕತೆ ನಡೆಯುವ ಸಾಧ್ಯತೆಯಿದೆ. ಒಂದೊಮ್ಮೆ ಆಗಲೂ ಶಿವಸೇನೆ ಒಪ್ಪದಿದ್ದರೆ, ಶಿವಸೇನೆ ಬೆಂಬಲವಿಲ್ಲದೆಯೂ ಸರ್ಕಾರ ರಚಿಸುವ ಬಗ್ಗೆ ಬಿಜೆಪಿ ಪ್ರಯತ್ನ ನಡೆಸಿದೆ. ಏತನ್ಮಧ್ಯೆ, ಎನ್‌ಸಿಪಿ ಕೂಡ  ಒಂದು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಇದರಲ್ಲಿ ಎನ್‌ಸಿಪಿ ಗೌರವಾನ್ವಿತ ವಿಷಯದ ಮೇಲೆ ಮತದಾನವನ್ನು ಬಹಿಷ್ಕರಿಸಿದರೆ, ಬಿಜೆಪಿ ತನ್ನ ಬಹುಮತವನ್ನು ಸುಲಭವಾಗಿ ಸಾಬೀತುಪಡಿಸುತ್ತದೆ.

ಅಂದರೆ, ಎನ್‌ಸಿಪಿಯ 54 ಶಾಸಕರು ಬಹುಮತ ಸಾಬೀತುಪಡಿಸುವ ವೇಳೆ ವಿಧಾನಸಭೆಯಿಂದ ಹೊರನಡೆದರೆ, 289 ಸದಸ್ಯರ ವಿಧಾನಸಭೆಯ ಸಾಮರ್ಥ್ಯ 235 ಆಗಿ ಉಳಿಯಲಿದೆ. ಅದರ ಪ್ರಕಾರ, ಬಹುಮತದ ಸಂಖ್ಯೆ 118 ಆಗಿರುತ್ತದೆ. ಇದರಲ್ಲಿ 105 ಬಿಜೆಪಿ ಶಾಸಕರೊಂದಿಗೆ ಇತರ ಪಕ್ಷಗಳು ಮತ್ತು ಪಕ್ಷೇತರ ಶಾಸಕರ ಬೆಂಬಲ ಪಡೆಯುವ ಮೂಲಕ ಬಿಜೆಪಿ ಬಹುಮತ ಸಾಬೀತು ಪಡಿಸಬಹುದಾಗಿದೆ. ಇಲ್ಲಿಯವರೆಗೆ, ರಾಜ್ಯದ 15 ಸ್ವತಂತ್ರ ಶಾಸಕರ ಬೆಂಬಲದೊಂದಿಗೆ, ಬಿಜೆಪಿ ಒಟ್ಟು 120 ಶಾಸಕರ ಬಲ ಹೊಂದಿರುವುದಾಗಿ ಹೇಳಿಕೊಂಡಿದೆ. ಬಿಜೆಪಿ ತನ್ನ ಪರವಾಗಿ ಬೆಂಬಲ ಪತ್ರಗಳನ್ನು ಸಹ ಸಂಗ್ರಹಿಸಲು ಪ್ರಾರಂಭಿಸಿದೆ.

ಬಹುಮತ ಸಾಬೀತುಪಡಿಸಿದ ನಂತರ ಶಿವಸೇನೆಗೆ ಸರ್ಕಾರದಲ್ಲಿ ಪ್ರವೇಶ ನೀಡಲಾಗುವುದು. ಆದರೆ ಶಿವಸೇನೆಯ ಷರತ್ತುಗಳಿಗೆ ಸಮ್ಮತಿ ನೀಡುವ ಸಾಧ್ಯತೆ ವಿರಳವೆಂದೇ ಹೇಳಬಹುದು. ಆದಾಗ್ಯೂ, ಶಿವಸೇನೆ ತನ್ನ ಬಲವನ್ನು ಆಧರಿಸಿ ಸರ್ಕಾರದಲ್ಲಿ ಸ್ಥಾನ ಪಡೆಯಲಿದೆ. ಆದರೆ, ಶಿವಸೇನೆಗೆ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನ ನೀಡುವುದಿಲ್ಲ. ಬದಲಿಗೆ ಮೂರನೇ ಒಂದು ಭಾಗದಷ್ಟು ಸಚಿವ ಸ್ಥಾನ ನೀಡುವ ಸಾಧ್ಯತೆಗಳಿವೆ.

ಬಿಜೆಪಿಯ ಪ್ಲಾನ್ 'ಬಿ'ಯಿಂದಾಗಿ ಅಮಿತ್ ಶಾ ಬುಧವಾರ ಮುಂಬೈಗೆ ಬರುವ ಯೋಜನೆಯನ್ನು ರದ್ದುಪಡಿಸಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ. ಶಾ ಬದಲಿಗೆ  ಜೆಪಿ ನಡ್ಡಾ ಮತ್ತು ಭೂಪೇಂದ್ರ ಯಾದವ್ ಮುಂಬೈಗೆ ಬರಲಿದ್ದಾರೆ. ಇಲ್ಲಿಯವರೆಗೆ ಅವರು ಉದ್ಧವ್ ಠಾಕ್ರೆ ಅವರೊಂದಿಗೆ ಯಾವುದೇ ಸಭೆಯನ್ನು ನಡೆಸುವ ಬಗ್ಗೆ ಪ್ರಸ್ತಾಪಿಸಿಲ್ಲ. ಚುನಾವಣಾ ಫಲಿತಾಂಶ ಬಂದಾಗಿನಿಂದ ಉಭಯ ಪಕ್ಷಗಳ ನಡುವಿನ ಮಾತುಕತೆಗಳು ನಿರೀಕ್ಷೆ ಮಟ್ಟದಲ್ಲಿ ನಡೆದಿಲ್ಲ.

ಈಗ ಬಿಜೆಪಿಯ ಈ ಯೋಜನೆಯ ನಂತರ, ಶಿವಸೇನೆ ಸರ್ಕಾರದಲ್ಲಿ ಇರಬೇಕೇ ಅಥವಾ ಬೇಡವೇ ಎಂಬ ಬಗ್ಗೆಯೇ ಗೊಂದಲ ಉಂಟಾಗಿದೆ. ಬಿಜೆಪಿಯ ಈ ಯೋಜನೆಯ ಬಗ್ಗೆ ಶಿವಸೇನೆಗೆ ಸುಳಿವು ಸಿಕ್ಕಿದ್ದು, ಪಕ್ಷದಲ್ಲಿ ಒಂದು ರೀತಿಯ ಭೀತಿ ಉಂಟಾಗಿದೆ. 

ಎನ್‌ಸಿಪಿ ವಕ್ತಾರ ನವಾಬ್ ಮಿಲ್ಲಿಕ್ ಅವರು ರಾಜ್ಯದ ರಾಜಕೀಯದಲ್ಲಿ ಹೊಸ ರಾಜಕೀಯ ಸಂಕೇತಗಳನ್ನು ನೀಡಿದ್ದಾರೆ. ಎನ್‌ಸಿಪಿ ಪ್ರಕಾರ, ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವಿನ ಸಂವಹನದ ಕೊರತೆಯಿಂದಾಗಿ ಮತ್ತು ಬಿಜೆಪಿಯ ಸದನದಲ್ಲಿ ಬಹುಮತವನ್ನು ಸಾಬೀತುಪಡಿಸುವ ಸಂದರ್ಭಗಳಲ್ಲಿ ರಾಜಕೀಯ ತಂತ್ರಗಳು ನಡೆಯಲಿವೆ.

"ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಪ್ರಕ್ರಿಯೆಯು ಶಿವಸೇನೆಯ ರಾಜಕೀಯ ಕಾರ್ಯತಂತ್ರವನ್ನು ನೋಡುತ್ತದೆ. ಆಗ ಮಾತ್ರ ಸದನದ ರಾಜಕೀಯ ಪರಿಸ್ಥಿತಿಯ ನಂತರ ಎನ್‌ಸಿಪಿ ತನ್ನ ಮುಂದಿನ ಹೊಸ ರಾಜಕೀಯ ಕಾರ್ಯತಂತ್ರವನ್ನು ನಿರ್ಧರಿಸುತ್ತದೆ" ಎಂದು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಹೇಳಿದರು.

Trending News