ನವದೆಹಲಿ: ಕಾಂಗ್ರೆಸ್ ಪಕ್ಷವು ಒಂದುಕಡೆ ಭಾರತದ ಜನರನ್ನು ಒಗ್ಗೂಡಿಸುತ್ತಿದ್ದರೆ ಇನ್ನೊಂದೆಡೆಗೆ ಬಿಜೆಪಿ, ಆರ್.ಎಸ್.ಎಸ್ ಸಂಘಟನೆಯು ದೇಶವನ್ನು ವಿಭಜಿಸಿ ದ್ವೇಷವನ್ನು ಹರಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಬರ್ಲಿನ್ ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ "ಕಾಂಗ್ರೆಸ್ ನ ವಿಚಾರವಾದ ವಿವಿಧತೆಯಲ್ಲಿ ಏಕತೆಯು ಗುರುನಾನಕರಿಂದ ಉತ್ತೇಜನ ಪಡೆದಿದೆ ಭಾಷಣದುದ್ದಕ್ಕೂ ಬಿಜೆಪಿ ವಿರುದ್ಧ ಕಿಡಿ ಕಾರಿದ ಅವರು "ಉದ್ದುದ್ದ ಭಾಷಣಗಳನ್ನು ಮಾಡುವುದರ ಮೂಲಕ ದ್ವೇಷವನ್ನು ಪ್ರಸರಿಸಲಾಗುತ್ತಿದೆ.ರೈತರು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ ಯುವಕರಿಗೆ ಭವಿಷ್ಯವನ್ನು ಕಟ್ಟಿಕೊಳ್ಳಲಾಗುತ್ತಿಲ್ಲ" ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಎಲ್ಲರಿಗೂ ಸೇರಿರುವಂತದ್ದು, ಅದು ಎಲ್ಲರ ಪರವಾಗಿಯೂ ಕೆಲಸ ಮಾಡುತ್ತದೆ ಮತ್ತು ವಿವಿಧತೆಯಲ್ಲಿ ಏಕತೆ ಹರಡುವಂತ ಕಾರ್ಯವನ್ನು ಮಾಡುತ್ತಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.