ಬಿಜೆಪಿ ಬಂಗಾಳಿ ಮತ್ತು ಬಂಗಾಳಿಯೇತರರ ನಡುವೆ ಬಿರುಕು ಮೂಡಿಸಲು ಯತ್ನಿಸುತ್ತಿದೆ- ಮಮತಾ ಬ್ಯಾನರ್ಜೀ

ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಬಂಗಾಳಿ ಮತ್ತು ಬಂಗಾಳಿಯೇತರ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

Last Updated : May 30, 2019, 07:46 PM IST
ಬಿಜೆಪಿ ಬಂಗಾಳಿ ಮತ್ತು ಬಂಗಾಳಿಯೇತರರ ನಡುವೆ ಬಿರುಕು ಮೂಡಿಸಲು ಯತ್ನಿಸುತ್ತಿದೆ- ಮಮತಾ ಬ್ಯಾನರ್ಜೀ  title=
file photo

ನವದೆಹಲಿ: ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಬಂಗಾಳಿ ಮತ್ತು ಬಂಗಾಳಿಯೇತರ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಬಿಜೆಪಿಯ ಗೂಂಡಾಗಳಿಂದ 400 ಬಂಗಾಳಿ ಕುಟುಂಬಗಳು ನೆಲಸಮಗೊಂಡು ನಿರಾಶ್ರಿತರಾಗಿದ್ದಾರೆ ಎಂದು ಬ್ಯಾನರ್ಜಿ ಬಿಜೆಪಿ ವಿರುದ್ಧ ಕಿಡಿ ಕಾರಿ ಗುರುವಾರದಂದು ಸಾಯಂಕಾಲ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ನರೇಂದ್ರ ಮೋದಿಯವರ ಶಪಥ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಾಗಿದ್ದ ಸಿಎಂ ಮಮತಾ ಬ್ಯಾನರ್ಜೀ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು.

ಕಳೆದ ವಾರ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ  ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಕಾರ್ಯಕರ್ತರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಪ್ರತಿಭಟಿಸಲು ಅವರು ಉತ್ತರ 24 ಪರಗಣಗಳಿಗೆ ಪ್ರವಾಸ ಮಾಡುವುದಾಗಿ ಬುಧುವಾರ ಘೋಷಿಸಿದ್ದರು. ಮಂಗಳವಾರದಂದು ಪ್ರಧಾನಿ ಮೋದಿ ಅವರ ಶಪಥಕ್ಕೆ ಆಹ್ವಾನವನ್ನು ಸ್ವೀಕರಿಸಿದ ನಂತರ, ಮಮತಾ ಅವರು ಇತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ನಂತರ ಸಂವಿಧಾನಾತ್ಮಕ ಸೌಜನ್ಯಕ್ಕಾಗಿ ಭಾಗವಹಿಸುವುದಾಗಿ ಹೇಳಿದ್ದರು. 

ಆದರೆ ಇದಾದ ನಂತರ  "ಅಭಿನಂದನೆಗಳು, ಪ್ರಧಾನಿ ನರೇಂದ್ರ ಮೋದಿಜಿ. 'ಸಾಂವಿಧಾನಿಕ ಆಮಂತ್ರಣವನ್ನು' ಸ್ವೀಕರಿಸಿ ಪ್ರಮಾಣ ವಚನ ಸಮಾರಂಭದಲ್ಲಿ ಹಾಜರಾಗುವುದು ನನ್ನ ಯೋಜನೆಯಾಗಿತ್ತು. ಆದರೆ, ಕಳೆದ ಒಂದು ಘಂಟೆಯಲ್ಲಿ, ಬಂಗಾಳದಲ್ಲಿ ರಾಜಕೀಯ ಹಿಂಸಾಚಾರದಲ್ಲಿ 54 ಜನರನ್ನು ಕೊಲೆ ಮಾಡಲಾಗಿದೆ ಎಂದು ಬಿಜೆಪಿ ಹೇಳಿದೆ ಎಂದು ಮಾಧ್ಯಮ ವರದಿಗಳನ್ನು ನಾನು ನೋಡಿದ್ದೇನೆ" ಎಂದು ಹೇಳಿ ಪ್ರಮಾಣ ವಚನ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದರು.

Trending News